Advertisement

ಮತ್ತೂಮ್ಮೆ ಮೋದಿ ಪ್ರಧಾನಿಯಾಗಲು ಮತದಾರ ಸಂಕಲ್ಪ

01:59 AM Apr 17, 2019 | sudhir |

ಮಂಗಳೂರು: ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ಹುಮ್ಮಸ್ಸಿನಿಂದ ಬಿಜೆಪಿ ಕಾರ್ಯಕರ್ತರು ದುಡಿಯುವ ಜತೆಗೆ ಮತದಾರರೂ ಸಂಕಲ್ಪ ತೊಟ್ಟಿದ್ದಾರೆ ಎಂದು ಸಂಸದ, ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ದ.ಕ. ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಮಂಗಳವಾರ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆ ಆಗಿದ್ದು, ಪ್ರಧಾನಿಯವರ ಐದು ವರ್ಷಗಳ ಆಡಳಿತವನ್ನು ಜನ ಸ್ವೀಕರಿಸಿದ್ದಾರೆ. ಜಾತಿ, ಮತ, ಪಂಥ ಮರೆತು ನಾವು ರಾಷ್ಟ್ರದ ಪರ ಎಂದು ಜಿಲ್ಲೆಯ ಜನತೆ ಮೋದಿ ಅವರನ್ನು ಬೆಂಬಲಿಸಲಿದ್ದಾರೆ.

ಕಳೆದ 10 ವರ್ಷ ಸಜ್ಜನಿಕೆಯ, ಭ್ರಷ್ಟಾಚಾರ ರಹಿತ ರಾಜಕಾರಣದ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಮೂರನೇ ಬಾರಿ ಜನರು ಆಯ್ಕೆ ಮಾಡುವ ವಿಶ್ವಾಸವಿದ್ದು, ಜನರ ಆಶೀರ್ವಾದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ಮೂರು ತಿಂಗಳಿನಿಂದ ದ.ಕ. ಕ್ಷೇತ್ರದಲ್ಲಿ ಬಿಜೆಪಿ ಚುನಾವಣೆಯ ಪೂರ್ವ ತಯಾರಿ ಆರಂಭಿ ಸಿತ್ತು. ಅಭ್ಯರ್ಥಿ ಘೋಷಣೆ ಬಳಿಕ ಜಿಲ್ಲೆಯಲ್ಲಿ ನಾಲ್ಕು ಸುತ್ತಿನ ಪ್ರಚಾರ ನಡೆಸಿದ್ದೇನೆ. ಕಾರ್ಯಕರ್ತರು ಮಂಗಳವಾರದವರೆಗೆ ಮೂರು ಸುತ್ತಿನ ಮನೆ-ಮನೆ ಭೇಟಿ ನಡೆಸಿದ್ದಾರೆ. ಈ ಸಂದರ್ಭ ಮತದಾರರಿಂದ ಅಪೂರ್ವ ಸ್ಪಂದನೆ ದೊರೆತಿದೆ ಎಂದರು.

ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಿಗೆ ಸಮಾನ ಆದ್ಯತೆ ನೀಡಿ ಪ್ರಚಾರ ನಡೆಸಲಾಗಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಹೆಚ್ಚು ಗ್ರಾಮಗಳು ಮತ್ತು ಮನೆಗಳೂ ದೂರ ದೂರ ಇರುವ ಕಾರಣ ಸ್ವಲ್ಪ ಹೆಚ್ಚು ಗಮನ ನೀಡಲಾಗಿದೆ. ಎಸ್‌ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಲಾಭ ಅಥವಾ ನಷ್ಟವಿಲ್ಲ.

Advertisement

ಎಸ್‌ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಲಾಭ ಎಂದಾದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸದಿರುವಾಗ ಕಾಂಗ್ರೆಸ್‌ಗೆ ಲಾಭವಾಗಬೇಕಿತ್ತ ಲ್ಲವೇ? ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗೋಪಾಲಕೃಷ್ಣ ಹೇರಳೆ, ರವಿಶಂಕರ ಮಿಜಾರು, ಕಿಶೋರ್‌ ರೈ, ಆರ್‌.ಸಿ. ನಾರಾಯಣ ಉಪಸ್ಥಿತರಿದ್ದರು.

ಮೋದಿ ಸಮಾವೇಶದ ಬಳಿಕ ವಿಪಕ್ಷ ಶಸ್ತ್ರ ತ್ಯಾಗ!
ಲೋಕಸಭೆಗೆ 3ನೇ ಬಾರಿ ಸ್ಪರ್ಧಿಸುತ್ತಿದ್ದೇನೆ. 2009ರಲ್ಲಿ ಮೊದಲ ಬಾರಿ ಸ್ಪರ್ಧಿಸಿದಾಗ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ನಾಲ್ವರು
ಶಾಸಕರಿದ್ದರು. ಬಿಜೆಪಿ ಗೆಲ್ಲುತ್ತದೆ ಎಂದು ಯಾರೂ ಹೇಳಿರಲಿಲ್ಲ. ಆದರೆ 40,000ಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೆ. 2014ರಲ್ಲಿ ಕಾಂಗ್ರೆಸ್‌ನ 7, ಬಿಜೆಪಿಯ ಓರ್ವ ಶಾಸಕರಿದ್ದರು. ಆ ಸಂದರ್ಭ 1.43 ಲಕ್ಷ ಮತಗಳ ಅಂತರದ ಗೆಲುವು ದೊರೆತಿತ್ತು. ಈ ಬಾರಿ ಬಿಜೆಪಿಯ 7 ಶಾಸಕರು, ಕಾಂಗ್ರೆಸ್‌ನ ಒಬ್ಬ ಶಾಸಕರಿದ್ದಾರೆ. ಕೇಂದ್ರದ ಸಾಧನೆ, ಜಿಲ್ಲೆಗೆ ಬಂದ ಅನುದಾನ ಮತ್ತು ಅಭಿವೃದ್ಧಿ ಕಾರ್ಯಮುಂದಿಟ್ಟು ಪ್ರಚಾರ ನಡೆಸಲಾ ಗಿದೆ. 650 ಮಂದಿ ಎನ್‌ಆರ್‌ಐಗಳು ಮೋದಿ ಗಾಗಿ ವಿದೇಶದಿಂದ ಬಂದಿ ದ್ದಾರೆ. ಮೋದಿ ಸಮಾವೇಶದ ಬಳಿಕ ವಿಪಕ್ಷಗಳು ಶಸ್ತ್ರ ತ್ಯಾಗ ಮಾಡಿದಂತೆ ಕಾಣುತ್ತಿದೆ ಎಂದು ನಳಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next