ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘವು ಮುಂದಿನ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದೆ. ಶತಮಾನೋತ್ಸವ ಸಂಭ್ರಮಾಚರಣೆಯನ್ನು ಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಎಲ್ಲ ಮೊಗವೀರರನ್ನು ಸೇರಿಸಿಕೊಂಡು ಉಚ್ಚಿಲದಲ್ಲಿ ವಿಶ್ವ ಮೊಗವೀರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ಹೇಳಿದರು.
ಉಚ್ಚಿಲದಲ್ಲಿ ರವಿವಾರ ಜರಗಿದ ಸಂಘದ ಸರ್ವ ಹೋಬಳಿಗಳ, ಗ್ರಾಮ ಪ್ರತಿನಿಧಿಗಳ 99ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಡಾ| ಜಿ. ಶಂಕರ್ ಅವರ ನೇತೃತ್ವದಲ್ಲಿ ಸಮಸ್ತ ಮೊಗವೀರ ಬಂಧುಗಳ ಸಹಕಾರದೊಂದಿಗೆ ಶತಮಾನೋತ್ಸವ ಸಂಭ್ರಮಾ ಚರಣೆಯನ್ನು ಅವಿಸ್ಮರಣೀಯವಾಗಿ ಆಚರಿಸ ಲಾಗುವುದು ಎಂದರು.
ನೂತನ ಅನ್ನಛತ್ರ ಕಟ್ಟಡ, ಅತಿಥಿ ಗೃಹ, ಹಿಂದುಳಿದ ವರ್ಗಗಳ ಹಾಸ್ಟೆಲ್ ಕಟ್ಟಡಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗುರಿಕಾರರಿಗೆ ಗೌರವಧನ ನೀಡುವ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಷ್ ಚಂದ್ರ ಕಾಂಚನ್ ಬೋಳಾರ, ಕೋಶಾಧಿಕಾರಿ ಭರತ್ ಎರ್ಮಾಳ್, ಪ್ರಮುಖರಾದ ಕೇಶವ ಎಂ. ಕೋಟ್ಯಾನ್, ಭರತ್ ಕುಮಾರ್ ಉಳ್ಳಾಲ, ಯಾದವ ಸಾಲಿಯಾನ್, ಕೇಶವ ಶ್ರೀಯಾನ್ ಗುಡ್ಡೆಕೊಪ್ಲ, ಸುಜಿತ್ ಸಾಲ್ಯಾನ್ ಮೂಲ್ಕಿ, ನಾರಾಯಣ ಪಿ. ಕರ್ಕೆರ, ವೈ. ಗಂಗಾಧರ್ ಸುವರ್ಣ, ಸಂಜೀವ ಮೆಂಡನ್, ಯು. ಗಣೇಶ್ ಉದ್ಯಾವರ, ಸುರೇಶ್ ಮೆಂಡನ್, ವಿಜಯ ಕುಂದರ್, ರವೀಂದ್ರ ಶ್ರೀಯಾನ್, ಭುಜಂಗ ಗುರಿಕಾರ, ಸತೀಶ್ ಅಮೀನ್ ಬೆಣ್ಣೆಕುದ್ರು, ಶಂಕರ ಸಾಲ್ಯಾನ್ ಬಾಕೂìರು, ಮೋಹನ್ ಬೇಂಗ್ರೆ, ವಿನಯ ಕರ್ಕೇರ ಮಲ್ಪೆ, ಶಿವರಾಮ ಕೋಟ, ಶರಣ್ ಕುಮಾರ್ ಮಟ್ಟು, ದಿನೇಶ್ ಕೋಟ್ಯಾನ್ ಮೂಳೂರು, ಮನೋಜ್ ಕಾಂಚನ್ ಎರ್ಮಾಳು, ಉಷಾರಾಣಿ ಬೋಳೂರು, ಜಾನಕಿ ಪುತ್ರನ್, ರಾಜ ಎಂ. ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಮೊಗವೀರ ಮಹಾಜನ ಸಂಘದ ಸದಸ್ಯ ಗುಂಡು ಬಿ. ಅಮೀನ್ ವರದಿ ವಾಚಿಸಿ, ವಂದಿಸಿದರು.