ಮಾಗಡಿ: ದೇಶದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್. ಬಸವರಾಜು ತಿಳಿಸಿದರು.
ಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಪರ ಮತಯಾಚಿಸಿದ ಅವರು ಮಾತನಾಡಿ, ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಮಯ ಸಾಧಕರು. ಮತದಾರರು ಇಬ್ಬರನ್ನು ನಂಬಬೇಡಿ, ಬಲಿಷ್ಠ ಭಾರತಕ್ಕಾಗಿ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮತದಾರರು ಮನಗಾಣಬೇಕಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು. ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಶಾ ಸಾರಥ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ. ಬಿಜೆಪಿಯಿಂದ ಬಲಿಷ್ಠ ಭಾರತ ಸಾಧ್ಯ ಎಂದು ಮತದಾರರು ಈಗಾಗಲೇ ರ್ಮಾನಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣಗೆ ಅಧಿಕ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮೈತ್ರಿ ನಾಯಕರು ಹಾವು -ಮುಂಗಸಿ: ಮೈತ್ರಿ ಸರ್ಕಾರದ ನಾಯಕರೇ ಈಗ ಹಾವು ಮುಂಗಸಿ ರೀತಿಯಲ್ಲಿ ಕಿತ್ತಾಡುತ್ತಿದ್ದಾರೆ. ಹಾವು ಮುಂಗಸಿಗೆ ಒಂದೆಡೆ ಇರಲು ಸಾಧ್ಯವೇ ಎಂದು ಮತದಾರರು ಚಿಂತನೆ ಮಾಡಬೇಕು. ಲೋಕಸಭೆ ಚುನಾವಣೆ ನಂತರವೇ ಇದಕ್ಕೆ ಉತ್ತರ ಸಿಗುತ್ತದೆ. ಮೈತ್ರಿ ಸರ್ಕಾರದ ಡಿಕೆಶಿ ಬ್ರದರ್ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಶೀಘ್ರದಲ್ಲಿಯೇ ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಲಸ: ಕಾರ್ಮಿಕ ಸಂಘಟನೆಯಲ್ಲಿ ಬೆಳೆದಿರುವ ಅಶ್ವತ್ಥನಾರಾಯಣ ಅವರು ಸೇವಾ ಮನೋಭಾವದಿಂದ ಕೆಲಸ ಮಾಡಿದ್ದಾರೆ. ಇವರು ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿಯಾಗಿರುವ ಇವರು ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಲಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದಾರೆ. ಅಶ್ವತ್ಥನಾರಾಯಣ ಈ ಬಾರಿ ಬಹುಮತದಿಂದ ಗೆಲ್ಲಲಿದ್ದಾರೆ. ಎಲ್ಲೆಡೆ ಬಿಜೆಪಿಯ ರಾಷ್ಟ್ರ ನಾಯಕ ಮೋದಿ ಹವ ಇದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗುತ್ತಾರೆ. ಮೋದಿ ಪ್ರಧಾನಿಯಾದರೆ ಮಾತ್ರ ದೇಶ ಪ್ರಗತಿಪಥದತ್ತ ಮುನ್ನಡೆಯಲು ಸಾಧ್ಯ ಎಂದು ತಿಳಿಸಿದರು.
ಈ ವೇಳೆಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಂ.ಧನಂಜಯ, ಹನುಮಂತೇ ಗೌಡ, ಶಶಿಧರ್, ರಾಘವೇಂದ್ರ, ಕುಮಾರ್, ಮಾರಪ್ಪ, ಟಿ.ಆರ್ .ದಯಾನಂದ್, ಟಿ.ವಿ. ಕೃಷ್ಣ, ರಾಮಚಂದ್ರಯ್ಯ, ಮೂರ್ತಿ, ಎಂ.ಟಿ.ಶಿವಣ್ಣ, ಎಂ.ಮುನಿಕೃಷ್ಣ, ಶಿವರಾಜು, ರವಿಕುಮಾರ್, ಅಶ್ವಥ್, ವಿಜಯ ಕುಮಾರ್, ಪ್ರಭು ಹಾಜರಿದ್ದರು