ಚಾಮರಾಜನಗರ: ನರೇಂದ್ರ ಮೋದಿ 3ನೇ ಬಾರಿ ಪ್ರಧಾನಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಾಲೂಕಿನ ಉಮ್ಮ ತೂರು ಗ್ರಾಮದ ಕರಕುಶಲ ವಸ್ತುಗಳ ತಯಾರಕಿ, ಪ್ರಗತಿಪರ ರೈತ ಮಹಿಳೆ ವರ್ಷಾ ಅವರಿಗೆ ಆಹ್ವಾನ ನೀಡಲಾಗಿತ್ತು.
ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಶುಕ್ರವಾರ ನನಗೆ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿ ದರು. ಪ್ರಮಾಣ ವಚನ ಸಮಾರಂಭಕ್ಕೆ ಸಾಮಾನ್ಯ ಜನರನ್ನು ಆಹ್ವಾನಿಸಿರು ವುದು ಸಂತಸದ ಸಂಗತಿ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ವರ್ಷಾ ತಿಳಿಸಿದ್ದಾರೆ.
ವರ್ಷಾ ಅವರು, ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಬಾಳೆದಿಂಡಿನಿಂದ ವಸ್ತುಗಳನ್ನು ತಯಾರಿಸಿ ಉದ್ಯಮಿ ಯಾ ಗಿದ್ದಾರೆ. ಉಮ್ಮತ್ತೂರಿನಲ್ಲಿರುವ ತಮ್ಮ 8 ಎಕರೆ ಪಂಪ್‌ಸೆಟ್ ಜಮೀನಿನಲ್ಲಿ ಬಾಳೆ ಗಿಡದ ನಾರಿ ನಿಂದ ಪರ್ಸ್, ಪೆನ್ ಸ್ಟ್ಯಾಂಡ್ , ಯೋಗ ಹಾಗೂ ಪೂಜಾ ಮ್ಯಾಟ್, ಫ್ರಿಜ್ ಕವರ್, ಫೈಲ್ಸ್, ಪೋಲ್ಡರ್ ಹಾಗೂ ಇತರೆ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಇದಲ್ಲದೇ ಬಾಳೆ ದಿಂಡಿನಿಂದ ಉಪ್ಪಿನಕಾಯಿ, ಚಟ್ನಿಪುಡಿ, ಸಂಡಿಗೆ, ಜ್ಯೂಸ್ ಸೇರಿ ವಿವಿಧ ತಿನಿಸು ಉತ್ಪಾದಿ ಸುತ್ತಾರೆ. ಇವುಗಳನ್ನು ಕೃಷಿ ಮೇಳ, ಸರ್ಕಾ ರಿ ಕಾರ್ಯಕ್ರಮಗಳು, ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆೆ.
ದೇಶ ಸೇವೆಗೆ ಅವಕಾಶ ಕಲ್ಪಿಸಿದವರಿಗೆ ಕೃತಜ್ಞತೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ದೇಶ ಸೇವೆಗೆ ಅವಕಾಶ ಕಲ್ಪಿಸಿ ಈ ಅಮೃತಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಕ್ಷೇತ್ರದ ಜನತೆ, ಸಮಸ್ತ ಕನ್ನಡಿಗರು, ಬಿಜೆಪಿ-ಜೆಡಿಎಸ್‌ನ ಎಲ್ಲ ಕಾರ್ಯಕರ್ತ ಬಂಧುಗಳಿಗೂ ತುಂಬು ಹೃದಯದ ಕೃತಜ್ಞತೆಗಳು.
-ಎಚ್.ಡಿ. ಕುಮಾರಸ್ವಾಮಿ, ನೂತನ ಕೇಂದ್ರ ಸಚಿವ