Advertisement

ಮೋದಿಗೆ ದ.ಭಾರತದ ಬಗ್ಗೆ ಹಗೆತನ: ರಾಹುಲ್‌

12:28 AM Apr 03, 2019 | sudhir |

ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದವರ ಬಗ್ಗೆ ಹಗೆತನ ಹೊಂದಿದ್ದಾರೆ. ದಕ್ಷಿಣ ಭಾರತದವರ ಜೊತೆಗೆ ನಾನಿದ್ದೇನೆ ಎಂಬುದನ್ನು ಸಾಬೀತು ಪಡಿಸಲು ಕೇರಳದ ವಯನಾಡ್‌ನಿಂದ ಸ್ಪರ್ಧೆಗೆ ನಿರ್ಧರಿಸಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿಳಿಸಿದ್ದಾರೆ.
ಅಮೇಠಿಯ ಜೊತೆಗೆ ಕೇರಳದ ವಯನಾಡ್‌ನ‌ಲ್ಲೂ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ ಅಧ್ಯಕ್ಷರು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಕುರಿತ ಪ್ರಶ್ನೆಗೆ ರಾಹುಲ್‌ ಹೀಗೆ ಉತ್ತರಿಸಿದ್ದಾರೆ. “ಹಾಲಿ ಸರ್ಕಾರವು ನಮ್ಮನ್ನು ಜೊತೆಗೆ ಕರೆದೊಯ್ಯುತ್ತಿಲ್ಲ ಎಂಬ ಪ್ರಬಲ ಭಾವನೆಯೊಂದು ದಕ್ಷಿಣ ಭಾರತದವರಲ್ಲಿದೆ. ಯಾವುದೇ ನಿರ್ಧಾರ ಕೈಗೊಂಡರೂ ತಮ್ಮನ್ನು ಒಳಗೊಳ್ಳುವಂತೆ ಮಾಡುತ್ತಿಲ್ಲ ಎಂದೂ, ಪ್ರಧಾನಿ ಮೋದಿ ನಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂಬ ಭಾವನೆಯೂ ಅವರಲ್ಲಿದೆ. ಹೀಗಾಗಿ, ನಾನು ನಿಮ್ಮೊಂದಿಗಿದ್ದೇನೆ ಮತ್ತು ಯಾವತ್ತೂ ಇರುತ್ತೇನೆ ಎಂಬ ಸಂದೇಶವನ್ನು ದಕ್ಷಿಣ ಭಾರತಕ್ಕೆ ನೀಡಲು ನಾನು ಬಯಸಿದ್ದೆ. ಅದೇ ಕಾರಣಕ್ಕಾಗಿ ಕೇರಳದಲ್ಲಿ ಕಣಕ್ಕಿಳಿ ಯಲು ನಿರ್ಧರಿಸಿದೆ’ ಎಂದಿದ್ದಾರೆ ರಾಹುಲ್‌.

Advertisement

ಮೈತ್ರಿಗೆ ನಾವು ಮುಕ್ತ
ದೆಹಲಿಯಲ್ಲಿ ಆಪ್‌ ಜತೆ ಮೈತ್ರಿ ಮಾಡಿಕೊಳ್ಳು ತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ದೇಶಾದ್ಯಂತ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಈಗಾಗಲೇ ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಹಾಗೂ ಇತರೆ ರಾಜ್ಯಗಳಲ್ಲಿ ಸಮಾನಮನಸ್ಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ನಾನು ಎಲ್ಲರನ್ನೂ ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ಕೇಳಿಕೊಳ್ಳುವು ದಿಷ್ಟೆ. ದಯವಿಟ್ಟು ನಮ್ಮ ಪ್ರಣಾಳಿಕೆಯನ್ನು ಓದಿ. ನೈಜ ವಿಚಾರಗಳನ್ನಿಟ್ಟುಕೊಂಡು ಲೋಕ ಸಭೆ ಚುನಾವಣೆ ಎದುರಿಸಿ.
– ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next