Advertisement

15ನೇ ದಿನಕ್ಕೆ ಕಾಲಿಟ್ಟ ಮೊಗೇರರ ಪ್ರತಿಭಟನೆ

04:18 PM Apr 07, 2022 | Team Udayavani |

ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಸರಕಾರ ಮುಂದುವರಿಸಬೇಕೆಂದು ಮೊಗೇರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 15ನೇ ದಿನಕ್ಕೆ ಕಾಲಿಟ್ಟಿದ್ದು ಮೊಗೇರ ಸಮಾಜಕ್ಕೆ ಬೆಂಬಲವಾಗಿ ಜಿಪಂ ಮಾಜಿ ಸದಸ್ಯ ಆಲ್ಬರ್ಟ್‌ ಡಿಕೋಸ್ತ, ಸಿಂಧು ಭಾಸ್ಕರ ನಾಯ್ಕ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ವಿಷ್ಣು ದೇವಾಡಿಗ, ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಲಕ್ಷ್ಮಣ ನಾಯ್ಕ ಮತ್ತಿತರರು ಭೇಟಿ ನೀಡಿದರು.

Advertisement

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಆಲ್ಬರ್ಟ್‌ ಡಿಕೋಸ್ತ ಮೊಗೇರರು ಕಳೆದ 12 ವರ್ಷಗಳಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹೋರಾಟ ನಡೆಸುತ್ತಿದ್ದಾರೆ. ಮೊಗೇರರಿಗೆ ಸರಕಾರ ಈ ಹಿಂದೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಿ ನ್ಯಾಯ ಕೊಡಿಸಬೇಕು. ಜಿಲ್ಲೆಯ ಶಾಸಕರು, ಸಂಸದರು, ಸಚಿವರು ಸರಕಾರದ ಮಟ್ಟದಲ್ಲಿ ಮೊಗೇರರ ಪರವಾಗಿ ಧ್ವನಿ ಎತ್ತಬೇಕು ಎಂದರು.

ತಾಪಂ ಮಾಜಿ ಸದಸ್ಯ ವಿಷ್ಣು ದೇವಾಡಿಗ ಮಾತನಾಡಿ, ಮೊಗೇರರು ಕಳೆದ 14 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿಲ್ಲ. ಉಸ್ತುವಾರಿ ಸಚಿವರೂ ಸಹ ಆಗಮಿಸಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಮಂಕಾಳ ವೈದ್ಯ, ಕಾಯ್ಕಿಣಿ ಗ್ರಾಪಂ ಸದಸ್ಯ ಭಾಸ್ಕರ ನಾಯ್ಕ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ. ಕರ್ಕಿ, ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಹೋರಾಟ ಸಮಿತಿ ಅಧ್ಯಕ್ಷ ಎಫ್‌.ಕೆ. ಮೊಗೇರ, ಮುಖಂಡರಾದ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ಮೊಗೇರ, ಈಶ್ವರ ಮೊಗೇರ ಮುಂತಾದವರಿದ್ದರು. 14ನೇ ಧರಣಿ ಸತ್ಯಾಗ್ರಹದಲ್ಲಿ ಸಣ್ಬಾವಿ ಭಾಗದ ಮೊಗೇರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next