ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿಯಲ್ಲಿ ಯುಇಎ ಮತ್ತು ಕುವೈತ್‌ಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ಸರಕಾರದ ಮೂಲಗಳ ಪ್ರಕಾರ ಮುಂದಿನ 10ನೇ ತಾರೀಕಿನ ಒಳಗಾಗಿ ಅವರು ಈ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಪ್ರಧಾನಿ ಅವರ ಮುಂದಿನ ವರ್ಷದ ಮೊದಲ ವಿದೇಶ ಪ್ರವಾಸ ಆರಂಭವಾಗಲಿದೆ.
ಕಾಶ್ಮೀರ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಯಾವತ್ತೂ ಬೆಂಬಲ ನೀಡುವ ರಾಷ್ಟ್ರಗಳಾಗಿವೆ ಕುವೈತ್ ಮತ್ತು ಯುಎಇ. ಯುಎಇ ಪ್ರವಾಸದ ವೇಳೆ ದುಬಾಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಭಾರತದ ವೇದಿಕೆಗೂ ತೆರಳಲಿದ್ದಾರೆ.
ಇದನ್ನೂ ಓದಿ:ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್
ಯುಎಇನಲ್ಲಿ 4 ಮಿಲಿಯ ಭಾರತೀಯರು ಇದ್ದರೆ, ಕುವೈತ್‌ನಲ್ಲಿ 1 ಮಿಲಿಯ ಭಾರತೀಯರು ಇದ್ದಾರೆ. ಸೈಬರ್ ಸೆಕ್ಯುರಿಟಿ, ವಾಣಿಜ್ಯ ಮತ್ತು ಉದ್ದಿಮೆ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಹೂಡಿಕೆ ಮಾಡಿದೆ.