Advertisement

ನಮೋ ನೂತನ ಶಕೆ

09:18 AM May 31, 2019 | mahesh |

ಹೊಸದಿಲ್ಲಿ: ಅಭೂತಪೂರ್ವ ಗೆಲುವಿನೊಂದಿಗೆ ಮತ್ತೂಂದು ಅವಧಿಗೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಹೊರಟಿರುವ ನರೇಂದ್ರ ಮೋದಿ ಮೇ 30ರಂದು ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಗುರುವಾರ ರಾತ್ರಿ 7 ಗಂಟೆಗೆ ಮೋದಿ ಮತ್ತು ಅವರ ಸಂಪುಟದ ಸಚಿವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗೌಪ್ಯತೆಯ ಪ್ರಮಾಣ ಬೋಧಿಸುವರು. ಹಲವು ವಿಶ್ವ ನಾಯಕರ ಸಮ್ಮುಖದಲ್ಲಿ ಹಲವು ಪ್ರಥಮಗಳ ದಾಖಲೆಗಳೊಂದಿಗೆ ಮೋದಿ ಮತ್ತೆ ಪ್ರಧಾನಿ ಪಟ್ಟಕ್ಕೇರಲಿದ್ದಾರೆ.

Advertisement

ಸರಕಾರಿ ಕಚೇರಿ 2 ಗಂಟೆಗೇ ಬಂದ್‌
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ದಿಲ್ಲಿಯ ರಾಷ್ಟ್ರಪತಿ ಭವನದ ಸುತ್ತಮುತ್ತಲಿನ ಎಲ್ಲ ಸರಕಾರಿ ಕಚೇರಿಗಳೂ ಅಪರಾಹ್ನ 2 ಗಂಟೆಗೇ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಿವೆ. ನಾರ್ತ್‌ ಬ್ಲಾಕ್‌, ಸೌತ್‌ ಬ್ಲಾಕ್‌, ರೈಲ್ ಭವನ, ವಾಯು ಭವನ, ಸೇನಾ ಭವನ, ಡಿಆರ್‌ಡಿಒ ಮತ್ತು ಹಟ್ಮೆಂಟ್ಸ್‌ಗಳ ಸರಕಾರಿ ಕಚೇರಿಗಳು 2 ಗಂಟೆಗೆ ಬಂದ್‌ ಆಗಲಿವೆ.

ಮೋದಿ -ಶಾ ಸಂಪುಟ ಚರ್ಚ
ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ಬಗ್ಗೆ ಮೋದಿ ಮತ್ತು ಅಮಿತ್‌ ಶಾ ಸುದೀರ್ಘ‌ ಚರ್ಚೆ ನಡೆಸಿದ್ದಾರೆ. ಕಳೆದ ಬಾರಿ ಇದ್ದ ರಾಜನಾಥ್‌, ಗಡ್ಕರಿ, ನಿರ್ಮಲಾ, ಸ್ಮತಿ ಇರಾನಿ, ರವಿಶಂಕರ್‌ ಪ್ರಸಾದ್‌, ಪ್ರಕಾಶ್‌ ಜಾಬ್ಡೇಕರ್‌ ಧರ್ಮೇಂದ್ರ ಪ್ರಧಾನ್‌ ಮತ್ತೆ ಅವಕಾಶ ಪಡೆಯುವ ಸಾಧ್ಯತೆ ಇದೆ. ಸುಷ್ಮಾ ಸ್ವರಾಜ್‌ ಕೂಡ ಸೇರಬಹುದು ಎನ್ನಲಾಗಿದೆ.

ಪೇಜಾವರ ಶ್ರೀ ಭಾಗಿ

ಉಡುಪಿ: ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗುರುವಾರ ದಿಲ್ಲಿಗೆ ತೆರಳಲಿದ್ದಾರೆ. ರಾಜ್ಯದ ಇತರ ಕೆಲವು ಮಠಾಧೀಶರೂ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ತಿಳಿದುಬಂದಿದೆ. ಐದು ವರ್ಷಗಳ ಹಿಂದೆಯೂ ಪೇಜಾವರ ಶ್ರೀಗಳು ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Advertisement

ಎಲ್ಲೆಲ್ಲಿ ವೀಕ್ಷಿಸಬಹುದು?
– ಮೋದಿ ಮತ್ತು ಸಂಪುಟ ಸಚಿವರ ಪ್ರಮಾಣ ಸ್ವೀಕಾರ ಸಮಾರಂಭವು ದೂರದರ್ಶನದ ಎಲ್ಲ ಚಾನೆಲ್ಗಳಲ್ಲಿ ಸಂಜೆ 6.30ರಿಂದಲೇ ನೇರಪ್ರಸಾರಗೊಳ್ಳಲಿದೆ.
– ದೂರದರ್ಶನದ ಯೂಟ್ಯೂಬ್‌ ಚಾನೆಲ್ನಲ್ಲಿಯೂ ಸಮಾರಂಭದ ನೇರ ಪ್ರಸಾರ ವೀಕ್ಷಿಸಬಹುದು.

ಎಲ್ಲಿ?- ರಾಷ್ಟ್ರಪತಿ ಭವನದ ಮುಂಭಾಗ
ಎಷ್ಟು ಗಂಟೆಗೆ? – ರಾತ್ರಿ 7.00
ಅತಿಥಿಗಳ ಸಂಖ್ಯೆ 8,000
ಕಾರ್ಯಕ್ರಮದ ಅವಧಿ 90 ನಿಮಿಷ
2014ರಲ್ಲಿದ್ದ ಅತಿಥಿಗಳು 5,000

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿಗಳು
ಬಿಮ್‌ಸ್ಟೆಕ್‌ ನಾಯಕರು

••ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್‌
••ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ
••ನೇಪಾಲದ ಪ್ರಧಾನಿ ಕೆ.ಪಿ. ಶರ್ಮಾ ಒಲಿ
••ಮ್ಯಾನ್ಮಾರ್‌ ಅಧ್ಯಕ್ಷ ಯು ವಿನ್‌ ಮಿಂಟ್
••ಭೂತಾನ್‌ ಪ್ರಧಾನಿ ಲೋಟೆ ಶೆರಿಂಗ್‌
••ಥಾಯ್ಲೆಂಡ್‌ ವಿಶೇಷ ರಾಯಭಾರಿ ಗ್ರಿಸಾಡಾ ಬೂನ್ರಾಚ್

ಇತರ ವಿಶ್ವ ನಾಯಕರು
••ಮಾರಿಶಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜಗ್ನೌತ್‌
••ಕಿರ್ಗಿಸ್ತಾನ ಅಧ್ಯಕ್ಷ ಸೂರನ್‌ಬೇ ಜೀನ್‌ಬೆಕೋವ್‌

ಭಾಗವಹಿಸುವ ಇತರರು

••ತಮಿಳು ಸೂಪರ್‌ಸ್ಟಾರ್‌ಗಳಾದ ರಜನೀಕಾಂತ್‌, ಕಮಲ್ ಹಾಸನ್‌
••ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ
••ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ
••ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌
••ಆಂಧ್ರ ನಿಯೋಜಿತ ಸಿಎಂ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ
••ಎನ್‌ಡಿಎ ನಾಯಕರು, ಬಿಜೆಪಿ ನಾಯಕರು

 

Advertisement

Udayavani is now on Telegram. Click here to join our channel and stay updated with the latest news.

Next