Advertisement
ಸಹಕಾರಿ ಕ್ಷೇತ್ರದಲ್ಲಿ ಸಂಘಗಳನ್ನು ಬಲ ಪಡಿಸುವುದರ ಜತೆಗೆ ರೈತರ ಧಾನ್ಯಗಳ ದಾಸ್ತಾನಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲು ಕೇಂದ್ರ ಸರಕಾರವು 1.25 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಕಾರ್ಯಕ್ರಮದಲ್ಲಿ ಮೋದಿಯವರು 500 ಇತರ ಪ್ಯಾಕ್ಸ್ ಗಳಲ್ಲಿ ಗೋದಾಮುಗಳು, ಇತರ ಕೃಷಿ ಸೌಲಭ್ಯಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಯೋಜನೆ ಉದ್ಘಾಟಿಸಿ ಮಾತನಾಡಿದ ಮೋದಿ, ಇವತ್ತು ನಾವು ವಿಶ್ವದ ಬೃಹತ್ ಧಾನ್ಯ ಸಂಗ್ರಹ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಬೃಹತ್ ಯೋಜನೆ ಮೂಲಕ, ಮುಂದಿನ ಐದು ವರ್ಷಗಳಲ್ಲಿ 7 ಕೋಟಿ ಟನ್ ಸಂಗ್ರಹ ಸಾಮರ್ಥ್ಯವನ್ನು ನಿರ್ಮಿಸ ಲಾಗುವುದು. ಇದಕ್ಕಾಗಿ 1.25 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು’ ಎಂದು ಹೇಳಿದ್ದಾರೆ. ನಾವು ವಿಶ್ವದ ಬೃಹತ್ ಧಾನ್ಯ ಸಂಗ್ರಹ ಯೋಜನೆಗೆ ಚಾಲನೆ ನೀಡಿದ್ದೇವೆ. ಇದರ ಮೂಲಕ ದೇಶಾದ್ಯಂತ ಸಾವಿರಾರು ಸಂಗ್ರಹಾಗಾರಗಳು, ಗೋದಾಮುಗಳನ್ನು ನಿರ್ಮಿಸಲಾಗು ವುದು. ಹಿಂದಿನ ಸರಕಾರಗಳು ಈ ವಿಚಾರಕ್ಕೆ ಆದ್ಯತೆಯನ್ನೇ ನೀಡಿರಲಿಲ್ಲ. ಇವತ್ತು ಸಹಕಾರಿ ಸಂಘಗಳ ಮೂಲಕ ಈ ಸಮಸ್ಯೆಗೆ ಉತ್ತರ ನೀಡಿದ್ದೇವೆ.
Related Articles
ಈ ಸಂಗ್ರಹಾಗಾರಗಳಲ್ಲಿ ರೈತರು ಧಾನ್ಯ ಸಂಗ್ರಹಿಸಿಡಬಹುದು. ಸೂಕ್ತ ಬೆಲೆ ಬಂದಾಗ ಮಾರಬಹುದು. ಇಲ್ಲಿ ಧಾನ್ಯಗಳನ್ನು ಇರಿಸಿ ಸಾಲವನ್ನೂ ಪಡೆಯಬಹುದು.
Advertisement
2 ಲಕ್ಷ ಪ್ಯಾಕ್ಸ್ ಸ್ಥಾಪನೆ ಗುರಿದೇಶಾದ್ಯಂತ ಕೃಷಿ ಸಹಕಾರಿ ಸಂಘ (ಪ್ಯಾಕ್ಸ್)ಗಳನ್ನು 2 ಲಕ್ಷಕ್ಕೇರಿಸುವ ಗುರಿಯನ್ನು ಮೋದಿ ಸರಕಾರ ಹೊಂದಿದೆ. ಒಟ್ಟು ಕೃಷಿ ಉತ್ಪಾದಕ ಸಂಘಗಳನ್ನು (ಎಫ್ಪಿಒ) 10 ಸಾವಿರಕ್ಕೆ ಏರಿಸುವ ಗುರಿಯಿದೆ. ಈಗಾಗಲೇ 8 ಸಾವಿರ ಎಫ್ಪಿಒಗಳನ್ನು ಸ್ಥಾಪಿಸಲಾಗಿದೆ ಎಂದೂ ಮೋದಿ ಹೇಳಿದ್ದಾರೆ.