Advertisement

PM Modi ಉಪನಾಮ ಪ್ರಕರಣ: ಪಿಐಎಲ್‌ ವಜಾ, ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ

03:58 PM Jan 19, 2024 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉಪನಾಮ(ಸರ್‌ ನೇಮ್)‌ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಿದ ನಂತರ ರಾಹುಲ್‌ ಗಾಂಧಿಯ ಲೋಕಸಭಾ ಸದಸ್ಯತ್ವ ಊರ್ಜಿತಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಲಕ್ನೋ ಮೂಲದ ವಕೀಲ ಅಶೋಕ್‌ ಪಾಂಡೆಗೆ ಸುಪ್ರೀಂಕೋರ್ಟ್‌ ಶುಕ್ರವಾರ (ಜನವರಿ 19) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Advertisement

ಇದನ್ನೂ ಓದಿ:Gaza ಯೂನಿರ್ವಸಿಟಿ ಮೇಲೆ ಪ್ರಬಲ ಬಾಂಬ್‌ ದಾಳಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್‌, ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಸುಪ್ರೀಂಕೋರ್ಟ್‌ ಪೀಠದ ಜಸ್ಟೀಸ್‌ ಬಿಆರ್‌ ಗವಾಯಿ ಮತ್ತು ಜಸ್ಟೀಸ್‌ ಸಂದೀಪ್‌ ಮೆಹ್ತಾ ಅವರು, ಅರ್ಜಿಯನ್ನು ವಜಾಗೊಳಿಸಿ, ಈ ಅರ್ಜಿದಾರರಿಗೆ ನಿಷ್ಪ್ರಯೋಜಕ ಪಿಐಎಲ್‌ ಸಲ್ಲಿಸುವುದು ಹವ್ಯಾಸವಾಗಿದೆ. ಅದಕ್ಕೆ ಇದೊಂದು ಸೇರ್ಪಡೆ ಎಂದು ತಿಳಿಸಿದ್ದಾರೆ.

“ಇಂತಹ ಪಿಐಎಲ್‌ ಅನ್ನು ಸಲ್ಲಿಸಿದಾಗ ಹಲವು ಬಾರಿ ಕರೆದಿದ್ದರು ಕೂಡಾ ಅರ್ಜಿದಾರರು ಗೈರುಹಾಜರಾಗಿದ್ದರು. ಅರ್ಜಿದಾರರು ನಿಷ್ಪ್ರಯೋಜಕ ಪಿಐಎಲ್‌ ಗಳನ್ನು ಸಲ್ಲಿಸುವ ಅಭ್ಯಾಸ ಹೊಂದಿದ್ದಾರೆ. ಇದರಿಂದಾಗಿ ನ್ಯಾಯಾಲಯದ ಅಮೂಲ್ಯ ಸಮಯ ಮತ್ತು ನೊಂದಣಿ ಕೂಡಾ ವ್ಯರ್ಥವಾಗುತ್ತದೆ. ನಾವು ಈ ಅರ್ಜಿಯನ್ನು ವಜಾಗೊಳಿಸಿ, ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ” ಸುಪ್ರೀಂ ಪೀಠ ಆದೇಶ ನೀಡಿದೆ.

ಲೋಕಸಭಾ ಸದಸ್ಯನನ್ನು ಖುಲಾಸೆಗೊಳಿಸುವವರೆಗೆ ಸಂಸತ್‌ ಸ್ಥಾನದಿಂದ ಅನರ್ಹನಾಗಿರುತ್ತಾನೆ ಎಂದು ಕಾನೂನು ಹೇಳುತ್ತದೆ. ಅಲ್ಲದೇ ತಕ್ಷಣವೇ ವಯನಾಡಿನಲ್ಲಿ ಉಪಚುನಾವಣೆ ನಡೆಸುವಂತೆಯೂ ಕಾನೂನು ಹೇಳುತ್ತದೆ ಎಂದು ಅಶೋಕ್‌ ಪಾಂಡೆ ಸಲ್ಲಿಸಿರುವ ಪಿಐಎಲ್‌ ನಲ್ಲಿ ವಾದಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next