Advertisement

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

03:04 PM Apr 30, 2024 | Team Udayavani |

ಶಿರಸಿ: ದೇಶದ ಪ್ರಧಾನಿಗಳು ಬಂದು ಹೋದ ಬಳಿಕ ಕಾಂಗ್ರೆಸ್ ಮತಗಳ ಮೇಲೆ ಯಾವುದೇ ಪರಿಣಾಮ ಆಗಿಲ್ಲ, ಅಡ್ಡ ಪರಿಣಾಮ ಕೂಡ ಏನಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಸಮರ್ಥಿಸಿಕೊಂಡರು.

Advertisement

ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಅಭಿವೃದ್ದಿ ವಿಚಾರ ಬಿಟ್ಟು ತಾಳಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜಿಲ್ಲೆಯ ಅನೇಕ ಸಮಸ್ಯೆ ಇತ್ಯರ್ಥದ ಭರವಸೆ ನೀಡಬೇಕಿತ್ತು ಎಂದೂ ಹೇಳಿದರು.

ಪ್ರಧಾನಿಗಳು ರಾಜ್ಯ, ಜಿಲ್ಲೆಗೆ ಯಾವುದೇ ಘೋಷಣೆ ನೀಡಿಲ್ಲ. ಇಲ್ಲಿನ ಅಭಿವೃದ್ದಿ, ಅನೇಕ ವರ್ಷದಿಂದ ಇರುವ ದೊಡ್ಡ ಸಮಸ್ಯೆ ಅತಿಕ್ರಮಣ, ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇನೆ ಎಂದೂ ಹೇಳಿಲ್ಲ. ಇಲ್ಲಿಯ ಸಮಸ್ಯೆ, ಇಲ್ಲಿನ ಮುಖಂಡರು ಸಮಸ್ಯೆ ಬಗೆಹರಿಸಿಲ್ಲ. ಕಸ್ತೂರಿರಂಗನ್ ಸಮಸ್ಯೆ ಕೂಡ ಪ್ರಸ್ತಾಪ ಮಾಡಿಲ್ಲ ಎಂದರು.

ಕಾಂಗ್ರೆಸ್ ಸರಕಾರ ಬಂದರೆ ಆಸ್ತಿ ಮೇಲೆ ಕಣ್ಣು, ತಾಯಂದಿರ ತಾಳಿ ಮೇಲೂ ಕಣ್ಣು ಎಂದು ಪ್ರಧಾನಿಗಳು ಆಡಬಾರದಿತ್ತು. ಕಾಂಗ್ರೆಸ್ ಸರಕಾರ ಮಾತ್ರ ಬಹುಜನ ಹಿತಾಯ ಮಾಡುವ ಸರಕಾರ ಎಂದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ಐದು ಗ್ಯಾರಂಟಿಗಳನ್ನೂ ತಿರಸ್ಕಾರ ಮಾಡಿ ಎಂದು ಹೇಳುತ್ತಾರೆ. ಐದು ಗ್ಯಾರಂಟಿ ಮನೆ ಮನೆಗೆ ತಲುಪುತ್ತಿದೆ. ತಾಯಿಯ ನೋವು ಗೊತ್ತಿದ್ದರೆ ರೂಪಾಲಿ ಅವರು ಹೀಗೆ ಹೇಳುತ್ತಿರಲಿಲ್ಲ. ಏತಕ್ಕಾಗಿ ಹೀಗೆ ಹೇಳಿದರು ಎಂಬುದನ್ನು ಹೇಳಬೇಕು. ಕಾಂಗ್ರೆಸ್ ಸರಕಾರದಿಂದ ನೀಡಲಾದ ಭಾಗ್ಯಲಕ್ಷ್ಮೀಯಿಂದ ತಾಳಿ ಸರ ಇಲ್ಲದವರು ತಾಳಿ ಸರ, ಮನೆಗೆ ಬೇಕಾದ ವಸ್ತು ಕೂಡ ತೆಗೆದುಕೊಂಡಿದ್ದಾರೆ. ಆದರೆ, ರೂಪಾಲಿ ಬೇಜವಬ್ದಾರಿ ಮಾತನಾಡಬಾರದಿತ್ತು ಎಂದರು.

Advertisement

ಅಯೋಧ್ಯೆ ರಾಮನ ಸೇವೆಯಲ್ಲಿ ಎಲ್ಲರ ಕಾಣಿಕೆ ಇದೆ. ಆದರೆ, ಇದನ್ನು ಬಿಜೆಪಿ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳುತ್ತಿದೆ ಎಂದ ಅವರು, ಪರೇಶ ಮೇಸ್ತಾ  ಪ್ರಕರಣವನ್ನು ಎಬ್ಬಿಸಿದವರು ಯಾರು? ವಿಕಾಸಾಶ್ರಮ ಬಯಲಿನಲ್ಲಿ ಚಾಲನೆ ನೀಡಿ, ಯುವಕರ ಮೇಲೆ ಪ್ರಕರಣ ಬರುವಂತೆ ಮಾಡಿದವರು ಯಾರು? ಪ್ರಧಾನಿಗಳು ಇದರ ಬಗ್ಗೆ ಕೂಡ ನೋಡಬೇಕಿತ್ತು ಎಂದರು.

ದೇವರ ಹೆಸರಿನಲ್ಲಿ ಮತ ಕೇಳುವುದು, ಕೊಟ್ಟ ಮಾತು ಈಡೇರಿಸದೇ ಮತ್ತೆ ಅಧಿಕಾರ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರ 34 ರೂ.ಗೆ ಅಕ್ಕಿ ಕೊಡುತ್ತೇನೆ ಎಂದರೂ ಕೊಡದ ಕೇಂದ್ರ ಸರಕಾರ ಈಗ 29 ರೂ.ಗೆ ಮಾರಾಟ ಮಾಡುತ್ತಿದೆ. ಕಾಂಗ್ರೆಸ್ ಸರಕಾರವು ಜನರಿಗೆ ಉಚಿತವಾಗಿ ಅಕ್ಕಿ ಪೂರೈಸಲಾಗಿತ್ತು. ಆಗ ಕೇಳಿದರೂ ಕೊಡದ ಕೇಂದ್ರ ಬಿಜೆಪಿ ಸರಕಾರದ ನಡೆ ಸರಿನಾ ಎಂದೂ ಕೇಳಿದರು.

ಈ ವೇಳೆ ದೀಪಕ್ ದೊಡ್ಡೂರು, ಜಗದೀಶ ಗೌಡ, ಗಣೇಶ ದಾವಣಗೆರೆ, ಸುಮಾ ಉಗ್ರಾಣಕರ, ಪ್ರಸನ್ನ ಶೆಟ್ಟಿ ಇತರರಿದ್ದರು.

ಪ್ರಧಾನಿಗಳು ಬಂದಾಗ ನಾನೂ ಸ್ವಾಗತ ಕೋರಲು ಮುಂದಾಗಿದ್ದೆ. ಆದರೆ, ಚುನಾವಣೆ ಕಾರಣದಿಂದ ಹೋಗಿಲ್ಲ. ಪ್ರಧಾನಿಗಳ ಕಾರ್ಯಕ್ರಮ ಸಹಿತ, ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಥವಾ ಸರಕಾರ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು, ಇಲಾಖೆ ತಪ್ಪು ಮಾಡಿದರೆ ಚುನಾವಣೆ ಆಯೋಗ ಕಠಿಣ ಕ್ರಮ ಕೈಗೊಳ್ಳಲಿ. – ಭೀಮಣ್ಣ ನಾಯ್ಕ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next