Advertisement

ಉದ್ಯಮಿ ಟ್ವೀಟ್‌ಗೆ ಮೋದಿ ಮರು ಟ್ವೀಟ್‌

01:38 AM Mar 22, 2019 | Team Udayavani |

ಇಂಡಿ: ತಾಲೂಕಿನ ಚವಡಿಹಾಳ ಗ್ರಾಮದ ಉದ್ಯಮಿ ಬಾಬುಗೌಡ ಬಿರಾದಾರ ಅವರ ಟ್ವೀಟ್‌ಗೆ ಪ್ರಧಾನಿನರೇಂದ್ರ ಮೋದಿ ಮರು ಟ್ವೀಟ್‌ ಮಾಡಿದ್ದಾರೆ. ಬಾಬುಗೌಡ ಬಿರಾದಾರ ಅವರು ಟ್ವೀಟ್‌ ಮಾಡಿ “ಮೈ ಭೀ ಚೌಕೀದಾರ್‌’ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಗೆ ಪ್ರಧಾನಿ ಮೋದಿ ರೀ ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಬಾಬುಗೌಡ ಬಿರಾದಾರ 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂಡಿ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿ ಯಾಗಿದ್ದರು. ಆದರೆ ಅವರಿಗೆ ಟಿಕೆಟ್‌ ನೀಡಲಿಲ್ಲ. “ಪ್ರಧಾನಿ ಮೋದಿಯವರು ಎಲ್ಲರಿಗೂ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಮೋದಿ ಇರುವವರೆಗೂ ಅವರನ್ನೇ ಪ್ರಧಾನಿ ಹುದ್ದೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ
ಕರ್ತವ್ಯ’ ಎಂದು ಬಾಬುಗೌಡ ಬಿರಾದಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next