Advertisement
ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಸಾವು ನನ್ನನ್ನು ಬಹಳ ಡಿಸ್ಟರ್ಬ್ ಮಾಡಿತು. ಹೀಗಾಗಿ ಸಮಾಜದ ಪರವಾಗಿ ನನ್ನ ಅನಿಸಿಕೆ ಹೇಳಬೇಕು ಎಂದು ಆಳುವವರನ್ನು ಪ್ರಶ್ನೆ ಮಾಡಿದರೆ, ಉತ್ತರ ಕೊಡುವ ಬದಲಿಗೆ ಇವರ ಬಗ್ಗಯೇ ಏಕೆ ಮಾತಾಡ್ತೀರಿ ಎಂದು ಮರು ಪ್ರಶ್ನೆ ಹಾಕುತ್ತಿದ್ದಾರೆ. ಜತೆಗೆ ಇಷ್ಟು ದಿನ ಶ್ರೇಷ್ಠ ನಟನಾಗಿದ್ದವನು ಈಗ ನಟನೇ ಅಲ್ಲ ಅನ್ನುವಷ್ಟರ ಮಟ್ಟಕ್ಕೆ ಹೋಗಿದ್ದಾರೆ ಎಂದರು.
Related Articles
Advertisement
ನಲಪಾಡ್ ಹೊಗಲಿದ್ದು ಮುಜುಗರವಾಗಿದೆ: ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಪ್ರಕರಣದಿಂದ ನನಗೆ ಮುಜುಗರವಾಗಿದೆ. ಶಾಂತಿನಗರದಲ್ಲಿ ತಮಿಳರು ಸಂಕ್ರಾಂತಿ ಆಚರಣೆಗೆ ಕರೆದಾಗ ಹೋಗಿದ್ದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಾನು ದತ್ತು ತೆಗೆದುಕೊಂಡಿರುವ ಗ್ರಾಮದ ಅಭಿವೃದ್ಧಿ ಕೆಲಸಗಳಿಗಾಗಿ ನಲಪಾಡ್, 2 ಲಕ್ಷ ರೂ. ನೀಡಿದ್ದರಿಂದ ಆ ಕ್ಷಣಕ್ಕೆ ನಾನು ಆತನನ್ನು ಹೊಗಳಿದ್ದು ನಿಜ. ಆತ ಇಷ್ಟು ದೊಡ್ಡ ರಾಕ್ಷಸ ಎಂದು ಗೊತ್ತಿರಲಿಲ್ಲ. ಈ ಘಟನೆ ಆದ ನಂತರ ಹೊಗಳಿದ್ದಕ್ಕೆ ವಿಷಾದ ವ್ಯಕ್ತಪಡಿಸಿ, ಘಟನೆಯನ್ನು ಖಂಡಿಸಿದ್ದೇನೆ. ಜತೆಗೆ ಹಣವನ್ನೂ ವಾಪಸ್‌ಕಳುಹಿಸಿದ್ದೇನೆ. ಈ ಪ್ರಕರಣದಿಂದ ನನಗೂ ಜವಾಬ್ದಾರಿ ಇರಬೇಕು ಎಂಬ ಪಾಠ ಕಲಿತಿದ್ದೇನೆ. ಇನ್ನು ಮುಂದೆ ಯಾರನ್ನಾದರೂ ಹೊಗಳಬೇಕಾದರೆ ಪೂರ್ವಾಪರ ತಿಳಿದುಕೊಂಡು ಮಾತನಾಡುತ್ತೇನೆ.
ನೈಜತೆ ಮಾತನಾಡಿದರೆ ಟೀಕೆ ಎದುರಿಸಬೇಕು: ಇತ್ತೀಚಿನ ನನ್ನ ನಡವಳಿಕೆಯಿಂದ ನಮ್ಮ ಮನೆಯಲ್ಲೂ ಕೆಲ ಬದಲಾವಣೆಗಳಾಗಿವೆ. ಈ ಹಿಂದೆ ಅಮ್ಮ ದಿನಕ್ಕೊಮ್ಮೆ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದಳು. ಈಗ ಎರಡು ಬಾರಿ ಹೋಗುತ್ತಿದ್ದಾಳೆ. ನನ್ನ ಹೆಂಡತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತಾಳೆ. ಅಮೆರಿಕಾದಲ್ಲಿರುವ ಮಗಳು ಆಗಾಗ ಕರೆ ಮಾಡಿ ಅಪ್ಪ ಸೇಫಾಗಿದ್ದೀರಾ ಎಂದು ಕೇಳುತ್ತಾಳೆ. ನನ್ನ ಸ್ನೇಹಿತನ ಎಂಟು ವರ್ಷದ ಮಗಳು ಕರೆ ಮಾಡಿ ಅಂಕಲ್, ಮೋದಿ ಅವರ ಬಗ್ಗೆ ಮಾತನಾಡಬೇಡಿ ಎನ್ನುತ್ತಾಳೆ. ಇಲ್ಲಿಯವರೆಗೂ ಹೋಗಿದ್ಯಾ ಈ ಘಟನೆಗಳು ಎಂದು ನನಗೇ ಅನಿಸುತ್ತೆ. ಇತ್ತೀಚಿನ ಈ ಘಟನಾವಳಿಗಳು ಎಷ್ಟೊಂದು ಭಯ ಹುಟ್ಟಿಸಿದೆ. ಆದರೆ, ನೈಜತೆ ಮಾತನಾಡಿದರೆ ಇಷ್ಟೆಲ್ಲ ಎದುರಿಸಬೇಕಾಗುತ್ತದೆ ಎಂದು ಈಗ ಅನಿಸಿದೆ. ಇದೆಲ್ಲ ಬೇಕಿತ್ತು ಅಂತಲೇ ಮಾತನಾಡುತ್ತಿದ್ದೇನೆ.
ಈ ಘಟನೆಗಳಿಂದ ನನ್ನ ಸಿನಿಮಾ ಕೆರಿಯರ್‌ಗೆ ಹೊಡೆತ ಬಿದ್ದಿಲ್ಲ. ಇನ್ನೂ ಒಂದು ವರ್ಷದವರೆಗೆ ನನ್ನ ಡೇಟ್ಸ್ ಇಲ್ಲ. ಕನ್ನಡ, ಹಿಂದಿ, ಮಲಯಾಳಂ ಸೇರಿ ಅನೇಕ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದೇನೆ. ಇನ್ನೂ 20 ಸ್ಕ್ರಿಫ್ಟ್ಗಳಿಗೆ ನನ್ನ ಡೇಟ್ಸ್ ಕೇಳುತ್ತಿದ್ದಾರೆ. ಆಗಲ್ಲ ಎನ್ನುತ್ತಿದ್ದೇನೆ.-ಪ್ರಕಾಶ್ ರೈ, ಬಹುಭಾಷಾ ನಟ