Advertisement
ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಪ್ರತಿ ದೇಶದ ಮುಖ್ಯಸ್ಥರನ್ನು ಸ್ವಾಗತಿಸಲು ಚೀನದಲ್ಲಿರುವ ಆಯಾ ದೇಶಗಳ ಪ್ರಜೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ರೀತಿಯಲ್ಲಿ ಮೋದಿಯವರನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ ಕೆಲವೇ ಮಂದಿ ಭಾರತೀಯರ ಪೈಕಿ ಮೋಹನ್ ಕುಲಾಲ್ ಕೂಡ ಒಬ್ಬರು. ಚೀನದ ಕ್ಸಿಯಾಮೆನ್‌ನಲ್ಲಿ ಸೆ.3ರಂದು ಇವರು ಮೋದಿ ಅವರನ್ನು ಸ್ವಾಗತಿಸಿದ್ದರು.
ಮೂಲತಃ ಮಂಗಳೂರಿನ ಪಂಡಿತ್‌ಹೌಸ್ ನಿವಾಸಿಯಾಗಿರುವ ಮೋಹನ್ 4 ವರ್ಷಗಳಿಂದ ಚೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಬಾಕ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಎಂಬ ಭಾರತೀಯ ಮೂಲದ ಗಾರ್ಮೆಂಟ್ಸ್ ಕಂಪೆನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ರಿಕ್ಸ್ ಸಮ್ಮೇಳನದ ಹಿನ್ನೆಲೆಯಲ್ಲಿ ಚೀನಕ್ಕೆ ಆಗಮಿಸುವ ಪ್ರಧಾನಿ ಅವರನ್ನು ಸ್ವಾಗತಿಸಲು ಕ್ಸಿಯಾಮೆನ್‌ನಲ್ಲಿರುವ ಭಾರತೀಯರಿಗೆ ಅವಕಾಶವಿದೆ. ಹೀಗಾಗಿ ನಿಮ್ಮ ದಾಖಲೆಗಳನ್ನು ನೀಡಿ ಎಂದು ಇವರ ಕಂಪೆನಿಗೆ ಚೀನದ ಭಾರತೀಯ ರಾಯಭಾರಿ ಕಚೇರಿಯಿಂದ ಕಳೆದ ಒಂದೂವರೆ ತಿಂಗಳ ಹಿಂದೆ ಇ-ಮೇಲ್ ಬಂದಿತ್ತು.
Related Articles
Advertisement
ಮೋದಿ ಏನು ಹೇಳಿದ್ದರು?ಮೋದಿ ಅವರನ್ನು ಸ್ವಾಗತಿಸುವುದಕ್ಕೆ ಎಲ್ಲರೂ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಕಾಯುತ್ತಿದ್ದರು. ಆಗ ಆಗಮಿಸಿದ ಮೋದಿ ಅಲ್ಲಿದ್ದವರ ಕೈ ಕುಲುಕಿ “ಹೇಗಿದ್ದೀರಿ’ ಎಂದು ಕೇಳುತ್ತಿದ್ದರು. ಮೋಹನ್ ಅವರಲ್ಲಿ ಕೂಡ ಮೋದಿ ಅವರು “ಹೇಗಿದ್ದೀರಿ, ಎಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೀರಾ’? ಎಂದು ಕೇಳಿದ್ದರು. ಮೋದಿ ಅವರನ್ನು ಸ್ವಾಗತಿಸಲು ತೆರಳುವವರಿಗೆ ಮೊಬೈಲ್, ಕೆಮರಾ ತೆಗೆದುಕೊಂಡು ಹೋಗುವಂತಿರಲಿಲ್ಲ. ಅಲ್ಲಿಯ ಸರಕಾರಿ ಅಧಿಕಾರಿಗಳು, ಮಾಧ್ಯಮಗಳ ಕೆಮರಾಗಳ ಮೂಲಕ ಮೋದಿ ಜತೆ ಎಲ್ಲರೂ ಫೋಟೊ ತೆಗೆಸಿಕೊಂಡಿದ್ದರು. ಮೋದಿ ಚೀನಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ಕಳೆದ ಎರಡು ತಿಂಗಳಿನಿಂದಲೇ ಚೀನದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. “ನಿಮ್ಮ ಲೀಡರ್ ಬರುತ್ತಾರಲ್ಲವೇ, ನಿಮಗೆ ಹೋಗಲಿಕ್ಕಿದೆಯಾ’? ಎಂದು ನಮ್ಮ ಕಂಪೆನಿಗೆ ಆಗಮಿಸುವ ಚೀನದ ಗ್ರಾಹಕರು ಕೇಳುತ್ತಿದ್ದರು. ಜತೆಗೆ ಇಲ್ಲಿನ ಮಾಧ್ಯಮಗಳು ಕೂಡ ಪ್ರಧಾನಿ ಮೋದಿ ಆಗಮನದ ದೊಡ್ಡ ಸುದ್ದಿಯನ್ನು ಬಿತ್ತರಿಸುತ್ತಿದ್ದವು ಎಂದು ಮೋಹನ್ “ಉದಯವಾಣಿ’ಗೆ ತಿಳಿಸಿದ್ದಾರೆ. ನಮಗೇನೂ ತೊಂದರೆ ಇಲ್ಲ
ಡೋಕ್ಲಾಮ್ ಬಿಕ್ಕಟ್ಟಿನ ಸಂದರ್ಭ ಭಾರತ-ಚೀನ ಸಂಬಂಧ ಹದಗೆಟ್ಟಿದ್ದರೂ ನಮಗೇನೂ ತೊಂದರೆ ಆಗಿರಲಿಲ್ಲ. ಚೀನದಲ್ಲಿ ಕಳೆದ ಹಲವು ವರ್ಷಗಳಿಂದ ನೆಲೆಸಿರುವ ಮೋಹನ್ ಪ್ರಕಾರ ಅಲ್ಲಿನ ಪರಿಸ್ಥಿತಿಯೇ ಬಹಳ ಭಿನ್ನವಾಗಿದೆ. “ನಮಗೆ ಇಲ್ಲಿ ಯಾವ ತೊಂದರೆಯೂ ಇಲ್ಲ. ಈ ಮೊದಲಿನಂತೆ ಈಗಲೂ ಆರಾಮದಲ್ಲಿದ್ದೇವೆ. ಚೀನದವರು ಭಾರತೀಯರನ್ನು ಬಹಳ ಸಂತಸದಿಂದಲೇ ಮಾತನಾಡಿಸುತ್ತಿ¤ದ್ದಾರೆ. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ
ನಾನು ಗಮನಿಸಿದಂತೆ ಮೋದಿ ಅವರ ಕುರಿತು ಚೀನದವರಿಗೆ ಹೆದರಿಕೆಯಿದೆ’ ಎನ್ನುವುದು ಮೋಹನ್ ಅಭಿಪ್ರಾಯ. ಹೆಮ್ಮೆಯ ವಿಚಾರ
ವಿದೇಶದಲ್ಲಿ ದುಡಿಯುತ್ತಿರುವ ನಮಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು, ಅವರ ಕೈ ಕುಲುಕಲು ಅವಕಾಶ ಸಿಕ್ಕಿರುವುದೇ ನಮ್ಮ ಹೆಮ್ಮೆ. ನಾನು ಭಾರತದಲ್ಲಿದ್ದರೆ ಇಂತಹ ಅವಕಾಶ ಇರುತ್ತಿರಲಿಲ್ಲ. ನಾವು ಭಾರತೀಯರು ಎಂದು ಹೆಮ್ಮೆಯಿಂದಲೇ ಇಲ್ಲಿ ಹೇಳಿಕೊಳ್ಳುತ್ತಿದ್ದೇವೆ. ನಾನು ಎಂಕಾಂ ಪದವೀಧರನಾಗಿದ್ದು, ದುಬಾೖಯಲ್ಲಿರುವ ಸ್ನೇಹಿತನ ಮೂಲಕ ಚೀನದಲ್ಲಿ ಉದ್ಯೋಗಿಯಾಗುವ ಅವಕಾಶ ಸಿಕ್ಕಿದೆ.
- ಮೋಹನ್ ಕುಲಾಲ್, ಮಂಗಳೂರು