Advertisement

ಮೋದಿಗೆ ಕಾಡ್ತಿದೆ ಗುಜರಾತ್‌ ಸೋಲಿನ ಭಯ

06:20 AM Dec 01, 2017 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿಗೆ ಗುಜರಾತ್‌ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದ್ದು, ಈ ಹಿಂದೆ ಇದ್ದಂತ ಆತ್ಮವಿಶ್ವಾಸ ಇಲ್ಲದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Advertisement

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದಿಂದ ಗುರುವಾರ ಮೈಸೂರಿನಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಐಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೋದಿ ಅವರಿಗಿದ್ದ ಆತ್ಮವಿಶ್ವಾಸ, ಪ್ರಧಾನಮಂತ್ರಿಯಾದ ನಂತರ ಇಲ್ಲದಂತಾಗಿದೆ. ಹೀಗಾಗಿ, ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಸೋಲಿನ ಭಯ ಶುರುವಾಗಿದೆ. ಇದೇ ಕಾರಣಕ್ಕಾಗಿ ಗುಜರಾತ್‌ನ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಧಾನಿಯೊಬ್ಬರು ಇಷ್ಟೊಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿರುವುದು ದೇಶದ ಇತಿಹಾಸದಲ್ಲೇ ಮೊದಲು. ಗುಜರಾತ್‌ನಲ್ಲಿ ಇಂದಿರಾ ಗಾಂಧಿ ವಿರುದ್ಧ ಮೋದಿ ಅವರ ಭಾಷಣ ಚುನಾವಣೆಗಾಗಿ ಮಾಡುವ ಭಾಷಣವಾಗಿದ್ದು, ಇದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಜೆಡಿಎಸ್‌ಗೆ ಮತ ಹಾಕಬೇಡಿ:
ಜಾತ್ಯತೀತ ಶಕ್ತಿಗಳ ವಿಭಜನೆಯಿಂದ ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಅಂತಹ ಸನ್ನಿವೇಶ ಕರ್ನಾಟಕದಲ್ಲಿ ಬರದಂತೆ ತಡೆಯಬೇಕಿದೆ. ಜೆಡಿಎಸ್‌ನವರು ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ತಮ್ಮ ತಕರಾರಿಲ್ಲ. ಆದರೆ, ಜಾತ್ಯತೀತರು ಎಂದು ಹೇಳಿಕೊಂಡು ಕೋಮುವಾದಿಗಳ ಜತೆ ಅಧಿಕಾರ ಹಂಚಿಕೊಳ್ಳುವುದು ನಿಜವಾದ ಜಾತ್ಯತೀತತೆ ಅಲ್ಲ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್‌ ಕಾರಣ. ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಎಂತಹ ಸಂದರ್ಭ ಬಂದರೂ ಕಾಂಗ್ರೆಸ್‌ ಕೋಮುವಾದಿಗಳ ಜತೆ ಕೈಜೋಡಿಸಲ್ಲ. ಅಧಿಕಾರಕ್ಕೋಸ್ಕರ ಪ್ರಜಾಪ್ರಭುತ್ವದ ಹೆಸರಲ್ಲಿ ಕೋಮುವಾದಿಗಳ ಜತೆ ಅಧಿಕಾರ ಹಂಚಿಕೊಳ್ಳುವುದು ಜಾತ್ಯತೀತತೆಗೆ ಮಾಡುವ ದ್ರೋಹ. ಹೀಗಾಗಿ, ಅಲ್ಪಸಂಖ್ಯಾತರು ಜೆಡಿಎಸ್‌ ಬೆಂಬಲಿಸಬಾರದು ಎಂದು ಮನವಿ ಮಾಡಿದರು.

ನಾಡಗೀತೆ ಹೇಳಲು ಹೋಗಿ ಸಿಎಂ ಯಡವಟ್ಟು
ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತರ ಐಕ್ಯತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕರ್ನಾಟಕವನ್ನು ಕುವೆಂಪು ಅವರು ನಾಡಗೀತೆಯಲ್ಲಿ ಬರೆದಿರುವಂತೆ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಲು ಹೋಗಿ ತಡವರಿಸಿದರು.

ಸರ್ವಜನಾಂಗದ ಶಾಂತಿಯ ತೋಟ
ಸರ್ವಜನಾಂಗದ ಶಾಂತಿಯ ತೋಟ    
ಸರ್ವಜನಾಂಗದ ಕಣYಳ ಸೆಳೆಯುವ ನೋಟ
ರಸಿಕರ ನೋಟ ಎಂದವರು ನಂತರ ಸರಿಪಡಿಸಿಕೊಂಡು ರಸಿಕರ ಕಣYಳ ಸೆಳೆಯುವ ನೋಟ…ಎಂದರು.

Advertisement

ಮುಂದುವರಿದು ಹಿಂದೂ, ಕ್ರೆ„ಸ್ತ, ಮುಸಲ್ಮಾನ, ಜೈನ, ಪಾರಸಿಕರ ಉದ್ಯಾನ ಎನ್ನುವಾಗ ಜೈನ, ಪಾರಸಿಕರ ಸ್ಥಾನವನ್ನು ಪಲ್ಲಟ ಮಾಡಿದರು.

ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಅಂದಿದ್ದಾರೆ. ವಿಶ್ವ ಮಾನವ ಸಂದೇಶ ಕೊಟ್ಟಿದ್ದಾರೆ. ನಾಡಗೀತೆ ಹಾಡಲಷ್ಟೇ ಇರುವುದಲ್ಲ. ಅದರಲ್ಲಿನ ಕುವೆಂಪು ಸಂದೇಶ ಜಾರಿಗೆ ತರುವುದೇ ಅವರಿಗೆ ಸಲ್ಲಿಸುವ ನಮನ. ಪ್ರಧಾನಿ ನರೇಂದ್ರಮೋದಿಯಿಂದ ಬಿ.ಎಸ್‌.ಯಡಿಯೂರಪ್ಪವರೆಗೆ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರಮೋದಿ ಅವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಅಂತಾರೆ, ಅಲ್ಪಸಂಖ್ಯಾತರನ್ನು ಬಿಟ್ಟು ಯಾವ ಸಬ್‌ ಕಾ ಸಾಥ್‌ ಎಂದು ಪ್ರಶ್ನಿಸಿದರು.

ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ನನ್ನನ್ನು ಏಕವಚನದಲ್ಲಿ ವಾಚಾಮಗೋಚರವಾಗಿ ಬೈಯುತ್ತಿದ್ದಾರೆ. ಅಮಿತ್‌ ಶಾ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅನಂತಕುಮಾರ್‌ ಹೆಗಡೆ ಇವರೆಲ್ಲ ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ನನಗೂ ಮಾತಾಡೋಕೆ ಬರುತ್ತೆ. ನಾನೂ ಹಳ್ಳಿಯಿಂದಲೇ ಬಂದವನು. ನನಗೆ ಯಾವ್ಯಾವ ಭಾಷೆ ಬಳಸಬೇಕು ಎಂಬುದು ಗೊತ್ತಿದೆ. ಆದರೆ, ಅವರಂತೆ ಮಾತನಾಡಲ್ಲ. ನನಗೆ ಸಂಸ್ಕಾರ ಇದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next