Advertisement

ಸ್ಕೂಟರ್‌ ನೆನಪನ್ನು ಬಿಚ್ಚಿಟ್ಟ ಮೊಹಮ್ಮದ್‌ ಅಜರುದ್ದೀನ್‌

10:35 PM Jun 05, 2021 | Team Udayavani |

ಹೈದರಾಬಾದ್‌ : ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ತಮ್ಮ ಸ್ಕೂಟರ್‌ ದಿನಗಳ ನಂಟನ್ನು ಹಂಚಿಕೊಂಡಿದ್ದಾರೆ.

Advertisement

“ಬಜಾಜ್‌ ಚೇತಕ್‌’ ಸ್ಕೂಟರ್‌ನಲ್ಲಿ ಕುಳಿತ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದರೊಂದಿಗೆ ಕಳೆದ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

“ನನ್ನ ವೃತ್ತಿಯ ಆರಂಭದ ಸವಿ ನೆನಪುಗಳಲ್ಲಿ ಇದು ಅವಿಸ್ಮರಣೀಯವಾದದ್ದು. ನನ್ನ ಕ್ರಿಕೆಟ್‌ ಪ್ರತಿಭೆಯನ್ನು ಗುರುತಿಸಿ ಹಿತೈಷಿಯೊಬ್ಬರು ನನಗೆ ಇದನ್ನು ಉಡುಗೊರೆಯಾಗಿ ನೀಡಿದ್ದರು. ಈ ಸ್ಕೂಟರ್‌ನಲ್ಲೇ ನಾನು ಮೈದಾನಕ್ಕೆ ತೆರಳಿ ಕ್ರಿಕೆಟ್‌ ಅಭ್ಯಾಸ ನಡೆಸುತ್ತಿದ್ದೆ’ ಎಂದು ಅಜರುದ್ದೀನ್‌ ಹೇಳಿದ್ದಾರೆ.

ಇದು ಹಸಿರು ಬಣ್ಣದ ಸ್ಕೂಟರ್‌ ಆಗಿದ್ದು, ಇದರ ಹೆಡ್‌ಲೈಟ್‌ ಮೇಲೆ “ಅಜರ್‌’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next