Advertisement

ನಾವು ಒಂದಾದರೆ ಬಿಜೆಪಿ 5 ಸ್ಥಾನ ಗೆಲ್ಲಲ್ಲ

01:37 AM Feb 27, 2019 | |

“ರಾಜ್ಯದಲ್ಲಿ ಮೋದಿ ಅಲೆ ಅಥವಾ ಬಿಜೆಪಿ ಅಲೆ ಎಂಬುದು ಬರೀ ಭ್ರಮೆ. ಆ ಪಕ್ಷದ ನಾಯಕರಿಗೂ ಅದು ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ಸಮನ್ವಯತೆಯಿಂದ ಹೋರಾಟ ಮಾಡಿದರೆ ಬಿಜೆಪಿ ಐದು ಸ್ಥಾನದ ಮೇಲೆ ಗೆಲ್ಲುವುದು ಕಷ್ಟ’. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರ ಮಾತುಗಳಿವು. ಪ್ರಸಕ್ತ ರಾಜಕೀಯ ವಿದ್ಯ ಮಾನಗಳ ಬಗ್ಗೆ “ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾ ವಣೆ ಯಲ್ಲಿ ನಮ್ಮ ಎರಡೂ ಪಕ್ಷಗಳ ಅಜೆಂಡಾ ಬಿಜೆಪಿಯನ್ನು ಸೋಲಿಸುವುದು ಮಾತ್ರ ಎಂದರು.

Advertisement

ಲೋಕಸಭಾ ಚುನಾವಣೆಗೆ ಜೆಡಿಎಸ್‌ ಸಿದಟಛಿತೆ ಹೇಗಿದೆ?
ನಾವು ಪೂರ್ಣ ಪ್ರಮಾಣದಲ್ಲಿ ಸಜ್ಜಾಗುತ್ತಿದ್ದೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯವರ ಮಾರ್ಗ ದರ್ಶನದಲ್ಲಿ ಚುನಾವಣಾ ಸಿದಟಛಿತೆ ನಡೆದಿದೆ. ಸದ್ಯದಲ್ಲೇ ರಾಜ್ಯ ಪ್ರವಾಸವೂ ಆರಂಭವಾಗಲಿದೆ.

ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆ ಗೊಂದಲ ಎಲ್ಲಿಯವರೆಗೆ ಬಂದಿದೆ?
ಗೊಂದಲ ಎಂತದ್ದೂ ಇಲ್ಲ. ಅವೆಲ್ಲವೂ ಸೃಷ್ಟಿ. ಎರಡು ಪಕ್ಷಗಳ ಸೀಟು ಹೊಂದಾಣಿಕೆ ಎಂದಾಗ ಸಹಜವಾಗಿ ಸಣ್ಣಪುಟ್ಟ ಸಮಸ್ಯೆ ಇರುತ್ತದೆ. ಅದು ಇತ್ಯರ್ಥವಾಗದ ದೊಡ್ಡ ಸವಾಲು ಅಲ್ಲ.

 ಜೆಡಿಎಸ್‌ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆಯಾ.
ಹೌದು. ಆದರೆ, ಅಷ್ಟು ಬೇಕೇ, ಬೇಕು ಎಂದು ನಾವೇನೂ ಹಠ ಹಿಡಿದು ಕುಳಿತಿಲ್ಲ. ಹಾಗೆಂದು ಕೊಟ್ಟಷ್ಟು ಕೊಡಿಎಂಬ ಮಾತೂ ಇಲ್ಲ. ಗೌರವಯುತವಾಗಿ ಸೀಟು ಹಂಚಿಕೆ ಯಾಗಬೇಕು. ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಸಂಪುಟ, ನಿಗಮ ಸೇರಿ 3ನೇ ಒಂದು ಭಾಗ ಎಂದು ಒಪ್ಪಂದವಾಗಿ ದೆ. ಅದೇ ಸೂತ್ರ ಇಲ್ಲೂ ಅನ್ವಯವಾಗಬೇಕಲ್ಲವೇ.

 ಜೆಡಿಎಸ್‌ಗೆ ಅಷ್ಟೂ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರಾ?
ಖಂಡಿತ ಇದ್ದಾರೆ. ಅಭ್ಯರ್ಥಿಗಳು ಇರುವುದರಿಂದಲೇ ನಾವು ಕ್ಷೇತ್ರ ಕೇಳುತ್ತಿದ್ದೇವೆ. ಪಕ್ಷದ ಸಾಮರ್ಥ್ಯ ಇಲ್ಲದೆ ಸೀಟು ಕೇಳಲು ಸಾಧ್ಯವಾ.

Advertisement

ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಮೇಲೆ ಸವಾರಿ ಮಾಡ್ತಿದಿಯಾ?
ಇಲ್ಲಿ ಸವಾರಿ ಪ್ರಶ್ನೆಯೇ ಇಲ್ಲ. ಗೆಲ್ಲುವುದೊಂದೇ ಗುರಿ.

 ಹಾಗಾದರೆ, ಕುಮಾರಸ್ವಾಮಿಯವರು ಯಾಕೆ ಬೆಗ್ಗರ್ ಪದ ಬಳಕೆ ಮಾಡಿದರು?
ಸೀಟು ಹಂಚಿಕೆ ಮಾತುಕತೆ ಗೌರವಯುತವಾಗಿ ನಡೆಯಬೇಕು. ಎರಡೂ ಪಕ್ಷಗಳಲ್ಲೂ ತ್ಯಾಗದ ಮನೋಭಾವ ಇರಬೇಕು. ಆದರೆ, ಕಾಂಗ್ರೆಸ್‌ನ ಜಿಲ್ಲಾ ನಾಯಕರು ತಮಗೆ ಬೇಕಾದಂತೆ ಮಾತನಾಡುವುದು ಸರಿಯೇ.

ನೀವು ಕಾಂಗ್ರೆಸ್‌ನಲ್ಲೇ ಇದ್ದವರು. ಅಲ್ಲಿ ನಾಯಕರ ಕೋಟಾದಡಿ ಸೀಟು ಹಂಚಿಕೆಯಾಗುತ್ತದೆ ಎಂಬ
ಮಾತಿದೆಯಲ್ಲಾ?

ನೋಡಿ, ಎರಡೂ ಪಕ್ಷಗಳ ಗುರಿ ಬಿಜೆಪಿಯನ್ನು ಸೋಲಿಸುವುದು ಎಂದಾದರೆ. ದೇವೇಗೌಡರ ಕ್ಯಾಂಡಿಡೇಟ್‌, ಸಿದ್ದರಾಮಯ್ಯನವರ ಕ್ಯಾಂಡಿಡೇಟ್‌, ಕುಮಾರಸ್ವಾಮಿ ಕ್ಯಾಂಡಿಡೇಟ್‌, ಪರಮೇಶ್ವರ್‌ ಕ್ಯಾಂಡಿಡೇಟ್‌, ವಿಶ್ವನಾಥ್‌ ಕ್ಯಾಂಡಿಡೇಟ್‌ ಎಂಬ ಪ್ರಶ್ನೆ ಬರಬಾರದು. ಜನಕ್ಕೆ ಬೇಕಾದವರಿಗೆ ನಾವು ಟಿಕೆಟ್‌ ಕೊಡಬೇಕು.

ಹಾಲಿ ಕಾಂಗ್ರೆಸ್‌ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್‌ ಕೇಳುವುದು ನ್ಯಾಯವಾ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಪಡೆದಿದ್ದ ಎಷ್ಟು ಮಂದಿ ಹಾಲಿಯಾಗಿದ್ದ ಸದಸ್ಯರು ಮತ್ತೆ ಗೆದ್ದು ಬಂದರು. ಹೀಗಾಗಿ, ಈಗಿನ ಪರಿಸ್ಥಿತಿಯಲ್ಲಿ ಗೆಲ್ಲುವ ಅವಕಾಶ ಹೆಚ್ಚಾಗಿರುವವರು ಸ್ಪರ್ಧೆ ಮಾಡಲಿ ಎಂಬುದಷ್ಟೇ ನಮ್ಮ ವಾದ.

ಹಾಲಿ ಸಂಸದರಿಗೆ ಟಿಕೆಟ್‌ ತಪ್ಪಿದರೆ ಆಕ್ರೋಶ, ಅತೃಪ್ತಿ, ಬಂಡಾಯದಿಂದ ಅಧಿಕೃತ ಅಭ್ಯರ್ಥಿ
ಗೆಲುವಿನ ಮೇಲೆ ಪರಿಣಾಮ ಬೀರುವುದಿಲ್ಲವೇ?

ಸಮಾಧಾನಪಡಿಸುವ ಹೊಣೆಗಾರಿಕೆ ನಾಯಕರದ್ದು. ಟಿಕೆಟ್‌ ತಪ್ಪಿದವರಿಗೆ ಬೇರೆ ರೀತಿಯಲ್ಲಿ ಕಾಂಪನ್‌ಸೆಟ್‌ ಮಾಡಬೇಕು. ಕೆಲವು ಕ್ಷೇತ್ರಗಳಲ್ಲಿ ಈಗಿನ ಸಂಸದರೇ ನಿಂತರೆ ಮತ್ತೆ ಗೆಲ್ಲುವುದು ಕಷ್ಟವಿದೆ. ಅದು ಕಾಂಗ್ರೆಸ್‌ಗೂ ಗೊತ್ತಿದೆ.

 ಅಭ್ಯರ್ಥಿ ಬದಲಾಯಿಸಬಹುದಲ್ಲವಾ?
ಅದೂ ಸಹ ಎರಡೂ ಪಕ್ಷಗಳ ನಾಯಕರ ನಡುವಿನ ಚರ್ಚೆಯಲ್ಲಿ ಪ್ರಸ್ತಾಪವಾಗುತ್ತದೆ. ಎಲ್ಲವನ್ನೂ ಸಮಾಧಾನ ದಿಂದ ಪರಿಗಣಿಸಿಯೇ ಒಮ್ಮತದ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಲ್ಲಿ ಯಾರಿಗೂ ಪ್ರತಿಷ್ಠೆಯ ಅಗತ್ಯವಿಲ್ಲ.

 ಜೆಡಿಎಸ್‌ ಬೇಡಿಕೆ ಇಟ್ಟಿರುವ ಕ್ಷೇತ್ರಗಳು ಯಾವುವು?
ಆ ವಿಚಾರವನ್ನು ಎರಡೂ ಪಕ್ಷಗಳ ನಾಯಕರ ನಡುವೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಅದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ನಾನು ಮೊದಲೇ ಹೇಳಿದಂತೆ ನಮ್ಮೆಲ್ಲರ ಪರಮ ಗುರಿ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದು. ಹೀಗಾಗಿ, ನಾವು ಎರಡೂ ಕಡೆಯಿಂದ ತ್ಯಾಗಕ್ಕೆ ಸಿದಟಛಿರಾಗಬೇಕು. ಯಾರಿಗೂ, ಯಾವ ರೀತಿಯ ಪ್ರತಿಷ್ಠೆಯೂ ಬೇಡ, ವೈಯಕ್ತಿಕ ಹಿತಾಸಕ್ತಿಯೂ ಬೇಡ.

 ಮೊದಲ ಹಂತದ ಮಾತುಕತೆ ನಿಮಗೆ ತೃಪ್ತಿ ತಂದಿದೆಯಾ?
ಖಂಡಿತವಾಗಿಯೂ ತಂದಿದೆ. ಎಲ್ಲವನ್ನೂ ಸಮಾಧಾನದಿಂದ ಮಾತನಾಡಿದ್ದೇವೆ. ರಾಷ್ಟ್ರ ಹಾಗೂ ರಾಜ್ಯದ ಭವಿಷ್ಯದ ದೃಷ್ಟಿಯಿಂದ ನಮ್ಮ ಚರ್ಚೆ ಸಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜ್ಯದ ಎರಡು ಜಾತ್ಯತೀತ ಶಕ್ರಿಗಳು. ಅವರೆಡೂ ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ಜನರ ಆಶಯವೂ ಹೌದು. ಹೀಗಾಗಿ, ನಾವು ಮುಕ್ತವಾಗಿ ಚರ್ಚೆ ನಡೆಸುತ್ತಿದ್ದೇವೆ.

 ಪ್ರಸಕ್ತ ಸನ್ನಿವೇಶದಲ್ಲಿ ಮೋದಿ ಹಾಗೂ ಬಿಜೆಪಿಯನ್ನು ಎದುರಿಸುವುದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಸಾಧ್ಯವಿದೆಯಾ?
ರಾಜ್ಯದಲ್ಲಿ ಮೋದಿ ಅಲೆ ಅಥವಾ ಬಿಜೆಪಿ ಅಲೆ ಎಂಬುದು ಬರೀ ಭ್ರಮೆ. ಆ ಪಕ್ಷದ ನಾಯಕರಿಗೂ ಅದು ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ಮನದಾಳದಿಂದ  ಜತೆಗೂಡಿದರೆ ಬಿಜೆಪಿ ಐದು ಸ್ಥಾನದ ಮೇಲೆ ಗೆಲ್ಲುವುದುಕಷ್ಟ. ಇದು ವಾಸ್ತವಾಂಶ.

ರಾಷ್ಟ್ರ ರಾಜಕಾರಣದಲ್ಲಿ ಬೇರೆಯೇ ವಾತಾವರಣ ಇದೆಯಲ್ಲಾ?
ಅವೆಲ್ಲವೂ ಕೇವಲ ಸೃಷ್ಟಿ. ಚುನಾವಣೆ ನಂತರ ಅಸಲೀ ಯತ್ತು ಏನು ಎಂಬುದು ನಿಮಗೇ ಗೊತ್ತಾಗುತ್ತದೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಯಾವ ಆಧಾರದಲ್ಲಿ ಮತ ಕೇಳಲಿವೆ?
ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯೇತರ ಪಕ್ಷಗಳಿಗೆ ಮತ ನೀಡಬೇಕು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕಡಿಮೆ ಅವಧಿಯಲ್ಲಿ ಮಾಡಿರುವ ಸಾಧನೆಯನ್ನೂ ಪರಿಗಣಿಸಿ ಎಂದು ಮತದಾರರಲ್ಲಿ ಮನವಿ ಮಾಡಲಿದ್ದೇವೆ 

ಜನಕ್ಕೆ ಬೇಕಾದವರು ಇಂತವರೇ ಎಂಬುದಕ್ಕೆ ಮಾನದಂಡವೇನು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು- ಗೆಲುವಿಗೆ ಕಾರಣವಾದ ಅಂಶಗಳು. ಇತ್ತೀಚೆಗಿನ ವಿಧಾನಸಭಾ ಚುನಾವಣೆಯ ಮತಗಳಿಕೆ. ಹಾಲಿಸಂಸದರುಗಳ ಪ್ರಭಾವ, ವರ್ಚಸ್ಸು, ಸಾಮರ್ಥ್ಯ ಆಧಾರದಲ್ಲಿ ಖಂಡಿತವಾಗಿಯೂ ಗುರುತಿಸಬಹುದು.

ಸೀಟು ಹಂಚಿಕೆ ಮಾತುಕತೆ ಸುಸೂತ್ರವಾಗಿ ಬಗೆಹರಿಯುತ್ತಾ?
ಅನುಮಾನವೇ ಬೇಡ. ಮಾರ್ಚ್‌ 5ರ ವೇಳೆಗೆ ನಿಮಗೇ ಗೊತ್ತಾಗಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ದೇವೇಗೌಡರು ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲೇ ಸೀಟು ಹಂಚಿಕೆ ವಿಷಯವನ್ನು ಪ್ರಕಟಿಸಲಿದ್ದಾರೆ.

ಸಂದರ್ಶನ – ಎಸ್‌.ಲಕ್ಷ್ಮಿ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next