ಮೊಳಕಾಲ್ಮೂರು: ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾದ್ಯಮೇಳಗಳೊಂದಿಗೆ ಜೋಡೆತ್ತಿನ ಗಾಡಿಗಳೊಂದಿಗೆ ತಾಲೂಕಿನ ಹಿರೇಕೆರೆಹಳ್ಳಿ ಮ್ಯಾಸರಹಟ್ಟಿ ಗ್ರಾಮದ ಬುಡಕಟ್ಟು ಸಂಸ್ಕೃತಿಯ ಮ್ಯಾಸಬೇಡರ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಮೂರ್ತಿಯನ್ನು ಆಂಧ್ರದ ಭೂಪಸಮುದ್ರದ ಬಳಿಯ ನದಿಯಲ್ಲಿ ವಿಶೇಷ ಗಂಗಾಪೂಜೆಗೆ ಕರೆದೊಯ್ಯಲಾಯಿತು.
ತಾಲೂಕಿನ ಹಿರೇಕೆರೆಹಳ್ಳಿ ಮ್ಯಾಸರಹಟ್ಟಿ ಗ್ರಾಮದ ಮ್ಯಾಸಬೇಡರು ತಮ್ಮ ಆರಾಧ್ಯ ದೇವರಾದ ಶ್ರೀ ಗಾದ್ರಿಪಾಲನಾಯಕ ಸ್ವಾಮಿಗೆ ತಮ್ಮ ಧಾರ್ಮಿಕ ವಿಧಿ ವಿಧಾನಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಗ್ರಾದ್ರಿಪಾಲನಾಯಕ ದೇವರ ಮನೆತನದ ಕುಟುಂಬದ ಪೂಜಾರಿಯು ತಮ್ಮ ಆರಾಧ್ಯ ದೈವ ಶ್ರೀಗಾದ್ರಿಪಾಲನಾಯಕ ಸ್ವಾಮಿಯ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಪಾದಯಾತ್ರೆಯ ಮೂಲಕ ಪ್ರಯಾಣ ಬೆಳೆಸಲಾಯಿತು.
ಶ್ರೀ ಸ್ವಾಮಿಯ ಮೂರ್ತಿಯನ್ನು ಹೊತ್ತ ಪೂಜಾರಿಯ ಜೊತೆಗೆ ಈ ಗಾದ್ರಿಪಾಲನಾಯಕನ ಮನೆತನದವರು ಹಿರಿಯರು ಹಾಗೂ ಯುವಕರು ಪ್ರಯಾಣ ಮಾಡಲು ಉರಿದುಂಬಿಸುತ್ತಾ ಸಾಗಿದರು. ಈ ಮನೆತನದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ತಮ್ಮ ದೇವರೊಂದಿಗೆ ಎತ್ತಿನಗಾಡಿಗಳಲ್ಲಿ ಆಂದ್ರದ ಭೂಪಸಮುದ್ರದ ಬಳಿಯ ನದಿಯ ಕಡೆ ಪ್ರಯಾಣ ಬೆಳೆಸಿದರು. ತಾಲೂಕಿನ ಹಿರೇಕೆರೆಹಳ್ಳಿ ಯಿಂದ ಆಂದ್ರದ ಭೂಪಸಮುದ್ರ ದ ನದಿಯವರೆಗೂ ಪ್ರಯಾಣ ಬೆಳೆಸಿ ಈ ನದಿಯ ದಂಡೆಯಲ್ಲಿ ರಾತ್ರಿ ತಂಗಿದ್ದು, ಬೆಳಗಿನ ವೇಳೆ ತಮ್ಮ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಮೂರ್ತಿಗೆ ಗಂಗಾ ಸ್ನಾನ ನೆರವೇರಿಸಿ ಹೊಂಬಾಳೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರಗೊಳಿಸಿ ಬುಡಕಟ್ಟು ಸಂಸ್ಕೃತಿಯ ಮ್ಯಾಸಬೇಡರ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುವುದು.
ಗುಗ್ಗರಿ ಹಬ್ಬವನ್ನು ನೆರವೇರಿಸಿ ಅನ್ನದಾಸೋಹ ನೆರವೇರಿಸಲಾಗುವುದು. ಈ ಪೂಜಾ ಕಾರ್ಯಕ್ಕೆ ತೆರಳಿದ ನೂರಾರು ಭಕ್ತರು ಭಕ್ತಿಭಾವದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಶ್ರೀ ಸ್ವಾಮಿಯ ಪೂಜಾ ಕಾರ್ಯದ ನಂತರ ಆಂಧ್ರದ ಭೂಪಸಮುದ್ರದ ನದಿಯಿಂದ ರಾಯದುರ್ಗ ಮತ್ತು ರಾಜ್ಯದ ಮೊಳಕಾಲ್ಮೂರು ಪಟ್ಟಣದ ಮಾರ್ಗವಾಗಿ ತಮ್ಮ ಸ್ವಗ್ರಾಮವಾದ ಹಿರೇಕೆರೆಹಳ್ಳಿ ಮ್ಯಾಸರಹಟ್ಟಿ ಗ್ರಾಮಕ್ಕೆ ಹಿಂದಿರುಗಲಾಗುವುದು. ತಮ್ಮ ಗ್ರಾಮದಲ್ಲಿ ಶ್ರೀ ಸ್ವಾಮಿಯನ್ನು ಗುಡಿದುಂಬಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ಅನ್ನದಾಸೋಹವನ್ನು ನೆರವೇರಿಸಲಾಗುವುದು. ಶ್ರೀಗಾದ್ರಿಪಾಲನಾಯಕ ಸ್ವಾಮಿಯ ಬಹುತೇಕ ಭಕ್ತರು ಭಕ್ತಿ ಭಾವದೊಂದಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲಿದ್ದಾರೆ.
ಶ್ರೀ ಸ್ವಾಮಿಯನ್ನು ಆಂಧ್ರದ ಭೂಪಸಮುದ್ರದ ಬಳಿಯ ನದಿಯಲ್ಲಿ ಪೂಜೆ ಸಲ್ಲಿಸಲು ಪೂಜಾರಿ ದಾಸರಿ ಪಾಲಯ್ಯ, ಮಲ್ಲಯ್ಯ, ಏಲಕ್ಕಿ ಬೋರಯ್ಯ, ಯಜಮಾನ್ ಪಾಲಯ್ಯ, ಬೋಸಯ್ಯ, ಪ್ರಹ್ಲಾದ, ರಾಬುಲು ಪಾಲಯ್ಯ, ಮಹೇಶ್, ಕುಬಿ, ನಾಗರಾಜ್, ಸಂತೋಷ್ ಇದ್ದರು.