Advertisement
ಕಿರ್ಗಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ಭಯೋತ್ಪಾದನಾ ಮುಕ್ತ ಸಮಾಜವನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಈ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾಗವಹಿಸಿದ್ದು, ಅವರ ಮುಂದೆಯೇ ನೆರೆ ದೇಶಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಉಗ್ರವಾದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾಗತಿಕ ಸಮ್ಮೇಳನ ನಡೆಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.
Related Articles
Advertisement
ಶಿಷ್ಟಾಚಾರ ಉಲ್ಲಂಘಿಸಿದ ಇಮ್ರಾನ್: ಎಸ್‌ಸಿಒ ಸಮ್ಮೇಳನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಘಟನೆ ನಡೆದಿದೆ. ಶಾಂಘೈ ಸಹಕಾರ ಸಂಘದ ಮುಖ್ಯಸ್ಥರು ಸಭೆಗೆ ಆಗಮಿಸುವಾಗ ಎಲ್ಲ ಗಣ್ಯರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರುವಾಗ ಇಮ್ರಾನ್ ಖಾನ್ ಕುಳಿತುಕೊಂಡೇ ಇದ್ದರು. ಮಧ್ಯೆ ತಪ್ಪನ್ನು ಅರಿತು ಎದ್ದು ನಿಂತರಾದರೂ, ನಂತರ ಎಲ್ಲರೂ ಕುಳಿತುಕೊಳ್ಳುವ ಮೊದಲೇ ತಾವು ಕುಳಿತುಕೊಂಡಿದ್ದಾರೆ. ಈ ವಿಡಿಯೋವನ್ನು ಆಡಳಿತ ಪಕ್ಷ ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ನ ಟ್ವಿಟರ್ ಪುಟದಲ್ಲೇ ಪ್ರಕಟಿಸಲಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರತಿರೋಧದಿಂದ ಸಹಕಾರಕ್ಕೆ ಸನ್ನಿವೇಶ ಬದಲಾಗಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಪಾಕ್ ಪ್ರಧಾನಿ ಖಾನ್ ಮಾತುಕತೆ ನಡೆಸಿದ್ದು, ಈ ವೇಳೆ ಭಾರತ ಮತ್ತು ಪಾಕ್ ಸಂಬಂಧ ಸುಧಾರಣೆಗೆ ಚೀನಾ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ. ಇನ್ನೊಂದೆಡೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಖಾನ್, ದಕ್ಷಿಣ ಏಷ್ಯಾದಲ್ಲಿ ಪ್ರತಿರೋಧದಿಂದ ಸಹಕಾರಕ್ಕೆ ಸನ್ನಿವೇಶ ಬದಲಾಗದಿದ್ದರೆ ಶಾಂತಿ, ಸಹಕಾರವು ಕನಸಾಗಿಯೇ ಉಳಿಯುತ್ತದೆ ಎಂದು ಭಾರತವನ್ನು ಪರೋಕ್ಷವಾಗಿ ಉಲ್ಲೇಖೀಸಿ ಹೇಳಿದ್ದಾರೆ.
ಶೃಂಗದ ನಿರ್ಣಯಗಳು•ಎಲ್ಲ ರೂಪದ ಉಗ್ರ ಚಟುವಟಿಕೆಗಳಿಗೆ ವಿರೋಧ
•ಉಗ್ರವಾದ ವಿರುದ್ಧದ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ
•ಉಗ್ರ ಚಟುವಟಿಕೆ, ತೀವ್ರಗಾಮಿ ಚಟುವಟಿಕೆ, ಧಾರ್ಮಿಕ ಅಸಹಿಷ್ಣುತೆ ಮಧ್ಯೆ ಭೇದ ತೋರಿಸುವಂತಿಲ್ಲ •ಉಗ್ರ ಹಾಗೂ ತೀವ್ರಗಾಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬಾರದು, ಅಂತಹ ಪರಿಸ್ಥಿತಿಗಳನ್ನು ಮಟ್ಟ ಹಾಕಬೇಕು
•ವಿದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಅವಕಾಶ ಕೊಡದಿರುವುದು