Advertisement

Modi ಪ್ರಮಾಣ ವಚನ ಸ್ವೀಕಾರ 1 ದಿನ ಮುಂದಕ್ಕೆ: ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜ್ಜು ಭಾಗಿ ?

02:08 AM Jun 07, 2024 | Team Udayavani |

ಹೊಸದಿಲ್ಲಿ: ಹಂಗಾಮಿ ಪ್ರಧಾನಿ ಮೋದಿ ಭಾನುವಾರ ಸಂಜೆ 6 ಗಂಟೆಗೆ ಸತತ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಶನಿವಾರ ಪ್ರಮಾಣ ಸ್ವೀಕಾರ ಮಾಡಲಿದ್ದಾ ರೆಂದು ಹೇಳಲಾಗಿತ್ತು. ಅದೀಗ 1 ದಿನ ಮುಂದೆ ಹೋಗಿದೆ.

Advertisement

ಈ ಮಧ್ಯೆ, ಬಿಜೆಪಿಯ ಹಿರಿಯ ನಾಯಕರು ಗುರುವಾ ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ಚರ್ಚಿಸಿದರು. ಸಚಿವ ಸಂಪುಟದಲ್ಲಿ ಮಿತ್ರ ಪಕ್ಷಗಳಿಗೆ ಸ್ಥಾನ ಹಂಚಿಕೆ ಮತ್ತು ತಮ್ಮ ಪಕ್ಷದೊಳಗೆ ಯಾರಿಗೆಲ್ಲ ಸಚಿವ ಸ್ಥಾನ ನೀಡಬಹುದು ಎಂಬ ಕುರಿತು ಈ ವೇಳೆ ಚರ್ಚೆ ನಡೆಸಿದರು. ಬಹುತೇಕ ಹೆಸರುಗಳನ್ನು ಕೂಡ ಅಂತಿಮಗೊಳಿಸಲಾಗಿದೆ ಎನ್ನಲಾಗುತ್ತಿದೆ.

ಶುಕ್ರವಾರ ಎನ್‌ಡಿಎ ಎಲ್ಲ ಸಂಸದರು ಸಭೆ ಸೇರಿ ಮೋದಿ ಅವರನ್ನು ತಮ್ಮ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಆ ಬಳಿಕ ಅವರು ಸರಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ನೆರೆ ರಾಷ್ಟ್ರಗಳಿಗೆ ಆದ್ಯತೆ: ನಾಯಕರಿಗೆ ಆಹ್ವಾನ

3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿ ರುವ ಮೋದಿ ಇದಕ್ಕಾಗಿ ನೆರೆಹೊರೆ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಭಾರತದ “ನೆರೆ ಹೊರೆಗೆ ಮೊದಲ ಆದ್ಯತೆ’ ಎಂಬ ನೀತಿಯನ್ನು ಮುಂದುವರಿಸಲಾಗಿದೆ. ಈ ಸಮಾರಂಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರಣಿಲ್‌ ವಿಕ್ರಮ್‌ಸಿಂಘೆ, ಬಾಂಗ್ಲಾ ಪಿಎಂ ಶೇಖ್‌ ಹಸೀನಾ, ನೇಪಾಳ ಪ್ರಧಾನಿ ಪ್ರಚಂಡ, ಮಾರಿಷಿಯಸ್‌ ಪಧಾನಿ ಜಗೌ°ಥ್‌, ಭೂತಾನ್‌ ಪ್ರಧಾನಿ ಶೆರಿಂಗ್‌ ಟೋಬ್‌ಗ್ಯಾ ಅವರಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ ಶ್ರೀಲಂಕಾ, ಬಾಂಗ್ಲಾ ನಾಯಕರು ಭಾರತಕ್ಕೆ ಬರುವುದನ್ನು ಖಚಿತಪಡಿಸಿದ್ದಾರೆ. ಗುರುವಾರವೇ ಈ ಎಲ್ಲ ನಾಯಕರಿಗೆ ಔಪಚಾರಿಕ ಆಮಂತ್ರಣವನ್ನು ಕಳುಹಿಸಲಾಗಿದೆ.

Advertisement

ಮೋದಿ ಪ್ರಮಾಣ ಸ್ವೀಕಾರಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜ್ಜು?

ಮೋದಿ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಆಗಮಿಸುವ ಸಾಧ್ಯತೆಗಳಿವೆ. ಅವರಿಗೂ ಔಪಚಾರಿಕ ಆಮಂತ್ರಣವನ್ನು ಕಳುಹಿಸಲಾಗಿದೆ. ಅವರೊಮ್ಮೆ ಭಾರತಕ್ಕೆ ಬಂದರೆ, ಕಳೆದ ವರ್ಷ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಎನಿಸಿಕೊಳ್ಳಲಿದೆ. ಭಾರತ ಮತ್ತು ಮಾಲ್ಡೀವ್ಸ್‌ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ನಡೆ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಭಾರೀ ಬಿಕ್ಕಟ್ಟು ಸೃಷ್ಟಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next