Advertisement

ಪ್ರಧಾನಿ ಮೋದಿಗೆ ಆರ್‌ಎಸ್‌ಎಸ್‌ ರಿಮೋಟ್‌: ಸಿದ್ದು ಲೇವಡಿ 

12:30 AM Mar 07, 2019 | |

ಮಂಗಳೂರು: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರಿಮೋಟ್‌ ಕಂಟ್ರೋಲ್‌ ಎಂಬ ರೀತಿಯ ಹೇಳಿಕೆ ನೀಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ. 

Advertisement

ಬಜಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, “ಹಾಗಾದರೆ ಮೋದಿಗೆ ಯಾರು ರಿಮೋಟ್‌ ಕಂಟ್ರೋಲ್‌ ಇದ್ದಾರೆ ಪ್ರಜಾಪ್ರಭುತ್ವದಲ್ಲಿ ರಿಮೋಟ್‌ ಅನ್ನೋದು ಒಂದು ಇರುತ್ತಾ? ರಾಜಕೀಯ ಮಾತನಾಡಲಿ, ಆದರೆ ಮೋದಿ ಅಸಂಬದ್ಧವಾಗಿ ಮಾತನಾಡಬಾರದು. ಅವರು ಈ ದೇಶದ ಪ್ರಧಾನ ಮಂತ್ರಿ. ಮೋದಿ ರಿಮೋಟ್‌ ಕಂಟ್ರೋಲ… ಯಾರು ಅಂತಾ ಹೇಳಬೇಕೇ? ಆರೆಸ್ಸೆಸ್‌ನವರು ಎಂದು ಉತ್ತರಿಸಿದರು. 

ಕಾಂಗ್ರೆಸ್‌ ಶಾಸಕ ಉಮೇಶ್‌ ಜಾಧವ್‌ ರಾಜೀನಾಮೆ ಕೊಟ್ಟಿ¨ªಾರೆ. ಅದಕ್ಕೆ ಇನ್ನೂ ಸ್ಪೀಕರ್‌ ಅನುಮೋದನೆ ನೀಡಿಲ್ಲ. ನಾವು ಜಾಧವ್‌ ಸೇರಿ ನಾಲ್ಕು ಜನರ ಮೇಲೆ ದೂರು ನೀಡಿದ್ದೆವು. ಅದರ ವಿಚಾರಣೆ ನಡೆಯುತ್ತಿದೆ. ಈಗಲೇ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಅಪರಾಧವಾಗುತ್ತದೆ. ರಾಜೀನಾಮೆ ಅಂಗೀಕಾರವಾಗದೆ ಬಿಜೆಪಿ ಸಮಾವೇಶದಲ್ಲಿ ಹೇಗೆ ಭಾಗವಹಿಸುತ್ತಾರೆ? ಹೀಗಾಗಿ ಅಗತ್ಯವಿದ್ದರೆ ಜಾಧವ್‌ ಮೇಲೆ ಮತ್ತೆ ಕೇಸ್‌ ಬಗ್ಗೆ ಚಿಂತಿಸಲಾಗುವುದು ಎಂದರು.

ತಿಲಕದ ವಿಶ್ಲೇಷಣೆ!
ಸಿದ್ದರಾಮಯ್ಯ ಮಾತನಾಡಿ, “ತಿಲಕ ಅಂದ್ರೆ ಸಣ್ಣದಾಗಿ ಇಡಬೇಕು. ದೊಡ್ಡ ನಾಮ ನೋಡಿದರೆ ನನಗೆ ಭಯ ಆಗುತ್ತದೆ. ನಾನು ತಿಲಕ ಇಡಲ್ಲ, ಹಾಗಾದರೆ ನಾನು ಹಿಂದೂ ಅಲ್ವಾ ? ಉದ್ದ ನಾಮ ಹಾಕುವವರು ಬಿಜೆಪಿಯವರು. ತಿಲಕ ಅಂದರೆ ಸಣ್ಣದಾಗಿ ಹಾಕಬೇಕು’ ಎಂದು ನಾಮದ ಬಗ್ಗೆ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next