Advertisement

ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಲಿದೆ: ನಳಿನ್‌

03:41 PM Apr 06, 2019 | Team Udayavani |

ಪುಂಜಾಲಕಟ್ಟೆ : ಪ್ರಧಾನಿ ನರೇಂದ್ರ ಮೋದಿ ಅವರು ಜಗದ್ಗುರು ಭಾರತದ ಸಂಕಲ್ಪದೊಂದಿಗೆ ತಾನು ನೀಡಿರುವ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬ ಮೂರು ಭರವಸೆಯಂತೆ ಕಾರ್ಯ ನಿರ್ವಹಿಸಿದ್ದು, ಮತ್ತೆ ನರೇಂದ್ರ ಮೋದಿಯವರೇ ಭಾರತದ ಪ್ರಧಾನಿಯಾಗಲಿದ್ದಾರೆ. ಮೋದಿ ಸುನಾಮಿಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಲಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ಎ. 4ರಂದು ಬಂಟ್ವಾಳ ತಾಲೂಕಿನ ವಿವಿಧೆಡೆ ಮತಯಾಚನೆ ನಡೆಸಿದ ಬಳಿಕ ಸಿದ್ದಕಟ್ಟೆಯಲ್ಲಿ ನಡೆದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಮೋದಿ ಅಲೆ ಮನೆಮಾತು
ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಪರಿವರ್ತನೆಯಾಗಿದೆ. ಕಳೆದ 5 ವರ್ಷಗಳಲ್ಲಿ ದೇಶಕ್ಕೆ 153 ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಜಗತ್ತಿಗೆ ಭಾರತದ ಸೈನಿಕ ಶಕ್ತಿಯ ಪರಿಚಯ ಮಾಡಿದ್ದಾರೆ. ಬಡಜನತೆಗೆ ಗ್ಯಾಸ್‌, ಆಯುಷ್ಮಾನ್‌ ಯೋಜನೆ, ವಿದ್ಯುತ್‌ ಒದಗಿಸುವುದರ ಮೂಲಕ ಮೋದಿ ಅಲೆ ಮನೆ ಮಾತಾಗಿದೆ.

ಅಭಿವೃದ್ಧಿ ಚಿಂತನೆಯ ರಾಜಕಾರಣ ಗೂಂಡಾಗಿರಿಯ ರಾಜಕಾರಣ ಬೇಕಾ, ಅಥವಾ ಸಜ್ಜನಿಕೆಯ ರಾಜಕಾರಣ ಬೇಕಾ ಎಂದು ಮತದಾರರು ತೀರ್ಮಾನಿಸಬೇಕು. ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರ ಹೊರತುಪಡಿಸಿ ಬೇರೆಲ್ಲೂ ಬಾಂಬ್‌ ಸ್ಫೋಟವಾಗಿಲ್ಲ. ಜಿಲ್ಲೆಯಲ್ಲಿ ಏಳು ಮಂದಿ ಬಿಜೆಪಿ ಶಾಸಕರು ಬಂದ ಮೇಲೆ ಯಾವುದೇ ಕೊಲೆಗಳಾಗಿಲ್ಲ. ಗೋ ಕಳ್ಳತನ ನಡೆಯಲಿಲ್ಲ. ಆದುದರಿಂದ ಸಾಮರಸ್ಯದ ಅಭಿವೃದ್ಧಿ ಚಿಂತನೆಯ ರಾಜಕಾರಣ ಜನತೆಗೆ ಬೇಕಾಗಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ಈ ಬಾರಿಯ ಚುನಾವಣೆ ದೇಶದ ಭವಿಷ್ಯದ ಚುನಾವಣೆಯಾಗಿದ್ದು, ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಈ ಬಗ್ಗೆ
ಕಾರ್ಯಕರ್ತರು ನನ್ನ ಬೂತ್‌ ನನ್ನ ಹೊಣೆ ಎಂದು ಕಾರ್ಯ ನಿರ್ವಹಿಸಬೇಕು ಎಂದರು.

Advertisement

ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶದಲ್ಲಿ ವಂಶಾಡಳಿತ ಕೊನೆಗಾಣಿಸಿ, ದೇಶಕ್ಕಾಗಿ 18 ಗಂಟೆ ದುಡಿಯುವ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕು. ದೇಶದ ಸಮಗ್ರ ಅಭಿವೃದ್ಧಿಯ, ಮೂಲ ಸೌಲಭ್ಯಗಳ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಶಕ್ತಿಶಾಲಿ ಭಾರತದ ಚಿಂತನೆಯ ಮೋದಿಯವರ ಕನಸನ್ನು ನನಸಾಗಿಸಬೇಕು ಎಂದರು.

ಬಿಜೆಪಿ ಪ್ರಮುಖರಾದ ರುಕ್ಮಯ ಪೂಜಾರಿ, ದೇವದಾಸ ಶೆಟ್ಟಿ, ರವಿ ಶಂಕರ ಮಿಜಾರು, ಎಂ. ತುಂಗಪ್ಪ ಬಂಗೇರ, ಜಿ. ಆನಂದ, ರಾಮದಾಸ ಬಂಟ್ವಾಳ, ರತ್ನಕುಮಾರ ಚೌಟ, ಸಂಜೀವ ಪೂಜಾರಿ ಪಿಲಿಂಗಾಲು, ಗುಲಾಬಿ ಶೆಟ್ಟಿ, ತುಂಗಮ್ಮ, ಸತೀಶ್‌ ಪೂಜಾರಿ ಹಲಕ್ಕೆ, ರಮೇಶ್‌ ಕುಡೆ¾àರು, ದಿನೇಶ್‌ ಅಮೂrರು, ಜಿತೇಂದ್ರ ಕೊಟ್ಟಾರಿ, ಮೋನಪ್ಪ ದೇವಸ್ಯ ಉಪಸ್ಥಿತರಿದ್ದರು. ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next