Advertisement

ಮೊಗವೀರ ಮಾಸಿಕದ ಲೇಖಕರ ಮತ್ತು ಓದುಗರ ಸಮಾವೇಶ

12:32 PM Mar 21, 2018 | |

ಡೊಂಬಿವಲಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಡೊಂಬಿವಲಿ ಶಾಖೆಯಲ್ಲಿ ಮೊಗವೀರ ಕನ್ನಡ ಮಾಸಿಕ 78ರ ಸಂಭ್ರಮವದ ಅಂಗವಾಗಿ ಪ್ರಾಂತೀಯ ಲೇಖಕರ ಮತ್ತು ಓದುಗರ ಸಮಾವೇಶವು ಮಾ. 4ರಂದು ಡೊಂಬಿವಲಿ ಪಶ್ಚಿಮದ ಜ್ಞಾನೇಶ್ವರ ಕಾರ್ಯಾಲಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಿನವಿಡೀ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ನಡೆದ ಪ್ರಥಮ ಸಾಹಿತ್ಯ ಗೋಷ್ಠಿಯಲ್ಲಿ ಕವಿ, ಸಾಹಿತಿ ಡಾ| ಜಿ. ಪಿ. ಕುಸುಮಾ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ ಮಹಿಳೆಯರ ಬದುಕು ಶೋಚನೀಯವಾಗಿತ್ತು. ಅನ್ಯಾಯ, ಅತ್ಯಾಚಾರಗಳನ್ನು ನಾಶಗೈದು ಧರ್ಮ ಸಂಸ್ಥಾಪನೆ ಮಾಡುವ ಪ್ರಯುಕ್ತ ನಡೆದ ಮಹಾಭಾರತದಲ್ಲಿ ಸ್ತ್ರೀ ಯರ ತ್ಯಾಗಮಯ ಜೀವನ ಗೋಚರಿಸುತ್ತದೆ ಎಂದರು.

ಗೋಷ್ಠಿಯಲ್ಲಿ ರಾಮಾಯಣದಲ್ಲಿ ಸ್ತ್ರೀ ಯರ ಪಾತ್ರ-ಬದುಕು-ಸನ್ನಿವೇಶದ ಕುರಿತು ರಂಗತಜ್ಞ ಗುಣಪಾಲ್‌ ಉಡುಪಿ, ಮಹಾಭಾರತದಲ್ಲಿ ಸ್ತ್ರೀ ಯರ ಪಾತ್ರ ಬದುಕು-ಸನ್ನಿವೇಷದ ಕುರಿತು ಸಾಹಿತಿ ಡಾ| ಮಮತಾ ರಾವ್‌ ಇವರು ಉಪನ್ಯಾಸ ನೀಡಿದರು. ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ಯಧುವೀರ್‌ ಪುತ್ರನ್‌ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಮೊಗವೀರದ ಸಂಪಾದಕ ಅಶೋಕ್‌ ಸುವರ್ಣ, ಡೊಂಬಿವಲಿ ಶಾಖೆಯ ಜತೆ ಕಾರ್ಯದರ್ಶಿ ಚಂದ್ರಶೇಖರ ಆರ್‌. ಬಂಗೇರ, ಮಹಿಳಾ ವಿಭಾಗದ ಕಾರ್ಯದರ್ಶಿ ರೋಹಿಣಿ ಕರುಣಾಕರ್‌ ಉಪಸ್ಥಿತರಿದ್ದರು.

ದ್ವಿತೀಯ ಗೋಷ್ಠಿಯಲ್ಲಿ ತುಳುನಾಡಿನ ಪಾಡªನಗಳಲ್ಲಿ ಸ್ತ್ರೀ ಯರು ಎಂಬ ವಿಷಯದ ಮೇಲೆ ಲೇಖಕಿ, ಕವಿ ಶಾರದಾ ಅಂಚನ್‌ ಇವರು ಉಪನ್ಯಾಸ ನೀಡಿ, ಪಾಡªನಗಳ ಮಹತ್ವ ಹಾಗೂ ಕಲ್ಕುಡ, ಕಲ್ಮುರ್ಟಿ, ದೆಯಿಬೈದಿತಿ, ತನ್ನಿಮಾನಿಗ ಮೊದಲಾದವ ಸಂಘರ್ಷಮಯೀ ಸ್ತ್ರೀ ಯರ ಜೀವನದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಕೋಶಾಧಿಕಾರಿ ಹರಿಶ್ಚಂದ್ರ ಮೆಂಡನ್‌, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ದಮಯಂತಿ ಕೋಟ್ಯಾನ್‌ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ವಸಂತ ಕಲಕೋಟಿ, ಸಾ. ದಯಾ, ಪ್ರಕಾಶ್‌ ತದಡಿಕರ್‌ ಇವರನ್ನು ಗೌರವಿಸಲಾಯಿತು. ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ಯಧುವೀರ್‌ ಪುತ್ರನ್‌ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಡಾ| ವಾಣಿ ಉಚ್ಚಿಲ್ಕರ್‌ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ| ಕರುಣಾಕರ ಶೆಟ್ಟಿ, ಅನಿತಾ ಪೂಜಾರಿ ತಾಕೋಡೆ, ಮಲ್ಲಿನಾಥ ಜಲದೆ, ಎಚ್‌. ಆರ್‌. ಚಲವಾದಿ, ರಜನಿ ತೋಳಾರ್‌, ವಿನೋದ್‌ರಾಜ್‌ ಜೈನ್‌, ರಮಣ್‌ ಶೆಟ್ಟಿ ರೆಂಜಾಳ, ಸರೋಜಾ ಅಮಾತಿ, ಪ್ರೇಮಾ ಪೂಜಾರಿ ಇವರು ಕವನ ವಾಚಿಸಿದರು. ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಆರ್ಯಕರ್ತ ದೇವರಾಜ್‌ ಬಂಗೇರ, ಡೊಂಬಿವಲಿ ಶಾಖೆಯ ಉಪ ಕಾರ್ಯಾಧ್ಯಕ್ಷ ಸುರೇಶ್‌ ಕರ್ಕೇರ, ಮಹಿಳಾ ವಿಭಾಗದ ಕೋಶಾಧಿಕಾರಿ ಶಶಿಕಲಾ ಮೆಂಡನ್‌ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯಾಧ್ಯಕ್ಷ ಯಧುವೀರ ಪುತ್ರನ್‌ ಸ್ವಾಗತಿಸಿದರು. ಲೇಖಕ, ಸಂಘಟಕ ಓಂದಾಸ್‌ ಕಣ್ಣಂಗಾರ್‌ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next