Advertisement

ಮುರಿದು ಬಿದ್ದ ಗೇಟ್-ನಾಮಫಲಕ

05:15 PM Apr 26, 2019 | Team Udayavani |

ಮೊಳಕಾಲ್ಮೂರು: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸ್ಟ್ರಾಂಗ್‌ ರೂಂನಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸುವ ವಾಹನ ಕಾಂಪೌಂಡ್‌ಗೆ ತಾಗಿದ ಪರಿಣಾಮ ನಾಮಫಲಕ ಹಾಗೂ ಗೇಟ್‌ಗೆ ಹಾನಿಯಾಗಿದೆ.

Advertisement

ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ತರಗತಿಗಳು ನಡೆಯುತ್ತವೆ. ರಕ್ಷಣೆಗಾಗಿ ಭದ್ರವಾದ ಗೇಟ್, ಕಾಂಪೌಂಡ್‌ನೊಂದಿಗೆ ನಾಮಫಲಕವನ್ನು ಅಳವಡಿಸಲಾಗಿತ್ತು. ಇದೇ ಕಾಲೇಜು ಆವರಣದಲ್ಲಿರುವ ಗುರುಭವನದ ಮುಂಭಾಗದಲ್ಲಿಯೂ ಮತ್ತೂಂದು ಗೇಟ್ ನಿರ್ಮಾಣ ಮಾಡಿ ಕಾಲೇಜು ಆವರಣದಲ್ಲಿ ಮದ್ಯಪಾನ ಮತ್ತು ಅನೈತಿಕ ಚಟುವಟಿಕೆಗಳು ನಡೆಯದಂತೆ ಜಾಗರೂಕತೆ ವಹಿಸಲಾಗಿತ್ತು.

ವಿಧಾನಸಭೆ, ಲೋಕಸಭೆ , ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆ ನಡೆದಾಗ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲು ಕಾಲೇಜು ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಏ. 18 ರಂದು ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ 284 ಮತಗಟ್ಟೆಗಳಿಂದ ತಂದ ಇವಿಎಂಗಳನ್ನು ಭದ್ರವಾಗಿರಿಸಲಾಗಿತ್ತು. ರಾತ್ರಿ ವೇಳೆ ಜಿಲ್ಲಾ ಕೇಂದ್ರಕ್ಕೆ ಸಾಗಿಸುವಾಗ ಇವಿಎಂಗಳಿದ್ದ ವಾಹನ ಕಾಲೇಜು ಕಾಂಪೌಂಡ್‌ ಮತ್ತು ಗೇಟ್‌ಗೆ ತಾಗಿದ್ದರಿಂದ ನಾಮಫಲಕ ಮತ್ತು ಗೇಟ್ ಕಿತ್ತುಹೋಗಿವೆ. ರಜೆ ಮುಗಿಯುತ್ತಿದ್ದಂತೆ ಶಾಲಾ- ಕಾಲೇಜು ಪ್ರವೇಶ ಆರಂಭವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ರಕ್ಷಣೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗೇಟ್ ಮತ್ತು ನಾಮಫಲಕವನ್ನು ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉರುಳಿ ಬಿದ್ದಿದ್ದ ನಾಮಫಲಕ ಮತ್ತು ಗೇಟ್ ತೆರವುಗಳಿಸಲಾಗಿದೆ ಎನ್ನಲಾಗುತ್ತಿದ್ದು, ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಆರಂಭಿಸಬೇಕಿದೆ.

ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳ ರಕ್ಷಣೆಗಾಗಿ ನಿರ್ಮಾಣ ಮಾಡಲಾಗಿರುವ ಕಾಂಪೌಂಡ್‌ಗೆ ಹಾನಿಯಾಗಿದೆ. ಇವಿಎಂ ಸಾಗಿಸುವ ವಾಹನ ತಾಗಿದ್ದರಿಂದ ನಾಮಫಲಕ ಮತ್ತು ಗೇಟ್ ಬಿದ್ದುಹೋಗಿವೆ. ಶೀಘ್ರದಲ್ಲೇ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು.
•ಪಿ.ವಿರೂಪಾಕ್ಷಪ್ಪ ,
ಜನಸಂಸ್ಥಾನ ಸಂಸ್ಥೆ.

ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ತಹಶೀಲ್ದಾರರೊಂದಿಗೆ ಚರ್ಚಿಸಿ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಶಾಲಾ- ಕಾಲೇಜು ಆಸ್ತಿಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ.
•ಎನ್‌. ಸೋಮಶೇಖರ್‌, ಬಿಇಒ.

Advertisement

ಚುನಾವಣೆ ಸಂದರ್ಭದಲ್ಲಿ ಇವಿಎಂ ಸಾಗಿಸುವ ವಾಹನ ಶಾಲಾ-ಕಾಲೇಜು ಕಾಂಪೌಂಡ್‌ನ‌ ಗೇಟ್ ಮತ್ತು ನಾಮಫಲಕ ಬಿದ್ದಿರುವುದು ಗಮನಕ್ಕೆ ಬಂದಿದೆ. ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚನೆ ನೀಡಲಾಗಿದೆ.
•ಎಸ್‌. ಅನಿತಲಕ್ಷ್ಮೀ, ತಹಶೀಲ್ದಾರ್‌.

Advertisement

Udayavani is now on Telegram. Click here to join our channel and stay updated with the latest news.

Next