Advertisement

ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯತ್ತ; ಸಚಿವ ಆನಂದ್‌ ಸಿಂಗ್‌

06:20 PM Apr 12, 2022 | Team Udayavani |

ಹೊಸಪೇಟೆ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದ್ದು, ಮುಂದೊಂದು ದಿನ ಭಾರತ ವಿಶ್ವದ ದೊಡ್ಡಣ್ಣ ಸ್ಥಾನದಲ್ಲಿರಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಬಣ್ಣಿಸಿದರು.

Advertisement

ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಹೊಸಪೇಟೆ-ಹರಿಹರ ಡೆಮೋ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ದೇಶಕಟ್ಟುವಲ್ಲಿ ದೃಢನಿರ್ಧಾರ, ದೂರದೃಷ್ಟಿಯ ಬೆಳವಣಿಗೆ ಸಾಧ್ಯ. ಕೆಲಸದಲ್ಲಿ ಗುಣ ಮಾತ್ರವಲ್ಲದೇ ಗುಂಡಿಗೆ ಹೊಂದಿರುವ ದೇಶದ ನೂರೆಂಟು ಸಮಸ್ಯೆಗಳಿಗೆ ಪರಿಸಲು ಎಲ್ಲ ರೀತಿಯ ಗುಣ ಹೊಂದಿರುವ ಪ್ರಧಾನಿ ಇರಬೇಕು. ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುತ್ತಿದೆ ಎಂದರು.

ವಿಶ್ವವೇ ನೋಡುವಂತೆ ಅಭಿವೃದ್ಧಿಯಲ್ಲಿ ಸಾಗುತ್ತಿದೆ. ಹಿಂದಿನ ಸರಕಾರದಿಂದ ಆಗಿದ್ದ ಎಲ್ಲ ಲೋಕಗಳನ್ನು ಮೋದಿಯವರು ಸರಿಪಡಿಸುತ್ತಿದ್ದಾರೆ. ತೈಲ ಬೆಲೆ ಏರುತ್ತಿದೆ ಎಂದು ಹಲವರು ವಿರೋಧಿ ಸುತ್ತಿದ್ದಾರೆ. ತೈಲ ಬೆಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾಗುತ್ತದೆ. ಪೆಟ್ರೋಲ್‌ ಬೆಲೆ ಯಾವುದೇ ಪಕ್ಷ ಇದ್ದರೂ ಏಳಿತ ಸಾಮಾನ್ಯ. ಬೆರೆ ಪಕ್ಷದ ಆಡಳಿತ ಇದ್ದಿದ್ದರೆ ಇಷ್ಟೋತ್ತಿಗೆ ಪೆಟ್ರೋಲ್‌ 200 ರಿಂದ 250, ಡಿಸೇಲ್‌ 150ರಿಂದ 200 ರೂಗೆ ಏರುತ್ತಿತ್ತು.

ಪ್ರಧಾನಿ ಮೋದಿಯಂತ ನಾಯಕತ್ವ ಮುಂದೆ ಸಿಗಲ್ಲ. ನಾಯಕನಿಗೆ ಗುಣ ಮಾತ್ರವಲ್ಲ ಗುಂಡಿಗೆ ಕೂಡ ಇರಬೇಕು. 371 ತೆಗೆಯುವಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ನೂರೆಂಟು ಸಮಸ್ಯೆ ಆಗುತ್ತದೆ ಎಂದು ಹೇಳುತ್ತಿದ್ದರು. ಪ್ರಧಾನಿಯವರು ಈ ಸಮಸ್ಯೆಯನ್ನು ಮೊಸರಿನಿಂದ ಕೂದಲು ತೆಗೆದಂಗೆ ಪರಿಹರಿಸಿದರು. ಒಂದು ಊರು ಅಭಿವೃದ್ಧಿ ಆಗಬೇಕು ಎಂದರೆ ಸಾರಿಗೆ ಅಭಿವೃದ್ಧಿಯಾಗಿರಬೇಕು.

ದೇಶ ಅಭಿವೃದ್ಧಿಯಾಗಬೇಕು ಎಂದರೆ ಸಾರಿಗೆ, ರೈಲ್ವೆ, ವಿಮಾನ ಸಾರಿಗೆ ಇರಬೇಕು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಎಲ್ಲ ಕೊರತೆಗಳನ್ನು ನೀಗಿಸಲಾಗಿದೆ ಎಂದರು.

Advertisement

ಸಂಸದ ವೈ. ದೇವೇಂದ್ರಪ್ಪ, ಹೂಡಾ ಅಧ್ಯಕ್ಷ ಅಶೋಕ ಜೀರೆ, ರೈಲ್ಚೆ ಇಲಾಖೆ ಅಧಿಕಾರಿಗಳಾದ ಎಂ. ವರ್ಮಾ, ಎಸ್‌. ಹರಿತಾ, ಎಲ್ಲಪ್ಪ, ಪ್ರಾಣೇಶ, ವಿಜಯನಗರ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ವೈ. ಯಮುನೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next