ಸಾಮಾನ್ಯವಾಗಿ ರಾಜಕೀಯ ಪರಿಭಾಷೆಯಲ್ಲಿ ಹೇಳುವ ಮಾತಿದೆ. “ಸಮಾವೇಶಗಳಲ್ಲಿ ಸೇರೋ ಜನ ನೋಡಿಕೊಂಡು ಮತಗಳನ್ನು ಲೆಕ್ಕ ಹಾಕಬಾರದು. ಸಮಾವೇಶದಲ್ಲಿ ಬಂದ ಸಂಖ್ಯೆಯೆಲ್ಲ ಮತಗಳಾಗಿ ಪರಿವರ್ತಿತವಾಗುವುದಿಲ್ಲ. ಸಮಾವೇಶಕ್ಕೆ ಬರೋರೇ ಬೇರೆ. ಮತ ಹಾಕೋರೇ ಬೇರೆ’ ಎಂಬುದಕ್ಕೆ ತದ್ವಿರುದ್ಧವಾದ ರೀತಿ ಮೋದಿಯವರ ರ್ಯಾಲಿಗಳು ಎಂಬುದು ಸ್ಪಷ್ಟವಾಗಿದೆ.
Advertisement
114 ರಲ್ಲಿ ಯಶಸ್ವಿಈ ಬಾರಿಯ ಚುನಾವಣೆಯಲ್ಲಿ ಮೋದಿ ಅವರು ಒಟ್ಟು 142 ಲೋಕಸಭಾ ಕ್ಷೇತ್ರಗಳಲ್ಲಿ ರ್ಯಾಲಿಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಬಹುತೇಕ ರ್ಯಾಲಿಗಳಲ್ಲಿ ಕಿಕ್ಕಿರಿದ ಜನಸ್ತೋಮವಿತ್ತು. ಉದಾ ಹರಣೆಗೆ ಮಂಗಳೂರಿನಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಇದರೊಂದಿಗೆ ಕೆಲವೆಡೆ ರೋಡ್ ಷೋಗಳನ್ನೂ ನಡೆಸಿದ್ದರು. ಆದಕ್ಕೂ ಸೇರಿದ ಜನರ ಲೆಕ್ಕ ದೊಡ್ಡದು. ವಿಶೇಷವೆಂದರೆ ಹೀಗೆ ರ್ಯಾಲಿ ಮಾಡಿದ 142 ರಲ್ಲಿ 114 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಮೋದಿ ಅವರು 11 ಲೋಕಸಭಾ ಕ್ಷೇತ್ರಗಳಲ್ಲಿ ರ್ಯಾಲಿಗಳನ್ನು ಮಾಡಿದ್ದರು. ಅವುಗಳಲ್ಲಿ ಎಲ್ಲಾ 11 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಸಂಸತ್ ಪ್ರವೇಶಿಸಿದ್ದಾರೆ. ಬಿಹಾರದಲ್ಲೂ ಮೋದಿ ಮತ್ತು ನಿತೀಶ್ ಪ್ರಚಾರ ನಡೆಸಿದ ಅಷ್ಟೂ ಕ್ಷೇತ್ರಗಳಲ್ಲಿ ಮೈತ್ರಿ ಗೆಲುವಿನ ನಗೆ ಬೀರಿದೆ. ಮೋದಿಯವರು ರ್ಯಾಲಿ ನಡೆಸಿದ ಅಸ್ಸಾಂನ 3, ಗುಜರಾತ್ ಮತ್ತು ಮಹಾರಾಷ್ಟ್ರದ 16 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಿದೆ. ಇದರೊಂದಿಗೆ ಚತ್ತೀಸ್‌ಗಡ್, ಜಾರ್ಖಂಡ್ ಪ್ರಾಂತ್ಯಗಳಲ್ಲೂ ಬಿಜೆಪಿಗೆ
ಅಚ್ಚರಿ ಎನ್ನುವಷ್ಟು ಬೆಂಬಲ ಸಿಕ್ಕಿದೆ.
Related Articles
ಮೋದಿ ಅವರು ಪಶ್ಚಿಮ ಬಂಗಾಲದ ಒಟ್ಟು 16 ಕ್ಷೇತ್ರ ಗಳಲ್ಲಿ ಪ್ರಚಾರ ಮಾಡಿದ್ದರು. ಅವುಗಳಲ್ಲಿ 8 ಕ್ಷೇತ್ರ ಗಳಲ್ಲಿ ಬಿಜೆಪಿ ಗೆದ್ದಿದೆ. ಈ ಪೈಕಿ ಒಡಿಸ್ಸಾದಲ್ಲಿ ಮೋದಿ ಪ್ರಚಾರ ನಡೆಸಿದ 8 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆದ್ದಿದೆ.
Advertisement