Advertisement
ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ನೇಜಾರ್ ಸಂಜೀವ ಕೆ. ಸಾಲ್ಯಾನ್ ಅವರು ಸದಸ್ಯರನ್ನು ಸ್ವಾಗತಿಸಿದ ಬಳಿಕ ಸುತ್ತೋಲೆಯನ್ನು ಓದಿದರು.
Related Articles
Advertisement
ಬೊಕ್ಕಪಟ್ಲ ನೀತಾ ಜೆ. ಮೆಂಡನ್ ಅವರು ಲೆಕ್ಕಪರಿಶೋಧಕರ ಠರಾವನ್ನು ಮಂಡಿಸುತ್ತಾ ಲೆಕ್ಕ ಪರಿಶೋಧಕರಾದ ಮೆಸರ್ಸ್ ರಾವ್ ಆ್ಯಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಅವರನ್ನು ಸೂಚಿಸಿದರು. ಈ ಠರಾವು ಸುರತ್ಕಲ್ ಎನ್. ಮುರಾರಿ ಅವರ ಅನುಮೋದನೆಯೊಂದಿಗೆ ಮಂಜೂರಾಯಿತು. ಬಪ್ಪನಾಡು ರಘುಚಂದ್ರ ಕೋಟ್ಯಾನ್, ಪಡುಬಿದ್ರಿ ಬಿ.ಎನ್. ಕರ್ಕೇರ, ಉಚ್ಚಿಲ ಮಾಧವ ಸುವರ್ಣ, ಕದಿಕೆ ಚಂದ್ರಕಾಂತ್ ಪುತ್ರನ್ ಮತ್ತು ಚರಂತಿಪೇಟೆ ಸದಾನಂದ ಎ. ಕೋಟ್ಯಾನ್ ಅವರು ಮಂಡಳಿಯ ಶ್ರೇಯೋಭಿವೃದ್ಧಿಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನಿತರು.
ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮಂಡಳಿಯು ಕಳೆದ 115 ವರ್ಷಗಳಿಂದ ಸಮಾಜ ಬಾಂಧವರಿಗಾಗಿ ಮೀಸಲಿಟ್ಟ ಹದಿನಾಲ್ಕು ಸಮಾಜ ಕಲ್ಯಾಣ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡುತ್ತಿದೆ. ಮಂಡಳಿಯು ಶೈಕ್ಷಣಿಕ ಸಂಕುಲವನ್ನು ಇನ್ನೂ ವಿಸ್ತರಿಸಬೇಕಾದ ಅಗತ್ಯವಿರುವುದರಿಂದ ಸಮಾಜ ಬಾಂಧವರು, ಮೊಗವೀರ ಗ್ರಾಮ ಸಭಾ ಮತ್ತು ಮೊಗವೀರ ಮೂಲಸ್ತಾನ ಸಭಾದವರು ಎಂದಿನಂತೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಬೇಕೆಂದು ಕೇಳಿಕೊಂಡರು.
ಮಂಡಳಿಯ ಶಾಖೆಗಳು ಸ್ಥಳೀಯ ಸದಸ್ಯರಿಗಾಗಿ ರೂಪುಗೊಂಡಿದ್ದು, ಈ ಶಾಖೆಗಳನ್ನು ಅಲ್ಲಿಯ ಸಮಾಜ ಬಾಂಧವರು ಸಂಪರ್ಕಿಸಿ, ಮಂಡಳಿಯಿಂದ ದೊರೆಯುವ ಸವಲತ್ತುಗಳ ಮಾಹಿತಿಯನ್ನು ಪಡೆಯಬೇಕೆಂದೂ ಅವರು ತಿಳಿಸಿದರು. ಅಧ್ಯಕ್ಷರು ಮಾತು ಮುಂದುವರಿಸುತ್ತಾ, ಮಂಡಳಿಯ ಅಂಧೇರಿ ಶಿಕ್ಷಣ ಸಂಕುಲದಲ್ಲಿ ವಿಶೇಷವಾಗಿ ತುಳು ಕನ್ನಡಿಗರಿಗೆ ಮೀಸಲಾತಿ ಸೌಲಭ್ಯವನ್ನು ಸರಕಾರದ ಅನುಮತಿ ಮೇರೆಗೆ ಪಡೆಯಲಾಗಿದ್ದು, ಅದರ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದು ಅಧ್ಯಕ್ಷರಾದ ಪಣಂಬೂರು ಕೃಷ್ಣಕುಮಾರ್ ಎಲ್. ಬಂಗೇರ ತಿಳಿಸಿದರು.
ಮಂಡಳಿಯಲ್ಲಿ ಹೊಸ ಕ್ರೀಡಾ ತರಬೇತಿ ಕೇಂದ್ರವನ್ನು ಅನುಭವೀ ಕ್ರೀಡಾ ತಜ್ಞರಿಂದ ಸ್ಥಾಪನೆ ಮಾಡಿರುವುದು ಒಂದು ಸಾಧನೆಯಾಗಿದೆ. ಮಂಡಳಿಯ ಈ ಹಿಂದಿನ ಯೋಜನೆಯಂತೆ ದಕ್ಷಿಣ ಕನ್ನಡದಲ್ಲಿ ಚಟುವಟಿಕೆಗಳನ್ನು ವಿಸ್ತರಿಸುವ ಪ್ರಯುಕ್ತ ಮಂಗಳೂರು ಸಮೀಪ ಮೂಡಾ ಸಂಸ್ಥೆಯಿಂದ ಭೂಮಿಯನ್ನು ಖರೀದಿಸಲಾಗಿದ್ದು, ಶೀಘ್ರವೇ ಇಲ್ಲಿನ ಯೋಜನೆಯ ಬಗ್ಗೆ ಯೋಗ್ಯ ನಿರ್ಧಾರವನ್ನು ಮಂಡಳಿಯ ಆಡಳಿತ ಸಮಿತಿಯು ತೆಗೆದುಕೊಳ್ಳಲಿದೆ ಎಂದು ಮಾಹಿತಿಯನ್ನು ನೀಡಿದ ಅವರು, ಮಹಾಸಭೆಯು ಯೋಗ್ಯ ರೀತಿಯಲ್ಲಿ ನಡೆಯಲು ಸಹಕಾರ ನೀಡಿದ ಸದಸ್ಯರೆಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.
ಜೊತೆ ಕಾರ್ಯದರ್ಶಿ ಬೋಳೂರು ಲಕ್ಷ್ಮಣ ಶ್ರೀಯಾನ್ ಅವರು ಮಂಡಳಿಯ ಸದಸ್ಯರಿಗೆ, ದಾನಿಗಳಿಗೆ, ಗ್ರಾಮ ಸಭೆ, ಮೂಲಸ್ಥಾನ ಸಭೆ, ಹೋಬಳಿ ಸಭೆ, ಮಹಾಲಕ್ಷ್ಮಿ ಸೊಸೈಟಿ ಮತ್ತು ಇತರ ಸಂಸ್ಥೆಗಳಿಗೆ, ಸುದ್ದಿ ಮಾಧ್ಯಮಗಳಿಗೆ ಹಾಗೂ ಮಂಡಳಿಯ ಹಿತೈಷಿಗಳೆಲ್ಲರಿಗೂ ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಮಂಡಳಿಯ ಪಾರುಪತ್ಯದಾರರಾದ ಪಡುಬಿದ್ರಿ ಕಾಡಿಪಟ್ಲ ಜಿ.ಕೆ. ರಮೇಶ್, ಹೊಸಬೆಟ್ಟು ಪುರಂದರ ಎನ್. ಸುವರ್ಣ, ಬೆಂಗ್ರೆ ಅಜಿತ್ ಜಿ. ಸುವರ್ಣ, ಉಪಾಧ್ಯಕ್ಷರಾದ ಬಪ್ಪನಾಡು ಶ್ರೀನಿವಾಸ ಸುವರ್ಣ ಮತ್ತು ದೊಡ್ಡಕೊಪ್ಲ ಅರವಿಂದ ಎಲ್.ಕಾಂಚನ್, ಗೌರವ ಪ್ರಧಾನ ಕಾರ್ಯದರ್ಶಿ ನೇಜಾರ್ ಸಂಜೀವ ಕೆ. ಸಾಲ್ಯಾನ್, ಜೊತೆ ಕಾರ್ಯದರ್ಶಿ ಬೋಳೂರು ಲಕ್ಷ್ಮಣ ಶ್ರೀಯಾನ್, ಕದಿಕೆ ದೇವರಾಜ್ ಎಚ್. ಕುಂದರ್, ಬೈಕಂಪಾಡಿ ಧರ್ಮೇಶ್ ಜಿ. ಪುತ್ರನ್, ಗೌರವ ಕೋಶಾಧಿಕಾರಿ ಬಪ್ಪನಾಡು ದಿಲೀಪ್ ಕುಮಾರ್ ಮೂಲ್ಕಿ, ಜೊತೆ ಕೋಶಾಧಿಕಾರಿ ಬೊಕ್ಕಪಟ್ಲ ನೀತಾ ಜೆ. ಮೆಂಡನ್, ಹೊಸಬೆಟ್ಟು ಪ್ರತಾಪ್‌ಕುಮಾರ್ ಕರ್ಕೇರ ಮತ್ತು ಮಂಡಳಿಯ ಕಚೇರಿಯ ಅಕೌಂಟ್ಸ್ ವಿಭಾಗದ ಮುಖ್ಯಸ್ಥೆ ಜಯಲತಾ ಉಪಸ್ಥಿತರಿದ್ದರು.ರಾಷ್ಟ್ರಗೀತೆ ಯೊಂದಿಗೆ ಸಭೆಯು ಮುಕ್ತಾಯ ಗೊಂಡಿತು.