Advertisement

ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣ: ಹೊರ ರಾಜ್ಯಗಳ 9 ಜನ ಮನೆಗೆ

04:27 PM May 27, 2020 | Naveen |

ಮೊಳಕಾಲ್ಮೂರು: ಪಟ್ಟಣದ ಹೊರ ವಲಯದಲ್ಲಿರುವ ಆರ್‌.ಎಂ.ಎಸ್‌.ಎ ಬಾಲಕಿಯರ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿದ್ದ 9 ಜನರನ್ನು ಬಿಡುಗಡೆಗೊಳಿಸಿ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಯಿತು.

Advertisement

ಮೇ 16 ರಂದು ಪಟ್ಟಣದ ಹೊರ ವವಲಯದಲ್ಲಿರುವ ಆರ್‌.ಎಂ.ಎಸ್‌.ಎ ಬಾಲಕಿಯರ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರವನ್ನು ತೆರೆಯಲಾಗಿತ್ತು. ಆರಂಭದಲ್ಲಿ ಹೊರ ರಾಜ್ಯಗಳಾದ ಆಂಧ್ರ, ಚೆನ್ನೈ ಹಾಗೂ ದೆಹಲಿ ರಾಜ್ಯಗಳಿಂದ ಬಂದ 6 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿಡಲಾಗಿತ್ತು. ನಂತರ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದ 8 ವ್ಯಕ್ತಿಗಳು ಬಂದಿದ್ದು, ಅವರನ್ನು ಹತ್ತಿರದ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ. ಒಟ್ಟು 14 ಜನ ಹೊರ ರಾಜ್ಯಗಳಿಂದ ಬಂದಿದ್ದು, ಅವರನ್ನು ಆರ್‌.ಎಂ.ಎಸ್‌.ಎ ಬಾಲಕಿಯರ ವಸತಿ ಶಾಲೆ ಮತ್ತು ಮೊರಾರ್ಜಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಇವರಲ್ಲಿ ಸರ್ಕಾರದ ನಿರ್ದೇಶನದಂತೆ ಕ್ವಾರಂಟೈನ್‌ ಅವಧಿ 14 ದಿನಗಳ ಬದಲು 7 ದಿನಗಳಿಗೆ ಕಡಿತಗೊಳಿಸಿರುವುದರಿಂದ 7 ದಿನಗಳನ್ನು ಪೂರೈಸಿದ ಹಾಗೂ ಇವರ ಗಂಟಲು ದ್ರವ ವರದಿ ನೆಗೆಟಿವ್‌ ಬಂದಿರುವುದರಿಂದ 9 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

ಉಪತಹಶೀಲ್ದಾರ್‌ ಜಿ.ಎಚ್‌. ಏಳುಕೋಟಿ, ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ತಾಪಂ ಸಹಾಯಕ ನಿರ್ದೇಶಕ ಸದಾಶಿವಪ್ಪ ತಗ್ಗಿ, ಪಿಎಸ್‌ಐ ಎಂ.ಕೆ. ಬಸವರಾಜ್‌, ಕಂದಾಯ ನಿರೀಕ್ಷಕ ಉಮೇಶ್‌, ಜಿಲ್ಲಾ ಆರ್‌.ಆರ್‌. ತಂಡದ ಮೇಲ್ವಿಚಾರಕ ಒ. ಶ್ರೀನಿವಾಸ್‌, ವೈ. ತಿಪ್ಪೇಸ್ವಾಮಿ, ಶುಶ್ರೂಷಕಿ ಸುಧಾ, ಅನಿಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next