Advertisement

ದೇಶದ ಸಮಗ್ರ ಅಭಿವೃದ್ಧಿಗಾಗಿ ಮೋದಿ ಬೆಂಬಲಿಸಿ

03:41 PM Apr 22, 2019 | Team Udayavani |

ಕುಷ್ಟಗಿ: ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾದರೆ ಮಹಾತ್ವಾಕಾಂಕ್ಷಿ ನದಿಗಳ ಜೋಡಣೆ ಸಂಕಲ್ಪ ಈಡೇರಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ಚಿಕಮಗಳೂರು ಶಾಸಕ ಸಿ.ಟಿ. ರವಿ ಹೇಳಿದರು.

Advertisement

ರವಿವಾರ ಪಟ್ಟಣದಲ್ಲಿ ರೋಡ್‌ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಮತಯಾಚಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಸ್ವಚ್ಛ ಭಾರತ, ಜನ್‌ಧನ್‌ ಉಜ್ವಲ, ಮುದ್ರಾ, ಪ್ರಧಾನಮತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌, ಆಯುಷ್ಮಾನ್‌ ಭಾರತ ಮೊದಲಾದ ಜನಕಲ್ಯಾಣ ಯೋಜನೆಗಳನನ್ನು ಜಾರಿಗೆ ತಂದರು. ಇದೀಗ ಮತ್ತೂಮ್ಮೆ ಪ್ರಧಾನಿಯಾದರೆ ನದಿಗಳ ಜೋಡಣೆಯಿಂದ ವ್ಯಾಪಕ ನೀರಾವರಿ ಯೋಜನೆಗಳಿಗೆ ಮೊದಲಾದ್ಯತೆ ನೀಡುತ್ತಾರೆ. ಹೀಗಾಗಿ ಬಿಜೆಪಿ ಗೆಲ್ಲಿಸಬೇಕು. ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು. ಪುಲ್ವಾಮಾ ಉಗ್ರರರ ದಾಳಿಗೆ ಏರ್‌ ಸೆ ó ೖಕ್‌ ಮೂಲಕ ಪ್ರತ್ಯುತ್ತರ ನೀಡಿರುವುದು ಭಾರತದ ತಾಕತ್‌ ಆಗಿದೆ. ಹಿಂದೆ ನಡೆದ ಮುಂಬೈ ದಾಳಿಗೆ ಪ್ರತಿದಾಳಿ ನಡೆಸುವ ತಾಕತ್ತು ಆಗಿನ ಮನಮೋಹನಸಿಂಗ್‌ಗೆ ಬರಲಿಲ್ಲ. ಈ ಲೋಕಸಭೆ ಚುನಾವಣೆ ಲೋಟಸ್‌ ಮತ್ತು ಲೂಟ್ ಅಸ್‌ ಮಧ್ಯೆ ನಡೆಯಲಿದೆ. ಈ ಚುನಾವಣೆ ಬಡವರಿಗೆ ಬಲ ತರುವ ಚುನಾವಣೆಯಾಗಿದೆ.

ಭಾರತ ಗೆಲ್ಲಿಸುವ ಯೋಗ್ಯತೆ ನರೇಂದ್ರ ಮೋದಿ ಅವರಿಗೆ ಇದ್ದು, ಆ ಯೋಗ್ಯತೆ ಕಾಂಗ್ರೆಸ್ಸಿಗರಲ್ಲಿದೆಯೇ? ಮಾಜಿ ಪ್ರಧಾನಿ ದೊಡ್ಡಗೌಡರಿಗೆ ದೇಶದ ಚಿಂತೆಗಿಂತ ಮಕ್ಕಳು, ಮೊಮ್ಮಕ್ಕಳ ಚಿಂತೆಯಾದರೆ ನರೇಂದ್ರ ಮೋದಿ ಅವರಿಗೆ ದೇಶ ಗೆಲ್ಲಿಸುವ ಚಿಂತೆಯಾಗಿದ್ದು, ದೇಶಕ್ಕಾಗಿ ಮೋದಿ ಅನಿವಾರ್ಯ ಎಂದು ಹೇಳಿದರು.

ಸಂಸದ, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮಾತನಾಡಿ, ಲೋಕಸಭೆ ಚುನಾವಣೆ ನಂತರ ರಾಜ್ಯದ ಮೈತ್ರಿ ಸರ್ಕಾರ ಪತನಗೊಳ್ಳಲಿದೆ. ಈ ಸರ್ಕಾರ ಮೇ 23ರವರೆಗೆ ಮಾತ್ರ ಜೀವಂತವಾಗಿರಲಿದೆ ಎಂದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ. ಶರಣಪ್ಪ ಮಾತನಾಡಿದರು. ಜಿಪಂ ಸದಸ್ಯರಾದ ಕೆ. ಮಹೇಶ, ವಿಜಯ್‌ ನಾಯಕ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರಣು ತಳ್ಳೀಕೇರಿ, ಹೇಮಲತಾ ಹಿರೇಮಠ, ಮಲ್ಲಣ್ಣ ಪಲ್ಲೇದ್‌, ಬಾಲಪ್ಪ ಚಾಕ್ರಿ, ಎಪಿಎಂಸಿ ಅಧ್ಯಕ್ಷ ಪರಶುರಾಮ ಪಲ್ಲೇದ್‌, ಪುರಸಭೆ ಸದಸ್ಯ ಕಲ್ಲೇಶ ತಾಳದ್‌, ಮಲ್ಲಿಕಾರ್ಜುನ ಮಸೂತಿ, ರಾಜು ಗಂಗನಾಳ ಮತ್ತಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next