Advertisement

ತಲಾಖ್‌ ತೀರ್ಪಿನ ಪರ ನಿಂತು ಮತ್ತೆ ಟ್ರೋಲ್‌ ಆದ ಕೈಫ್ 

09:15 AM Aug 23, 2017 | |

ಲಕ್ನೋ:ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸಿ  ಸರ್ವೋಚ್ಚ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪು ಬೆಂಬಲಿಸಿ ದ ಮಾಜಿ ಕ್ರಿಕೆಟಿಗ ಮಹಮದ್‌ ಕೈಫ್ ಮತ್ತೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ. 

Advertisement

ಸಾಮಾಜಿಕ ಜವಾಬ್ದಾರಿಯ ವಿಚಾರಗಳಿಗೆ ನೇರವಾಗಿ ತಮ್ಮ ವಿಚಾರಗಳನ್ನು ಪ್ರಕಟಿಸುವ ಕೈಫ್ ಸುಪ್ರೀಂನ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ ‘ಇದು ಮುಸ್ಲಿಂ ಮಹಿಳೆಯರಿಗೆ ಭದ್ರತೆ ಒದಗಿಸಲಿದೆ. ಲಿಂಗ ಸಮಾನತೆ ಅಗತ್ಯವಾಗಿ ಬೇಕಾಗಿದೆ’ ಎಂದು ಟ್ವೀಟ್‌ ಮಾಡಿದ್ದರು.

ಹಲವರು ಕೈಫ್ ಅಭಿಪ್ರಾಯವನ್ನು ಬೆಂಬಲಿಸಿದರೆ, ಇನ್ನು ಕೆಲವರು ಟೀಕಿಸಿ ಟ್ವೀಟ್‌ಗಳ ಮಳೆ ಸುರಿಸಿದ್ದಾರೆ. 

‘ನೀವು ಯಾರನ್ನು ಖುಷಿ ಪಡಿಸಲು ಈ ರೀತಿ ಟ್ವೀಟ್‌ ಮಾಡುತ್ತಿದ್ದೀರಿ’ ಎಂದು ಎಐಎಂಐಎಂ ಕಾರ್ಯಕರ್ತನೊಬ್ಬ ಪ್ರಶ್ನಿಸಿದರೆ, ‘ನಿಮಗೆ ಗೊತ್ತಿರದ ವಿಚಾರಗಳ ಬಗ್ಗೆ ಟ್ವೀಟ್‌ ಮಾಡಬೇಡಿ ಕೈಫ್ ಬಾಬು’ ಎಂದು ಇನ್ನೊಬ್ಬ ಟ್ವೀಟ್‌ ಮಾಡಿದ್ದಾನೆ. 

‘ಇಸ್ಲಾಂನಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ಅದನ್ನು ನೀನು ಮೊದಲು ತಿಳಿದುಕೊಳ್ಳು’ ಎಂದು ಇನ್ನೋರ್ವ ಟ್ವೀಟ್‌ ಮಾಡಿದ್ದಾನೆ. 

Advertisement

ಇದಕ್ಕು ಒಂದು ಹೆಜ್ಜೆ ಮುಂದೆ ಹೋಗಿರುವ ಸಕ್ವೀಬ್‌ ಹಮ್ಝಾ ಎನ್ನುವ ವ್ಯಕ್ತಿ ‘ಸುಪ್ರೀಂ ಹೇಳುತ್ತದೆ ತ್ರಿವಳಿ ತಲಾಖ್‌ ಖುರಾನ್‌ಗೆ ವಿರುದ್ಧವಾದುದೆಂದು. ವಂದೇ ಮಾತರಂ ಕೂಡ ಖುರಾನ್‌ಗೆ ವಿರುದ್ಧವಾದುದು, ಅಲ್ಲಾಹುಗಿಂತ ಬೇರೆ ದೇವರು ಇಸ್ಲಾಂನಲ್ಲಿ ಇಲ್ಲಾ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next