Advertisement

ಮನೆ ಮನೆ ಸಂಪರ್ಕ ಅಭಿಯಾನ ಯಶಸ್ವಿಗೊಳಿಸಿ: ಮುರುಳಿ

01:09 PM Jun 14, 2020 | Naveen |

ಮೊಳಕಾಲ್ಮೂರು: ರಾಜ್ಯಾದ್ಯಂತ ಒಂದು ವಾರ ಕಾಲ ಮನೆ ಮನೆ ಸಂಪರ್ಕದ ಮೂಲಕ ಕಾರ್ಯಕರ್ತರು ಜನಸಾಮಾನ್ಯರನ್ನು ಸಂಪರ್ಕಿಸಿ ಡಿಜಿಟಲ್‌ ಮತ್ತು ವರ್ಚುವಲ್‌ ರ್ಯಾಲಿಗಳನ್ನು ಯಶಸ್ವಿಗೊಳಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಕರೆ ನೀಡಿದರು.

Advertisement

ಪಟ್ಟಣದ ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ್ತು ಪ್ರಧಾನಿ ಮೋದಿಯವರ ಸಾಧನೆ ಕುರಿತ ಮನೆ ಮನೆ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿದಿನ ನೂರು ಮನೆಗಳಿಗೆ ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳ ಕರಪತ್ರವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ತಲುಪಿಸಬೇಕು. ಜೂ. 16 ರಂದು ನಡೆಯುವ ವರ್ಚುವಲ್‌ ರ್ಯಾಲಿಯಲ್ಲಿ ಆನ್‌ಲೈನ್‌ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಗ್ರಾಪಂ ಹಾಗೂ ತಾಪಂಗಳಲ್ಲಿ ಪಕ್ಷದ ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆಯನ್ನು ಬಲಪಡಿಸಬೇಕಾಗಿದೆ. ಕೋವಿಡ್ ಲಾಕ್‌ಡೌನ್‌ನಿಂದ ಜೀವನ ಕಷ್ಟಕರವಾಗಬಾರದೆಂದು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ, ಮಡಿವಾಳ ಸಮುದಾಯಕ್ಕೆ , ಕ್ಷೌರಿಕರಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ ವೈದ್ಯರಿಗೆ, ಆರೋಗ್ಯ ಸಹಾಯಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ರೂ. ವಿಮೆಯನ್ನು ಘೋಷಿಸಿರುವ ಏಕೈಕ ಸರ್ಕಾರವಾಗಿದೆ ಎಂದು ಬಣ್ಣಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಡಾ| ಪಿ.ಎಂ. ಮಂಜುನಾಥ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ದಿಟ್ಟ ನಿರ್ಧಾರಗಳ ಫಲವಾಗಿ ಕೊರೊನಾ ಎದುರಿಸುವ ಹಂತಕ್ಕೆ ಬಂದಿದ್ದೇವೆ. ಕ್ಷೇತ್ರದಲ್ಲಿಯೂ ಶಾಸಕರು ಮತ್ತು ಕಾರ್ಯಕರ್ತರು ಅವಿರತವಾಗಿ ನಿರಾಶ್ರಿತರಿಗೆ ನಿತ್ಯೋಪಯೋಗಿ ವಸ್ತುಗಳ ಸೌಲಭ್ಯವನ್ನು ಕಲ್ಪಿಸಿದ್ದೇವೆ. ಪ್ರಗತಿಯತ್ತ ಸಾಗುತ್ತಿರುವ ಸರ್ಕಾರವನ್ನು ಕಾಂಗ್ರೆಸ್‌ನವರು ವಿನಾ ಕಾರಣ ಟೀಕಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

Advertisement

ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ ಯಾದವ್‌, ನಗರಾಧ್ಯಕ್ಷ ಶಾಂತಾರಾಂ ಬಸಾಪತಿ, ಪಪಂ ಸದಸ್ಯರಾದ ಪಿ. ಲಕ್ಷ್ಮಣ , ಕೆ. ತಿಪ್ಪೇಸ್ವಾಮಿ, ಶುಭಾ, ಸವಿತಾ, ರೂಪಾ, ಲೀಲಾವತಿ, ಮಾಜಿ ಮಂಡಲಾಧ್ಯಕ್ಷರಾದ ಡಿ.ಎಂ. ಈಶ್ವರಪ್ಪ, ಪಿ.ಎಂ. ಚಂದ್ರಶೇಖರ , ಪ್ರಧಾನ ಕಾರ್ಯದರ್ಶಿ ಶ್ರೀರಾಮ ರೆಡ್ಡಿ , ಎಸ್‌ಸಿ ಮೋರ್ಚಾ ಅಧ್ಯಕ್ಷ ಎಲ್‌. ಪರಮೇಶ್ವರಪ್ಪ, ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಾಪೇಶ್‌ ನಾಯಕ, ಮುಖಂಡರಾದ ಜಿಂಕಲು ಬಸವರಾಜ್‌, ಚಂದ್ರಶೇಖರ ಗೌಡ, ಪಿ.ಆರ್‌. ಸಿದ್ದಣ್ಣ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next