Advertisement

ಮೊಗವೀರ ಮಂಡಳಿ ನಾಯ್ಗಾಂವ್‌-ವಿರಾರ್‌: ಪ್ರವಚನ ಭಜನೆ

12:26 PM Oct 24, 2017 | |

ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯ್ಗಾಂವ್‌-ವಿರಾರ್‌ ಪ್ರಾದೇಶಿಕ ಸಮಿತಿಯ ವತಿಯಿಂದ  ವಿಶೇಷ ಉಪನ್ಯಾಸ ಹಾಗೂ ಭಜನ ಕಾರ್ಯಕ್ರಮವು ಇತ್ತೀಚೆಗೆ ವಸಾಯಿ ಪಶ್ಚಿಮದಲ್ಲಿರುವ ಸಮಿತಿಯ ಕಚೇರಿಯಲ್ಲಿ ನಡೆಯಿತು.

Advertisement

ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಸಮಿತಿಯ ಸದಸ್ಯೆಯರಿಂದ ಭಜನ ಕಾರ್ಯಕ್ರಮ, ಸರಸ್ವತಿ ಪೂಜೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಶೇಷ ಧಾರ್ಮಿಕ ಪ್ರವಚನ ನೀಡಿದ ವಿದ್ವಾನ್‌ ಪಿ. ಆರ್‌. ನಾಗರಹಳ್ಳಿ ಅವರು, ಮನುಷ್ಯನಿಗೆ ಗೌರವ ಬಂದಾಗ, ಗೌರವ ಲಭಿಸುವಾಗ ತಾನು ಆ ಗೌರವಕ್ಕೆ ಅರ್ಹನಾದವನೇ ಎಂಬುದನ್ನು ಯೋಚಿಸಿಕೊಳ್ಳಬೇಕು. ಆ ಗೌರವ ಬರಲು ಕಾರಣ ಹಾಗೂ ಇದರ ಹಿಂದಿನ ಸತ್ಯಾಸತ್ಯತೆಯನ್ನು ನೆನಪು ಮಾಡಿಕೊಳ್ಳಬೇಕು. ತನಗೆ ಸಿಕ್ಕ ಗೌರವದಿಂದ ಅಹಂ ಭಾವನೆಯಿಂದ ಮೆರೆಯಬಾರದು. 

ಮಾನವೀಯ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ. ಕಷ್ಟದಲ್ಲಿರುವವರಿಗೆ ಸಹಕರಿಸುವ ಗುಣ ನಮ್ಮಲ್ಲಿರಬೇಕು. ಇಂತಹ ಧಾರ್ಮಿಕ ಪೂಜೆ, ಭಜನೆಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಾಡ್ಯರಾಗಲು ಸಾಧ್ಯವಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ದೇಹದಾಡ್ಯìಪಟು ಅನಿಲ್‌ ಆರ್‌. ಶೆಟ್ಟಿ ಅವರ ವೈದ್ಯಕೀಯ ವೆಚ್ಚಕ್ಕೆ ಸದಸ್ಯರು ಸಂಗ್ರಹಿಸಿದ ಧನಸಹಾಯವನ್ನು ವಿದ್ವಾನ್‌ ಪಿ. ಆರ್‌. ನಾಗರಹಳ್ಳಿ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯಾYಂವ್‌-ವಿರಾರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಸುವರ್ಣ ಅವರಿಗೆ ನೀಡಲಾಯಿತು.
ಮಂಡಳಿಯ ಪ್ರಧಾನ ಸಭೆಯ ಕಾರ್ಯಕರ್ತರಾದ ಅರುಣ್‌ ಕುಮಾರ್‌ ಮತ್ತು ಪ್ರತಾಪ್‌ ಕರ್ಕೇರ ಅವರು ಉಪಸ್ಥಿತರಿದ್ದರು. 

ವೇದಾ ಸಿ. ಸಾಲ್ಯಾನ್‌ ಅವರು ಪ್ರಸಾದ ಪ್ರಾಯೋಜಕತ್ವವನ್ನು ವಹಿಸಿದ್ದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ  ನಡೆಯಿತು. ಜತೆ ಕೋಶಾಧಿಕಾರಿ ಚಂದ್ರಶೇಖರ ಸಾಲ್ಯಾನ್‌ ಅವರು ವಂದಿಸಿದರು. ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯೆಯರು, ಯುವ ವಿಭಾಗದ ಸದಸ್ಯ-ಸದಸ್ಯೆಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next