Advertisement
ಅ.8 ರಂದು ಪೂರ್ವಾಹ್ನ ಫೋರ್ಟ್ ಪರಿಸರದ ಕಾಂಜೀ ಕೇತ್ಸಿ ಸಭಾಗೃಹದಲ್ಲಿ ನಡೆದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 76ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕುಲಮಾತೆ ಶ್ರೀ ಮಹಿಷಾಸುರ ಮರ್ದಿನಿಯ ಛತ್ರಚಾಮರದ ನೆರಳಿನಲ್ಲಿ ಬದುಕಿದ ನಾವು ಶಿಥಿಲಗೊಂಡ ದೇಗುಲವನ್ನು 2005 ರಲ್ಲಿ ಶಿಲಾಮಯ ದೇಗುಲವನ್ನಾಗಿ ಪುನರ್ ನಿರ್ಮಿಸಿದ್ದೇವೆ. ಇದು ನಮ್ಮ ಸಮಾಜದ ದಾನಿಗಳಾದ ಸುರೇಶ್ ಕಾಂಚನ್ ಮತ್ತು ಗೋಪಾಲ್ ಪುತ್ರನ್ ಹಾಗೂ ಮುಂಬಯಿ, ಊರಿನ ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ. ಪ್ರಸ್ತುತ ಮಂದಿರವು ಭಕ್ತಾದಿಗಳ ಸೇವೆಗೆ ನಿರಂತರವಾಗಿ ಅನುಕೂಲವಾಗುವಂತೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಇದೇ ರೀತಿಯಲ್ಲಿ ಸಂಸ್ಥೆಯ ಭವನ ನಿರ್ಮಾಣದ ಕನಸು ಶೀಘ್ರದಲ್ಲೇ ನನಸಾಗುವಂತಾಲಿ ಎಂದು ನುಡಿದರು.
Related Articles
Advertisement
ಕಳೆದ ಸಾಲಿನ ಹತ್ತನೇ ತರಗತಿಯಲ್ಲಿ ಶೇ. 95 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಐದು ವಿದ್ಯಾರ್ಥಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಸಮಾಜದ ಸುಮಾರು 20 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನಿತ್ತು ಸಹಕರಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ಎನ್. ಎಚ್. ಬಗ್ವಾಡಿ, ಗೌರವ ಪ್ರಧಾನ ಕಾರ್ಯದರ್ಶಿ ಎನ್. ಎಚ್. ಬಗ್ವಾಡಿ, ಕೋಶಾಧಿಕಾರಿ ಸತೀಶ್ ಶ್ರೀಯಾನ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಾಂಚನ್, ಮಹಾಬಲ ಕುಂದರ್, ಉಪಾಧ್ಯಕ್ಷರುಗಳಾದ ರಮೇಶ್ ಬಂಗೇರ, ರಾಜೇಂದ್ರ ಚಂದನ್, ಸ್ಥಳೀಯ ಸಮಿತಿಗಳ ಅಧ್ಯಕ್ಷರುಗಳಾದ ರಘುರಾಮ ಚಂದನ್, ನಾರಾಯಣ ಚಂದನ್, ಸುರೇಶ್ ನಾಯ್ಕ, ಗೋಪಾಲ್ ಚಂದನ್, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಭಾರತಿ ನಾಯ್ಕ, ವಸಂತಿ ಕುಂದರ್, ಮಂಜುನಾಥ ನಾಯ್ಕ, ರಾಜು ಮೆಂಡನ್ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಮುಖ್ಯಸ್ಥೆಯನ್ನು ತಮ್ಮ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಾವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ, ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಸಹಾಯ-ಸಹಕಾರವು ಸಂಘಕ್ಕೆ ಅತೀ ಅಗತ್ಯವಾಗಿದೆ. ಒಮ್ಮತದ ನಿರ್ಣಯಗಳು ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸಂಸ್ಥೆಯ ಸಮಾಜಪರ ಕಾರ್ಯಕ್ರಮಪ್ರತಿಯೊಬ್ಬರ ಮನೆಮನಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯ ಪ್ರವೃತ್ತರಾಗಬೇಕು. ಆಗ ಸಂಘಟನೆ ಬಲಗೊಳ್ಳಲು ಸಾಧ್ಯವಿದೆ – ಸುರೇಶ್ ಕಾಂಚನ್ (ಮಾಜಿ ಅಧ್ಯಕ್ಷರು : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ). ಸಂಘದ ಏಳ್ಗೆಗಾಗಿ ನಾವೆಲ್ಲರು ಶ್ರಮಿಸೋಣ. ಸಂಘಕ್ಕೆ ಆದಾಯ ಬಂದಾಗ ಮಾತ್ರ ಅದನ್ನು ಸಮಾಜ ಬಾಂಧವರ ಅಭಿವೃದ್ಧಿಗೆ ಬಳಸಲು ಸಾಧ್ಯ. ಪ್ರತಿಯೊಬ್ಬರು ತಮ್ಮ ತಮ್ಮ ಆದಾಯದ ಒಂದು ಅಂಶವನ್ನು ಸಂಘಕ್ಕೆ ನೀಡಿದಾಗ ಸಮು ದಾಯದ ಅಭಿವೃದ್ಧಿªಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರು ಶ್ರಮಿಸೋಣ. ಮಕ್ಕಳು ಸಮಾಜ ಸೇವಾಗುಣವನ್ನು ಬೆಳೆಸಿ ಕೊಂಡು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು
– ಮಹಾಬಲ ಕುಂದರ್ (ಮಾಜಿ ಅಧ್ಯಕ್ಷರು : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ).