Advertisement

ಮೋದಿಯಿಂದ ಎನ್‌ಪಿಸಿಗೆ ಸಂಪುಟ ಸ್ಥಾನದ ಆಫ‌ರ್‌?

08:50 AM Sep 12, 2017 | Team Udayavani |

ಮುಂಬಯಿ: ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಆಫ‌ರ್‌ ಅನ್ನು ಪ್ರಧಾನಿ ಮೋದಿ ಮಾಡಿದ್ದರೆಂದು ಶಿವಸೇನೆ ಆರೋಪಿಸಿದೆ. ಪಕ್ಷದ ಮುಖವಾಣಿ  “ಸಾಮ್ನಾ’ದ ಸಂಪಾದಕೀಯದಲ್ಲಿ ಈ ಆರೋಪ ಮಾಡಲಾಗಿದೆ.

Advertisement

ಇತ್ತೀಚೆಗೆ ಪವಾರ್‌ರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಪುತ್ರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು ಎಂದಿದ್ದರು ಎಂದು ಪತ್ರಿಕೆ ಸಂಪಾದಕ ಸಂಜಯ ರಾವುತ್‌ ಹೇಳಿಕೊಂಡಿದ್ದಾರೆ. ಈ ವೇಳೆ ಸುಪ್ರಿಯಾ ಕೂಡ ಇದ್ದರೆಂದು ರಾವತ್‌ ತಿಳಿಸಿದ್ದಾರೆ. ಮಹಾರಾಷ್ಟ್ರ ಬಿಜೆಪಿ ನಾಯಕರನ್ನು ಸಂಪರ್ಕಿಸಿಯೇ ಪವಾರ್‌ ಹೇಳಿಕೆ ನೀಡುತ್ತಾರೆ ಎಂದಿದ್ದಾರೆ. ಆದರೆ ಪವಾರ್‌ ಎನ್‌ಡಿಎ ಜತೆ ಸೇರಿಕೊಳ್ಳು ವುದಿಲ್ಲ ಎಂದು ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಆಧಾರ ರಹಿತ ವರದಿಗಳು ಬರುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ ದ್ದಾರೆ ಎಂದು ರಾವುತ್‌ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿ ಯಿಸಿದ ಬಿಜೆಪಿ, ಪವಾರ್‌ ಮತ್ತು ರಾವುತ್‌ ಯಾವ ನಂಬಿಕೆ ಉಳಿಸಿಕೊಂಡಿದ್ದಾರೆಂದು ಪ್ರಶ್ನಿಸಿದೆ. ಜತೆಗೆ ಇದೆಲ್ಲ ಸುಳ್ಳು ಎಂದು ಎಂದು ಎನ್‌ಸಿಪಿ ಮತ್ತು ಬಿಜೆಪಿ ಪ್ರತಿಪಾದಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next