Advertisement

ಮೋದಿ ಕಲಬುರಗಿ ರ‍್ಯಾಲಿ ಮತ್ತೆ ಮುಂದೂಡಿಕೆ

12:53 AM Feb 20, 2019 | |

ಬೆಂಗಳೂರು: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿ ಮತ್ತೂಮ್ಮೆ ಮುಂದೂಡಿಕೆಯಾಗಿದ್ದು, ಮಾ.1ರ ಬದಲಿಗೆ ಮಾರ್ಚ್‌ 5 ಇಲ್ಲವೇ 6ರಂದು ನಿಗದಿಯಾಗುವ ಸಾಧ್ಯತೆ ಇದೆ.

Advertisement

ಫೆ.10ರಂದು ಹುಬ್ಬಳ್ಳಿಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ರಣಕಹಳೆ ಮೊಳಗಿಸಿದ್ದ ಪ್ರಧಾನಿ ಮೋದಿಯವರು, ಫೆ.19ಕ್ಕೆ ಕಲುಬುರಗಿ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಅದು ರದ್ದಾಗಿತ್ತು. ಜತೆಗೆ ಫೆ.27ರಂದು ನಡೆಯಬೇಕಿದ್ದ ರ್ಯಾಲಿಯೂ ಮುಂದೂಡಿಕೆಯಾಗಿತ್ತು. ಮಾ.1ಕ್ಕೆ ಕಲಬುರಗಿಯಲ್ಲಿ ಮೋದಿಯವರು ರ‍್ಯಾಲಿಲಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಪ್ರಕಟಿಸಿದ್ದರು.

ಮಾ.1ರಂದು ಕನ್ಯಾಕುಮಾರಿ ಹಾಗೂ ವಿಶಾಖಪಟ್ಟಣದಲ್ಲಿ ಪ್ರತ್ಯೇಕ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಪಾಲ್ಗೊಳ್ಳುವುದರಿಂದ ಕಲಬುರಗಿ ರ‍್ಯಾಲಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಪ್ರಧಾನಿಯವರ ಸಮಯಾವಕಾಶ ನೋಡಿಕೊಂಡು ಮಾ.5 ಇಲ್ಲವೇ 6ರಂದು ಕಲಬುರಗಿ ರ್ಯಾಲಿ ನಿಗದಿಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಫೆ.21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಅನೌಪಚಾರಿಕವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next