ಕುಂಬಳೆ: ದಿನದಲ್ಲಿ ಸತತ 18 ಗಂಟೆಗಳ ಕಾಲ ದೇಶಕ್ಕಾಗಿ ದುಡಿದು ಭಾರತವನ್ನು ವಿಶ್ವ ಮಟ್ಟಕ್ಕೆ ಏರಿಸಿದ ಪ್ರದಾನಿ ನರೇಂದ್ರ ಮೋದಿಯವರು ಮತೊ¾ಮ್ಮೆ ಪ್ರದಾನಿಯಾಗಬೇಕೆಂಬ ಬಯಕೆ ಎಲ್ಲಾ ಭಾರತೀಯರದು.ವಿವಿಧ ಸರ್ವೆಗಳಲ್ಲೂ ಇದು ದೃಢಪಟ್ಟಿದೆ. ವಿಪಕ್ಷಗಳ ಸುಳ್ಳು ಅಪಪ್ರಚಾರಕ್ಕೆ ಮತದಾರರು ಕಿವಿಗೊಡದೆ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೆಕೆಂದು ಬಿ.ಜೆ.ಪಿ.ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಯಕ್ ಹೇಳಿದರು. ಬಿ.ಜೆ.ಪಿ.ಪೈವಳಿಕೆ ಪಂಚಾಯತ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಅವರು ಓರ್ವ ಶಾಸಕರೂ ಇಲ್ಲದ ತ್ರಿಪುರಾದದಲ್ಲಿ ಬಿ.ಜೆ.ಪಿ.ಆಡಳಿತ ನಡೆಸಿದಂತೆ ಕೇರಳದಲ್ಲೂ ಬಿ.ಜೆ.ಪಿ.ಬೆಳೆಯುತ್ತಿದೆ ಎಂದರು.ಪಕ್ಷದ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ,ರಾಷೀrÅಯ ಕೌನ್ಸಿಲ್ ಸದಸ್ಯೆಸರೋಜಾ ಆರ್.ಬಲ್ಲಾಳ್, ಜಿಲ್ಲಾ ಸಮಿತಿ ಸದಸ್ಯ ಎಂ.ಹರಿಶ್ಚಂದ್ರ ಮಂಜೇಶ್ವರ,ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ,ಉಪಾಧ್ಯಕ್ಷೆ ಕೆ.ಜಯಲಕ್ಷ್ಮಿ ಭಟ್,ಬಿ.ಜೆ.ಪಿ.ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್ ವಿ.ಎಚ್.ಪಿ.ಅಧ್ಯಕ್ಷ ಅಂಗಾರ ಶ್ರೀಪಾದ ಉಪಸ್ಥಿತರಿದ್ದರು.ಪಕ್ಷದ ಹಿರಿಯರಾದ ಎಂ.ಕೆ.ಭಟ್ ಅಧ್ಯಕ್ಷತೆ ವಹಿಸಿದರು.ಸಭೆಯಲ್ಲಿ ಚುನಾವಣಾ ಸಮಿತಿಯನ್ನು ರಚಿಸಲಾಯಿತು.ಇದರ ಅಧ್ಯಕ್ಷರಾಗಿ ಸದಾನಂದ ರೈ ಕೊಮ್ಮಂಡ,ಉಪಾಧ್ಯಕ್ಷರಾಗಿ ಚೇವಾರು ಶಂಕರ ಕಾಮತ್ ಮತ್ತು ಬಾಬು ಕುಡಿಯ ಪೆರ್ವಡಿ,ಕಿಶೋರ್ ಕುಮಾರ್ ಪೆರ್ವಡಿ ಪ್ರಧಾನ ಸಂಚಾಲಕರಾಗಿ ವಿಘೇ°ಶ್ವರ ಕೆದುಕೋಡಿ ಅವರನ್ನು ಆರಿಸಲಾಯಿತು.ಎಸ್.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ಹರಿಣಾಕ್ಷ ಬದಿಯಾರು ವಂದಿಸಿದರು.