Advertisement

ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಮೋದಿ, ರಾಹುಲ್‌

12:24 PM May 18, 2018 | Team Udayavani |

ಬೆಂಗಳೂರು : ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ, ಅನಿಶ್ಚಿತತೆ ನೆಲೆಗೊಂಡಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್‌ ಮುಖ್ಯಸ್ಥ ಎಚ್‌ ಡಿ ದೇವೇಗೌಡ ಅವರನ್ನು ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದಿಸಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿ,”ನಮ್ಮ ಮಾಜಿ ಪ್ರಧಾನಿ ಶ್ರೀ ಎಚ್‌ ಡಿ ದೇವೇಗೌಡ ಅವರನ್ನು ಮಾತನಾಡಿಸಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದೇನೆ. ಅವರಿಗೆ ದೇವರು ದೀರ್ಘಾಯುಷ್ಯ ಮತ್ತು ಒಳ್ಳೆಯ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ದೇವೇಗೌಡ ಅವರು 1996ರ ಜೂನ್‌ 1ರಿಂದ 1997 ಎಪ್ರಿಲ್‌ 21ರ ವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರಿಗಿಂದು 85ನೇ ಹುಟ್ಟುಹಬ್ಬದ ಸಂಭ್ರಮ. 

ಇದೇ ವೇಳೆ ದೇವೇಗೌಡರನ್ನು ಅಭಿನಂದಿಸಿ ಹುಟ್ಟುಹಬ್ಬದ ಶುಭಾಶಯ ಹೇಳಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಚಿನ ಕರ್ನಾಟಕ ಚುನಾವಣೆಯ ವೇಳೆ ವೈಯಕ್ತಿಕವಾಗಿ ಮತ್ತು ಪಕ್ಷದ ವಿರುದ್ದ ತಾನು ಮಾತಿನ ದಾಳಿ ನಡೆಸಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next