Advertisement
ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯ ಶ್ರೀಮಂತ ಕಲೆಯಾದ ಉಡುಪಿ ಜಿಲ್ಲೆಯ ಯಕ್ಷಗಾನ ಬಡಗುತಿಟ್ಟಿಗೆ ಮೊಗವೀರ ವೃತ್ತಿ ಕಲಾವಿದರ ಪರಂಪರೆ ಬಹಳ ದೊಡ್ಡದಾಗಿದೆ. ಇತ್ತೀಚೆಗೆ ಮೊಗವೀರ ಕಲಾವಿದರಲ್ಲಿ ಮೊತ್ತ ಮೊದಲನೆಯದಾಗಿ ನೆನಪಿರುವ ದೊಡ್ಡ ಹೆಸರು ದಿ| ಕೊಳ್ಕೆಬೈಲು ಹಿರಿಯ ನಾಯ್ಕ, ಕೊಳ್ಕೆಬೈಲು ಶೀನ ನಾಯ್ಕ, ಶಿರಿಯಾರ ಮಂಜು ನಾಯ್ಕ ಇವರು ರಂಗಸ್ಥಳದ ಮಾತುಗಾರಿಕೆಗೆ ಹೊಸ ಆಯಾಮವನ್ನು ಕೊಟ್ಟು ದಾಖಲೀಕರಣ ಮಾಡಿದವರೆಂದು ಹೇಳಿದರೆ ಸತ್ಯಕ್ಕೆ ಹತ್ತಿರವಾದ ಮಾತಾಗುತ್ತದೆ. ಕೊಳ್ಕೆಬೈಲು ಶೀನ ನಾಯ್ಕ ಅಂಗದ, ವೀರಭದ್ರ ನಾಯ್ಕರ ಪ್ರಾಹಸ್ತ, ಹಾರಾಡಿಯವರ ಹಿರಣ್ಯಕಶುಪು, ಕೊಳ್ಕೆಬೈಲು ಶೀನ ನಾಯ್ಕ ಕೈಯಾದು. ಈ ಹಳೆ ತಲೆಮಾರಿನ ಕಲಾಭಿಮಾನಿಗಳನ್ನು ಈಗಲೂ ಮೆಲುಕು ಹಾಕುತ್ತಾರೆ. ಇದೊಂದು ದಂತ ಕತೆಯಾಗಿದೆ.
Related Articles
Advertisement
ಜಮದಗ್ನಿ ಶೀನ, ಬೇಲೂ¤ರು ರಮೇಶ್, ಕೋಟ ಸುರೇಶ್, ಬೆದ್ರಾಡಿ ನರಸಿಂಹ, ಬೆದ್ರಾಡಿ ಶಂಭು ಕುಮಾರ್, ಆಲೂರು ಸುರೇಂದ್ರ, ಆಲೂರು ತೇಜ, ಹಳ್ಳಾಡಿ ಕೃಷ್ಣ, ಸುಳುಗೋಡು ನಾರಾಯಣ, ಎತ್ತಿನಟ್ಟಿ ಭೋಜ, ಮೊಗೆಬೆಟ್ಟು ಶಂಕರ, ಮಾನ್ಯ ನರಸಿಂಹ, ಸೌಡ ಗೋಪಾಲ, ಕೋಟ ಉದಯ, ಲಕ್ಷ್ಮಣ್ ಕಾಂಚನ್, ಕೆರಾಡಿ ಕೃಷ್ಣ, ಮೊಳಹಳ್ಳಿ ಕೃಷ್ಣ, ಶಿರೂರು ಬಸವ, ನಡೂರು ದಿನಕರ, ಬಿಜೂರು ನಾರಾಯಣ, ಮಾರ್ವಿ ಗೋವಿಂದ, ಹೆಬ್ಬೆರುಳಿ ಚಂದ್ರ, ಬಾಕೂìರು ಸಂತೋಷ್, ಆರ್ಡಿ ಮಂಜುನಾಥ, ನಾಗಪ್ಪ ಹೊಳಮೊಗೆ, ಸತೀಶ್ ಜಪ್ತಿ, ಪ್ರಭಾಕರ, ಹಾಲಾಡಿ ಕೃಷ್ಣ ಇವರೆಲ್ಲ ಮುಮ್ಮೇಳದ ಕಲಾವಿದರು.
ಹಿಮ್ಮೇಳದಲ್ಲಿ ಭಾಗವತ ಸದಾಶಿವ ಅಮೀನ್ ಕೊಕ್ಕರ್ಣೆ, ಉಮೇಶ್ ಸುವರ್ಣ ಬೀಜಾಡಿ, ಆನಂದ ಕುಂದರ್ ಕೋಟ, ರಾಘವೇಂದ್ರ ಬಾರಾಳಿ, ಮದ್ದಳೆವಾದಕ ಮಹೇಶ್ ಕುಮಾರ್ ಮಂದಾರ್ತಿ, ಚೆಂಡೆವಾದಕ ಬಸವ ಮರಕಲ, ಹಳ್ಳಾಡಿ ಕುಮಾರ ಇವರು ದುಡಿದು ವಿಜೃಂಭಿಸಿದ್ದಾರೆ. ಸಮಸ್ತ ಮೊಗವೀರ ಕಲಾವಿದರು ಒಂದೆಡೆ ಸೇರಿ ಸಮಾಲೋಚಿನ ತಮ್ಮೊಳಗೆ ಇರಬಹುದಾದ ಕೀಳರಿಮೆಯನ್ನು ಬಿಟ್ಟು ಮುಸುಕಿನಿಂದ ಹೊರ ಬಂದು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎನ್ನುವುದು ಎಲ್ಲರ ಆಶಯವಾಗಿದೆ.
ಉಡುಪಿ ಜಿಲ್ಲೆ ಕುಂದಾಪುರದ ಎಲ್ಲಾ ಹವ್ಯಾಸಿ ಮೊಗವೀರ ಕಲಾವಿದರನ್ನು ಒಂದು ಗೂಡಿಸಿ ಮೊಗವೀರ ಮಹಿಳಾ ಹಾಗೂ ಪುರುಷ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಮಾ. 11 ರಂದು ಸಂಜೆ 5.30 ಕ್ಕೆ ಮೊಗವೀರ ಯಕ್ಷಕಲಾ ವೇದಿಕೆ ಮುಂಬಯಿ ಇದರ ವತಿಯಿಂದ ಘಾಟ್‌ಕೋಪರ್ ಅಸಲ್ಫಾದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ ಸುಭಾಶ್ ನಗರ ಇಲ್ಲಿ ವೀರಮಣಿ ಕಾಳಗ ಹಾಗೂ ಮಾಯಾಪುರಿ ಯಕ್ಷಗಾನವನ್ನು ಪ್ರದರ್ಶಿಸಲಾಗುವುದು. ಮೊಗವೀರ ಮಹಿಳಾ ಮತ್ತು ಪುರುಷ ಕಲಾವಿದರು ಯಕ್ಷ ರಸದೌತಣವನ್ನು ನೀಡಲಿದ್ದಾರೆ. ಅಶ್ವಿನಿ ಕೊಂಡದಕುಳಿ ಇವರ ನಿರ್ದೇಶನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಂಬಯಿ ಮೊಗವೀರ ಯಕ್ಷಗಾನ ಪ್ರಥಮ ಪ್ರಯತ್ನವಾಗಲಿದೆ. ಹಿರಿಯ ಕಲಾವಿದ ಬೇಳೂ¤ರು ರಮೇಶ್ ಮೊಗವೀರ ಇವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಗುವುದು.
ಲೇಖಕ : ಚಂದ್ರ ಕಂಡ್ಲೂರು