Advertisement

ದೇಶ ಬಲಿಷ್ಟಗೊಳಿಸಲು ಮೋದಿ ಕಂಕಣ ಬದ್ದ: ಚಿಂಚನಸೂರ

03:37 PM Jun 21, 2022 | Team Udayavani |

ಗುರುಮಠಕಲ್‌: ದೇಶವನ್ನು ಬಲಿಷ್ಠಗೊಳಿಸಲು ಮೋದಿ ಕಂಕಣ ಬದ್ಧರಾಗಿದ್ದು, ಅವರ ಹೆಗಲಿಗೆ ಹೆಗಲು ಕೊಟ್ಟು ಅವರ ಜತೆಯಲ್ಲಿ ನಾವು ನಡೆಯಬೇಕಾಗಿದೆ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಅವರು ಹೇಳಿದರು.

Advertisement

ತಾಲೂಕಿನ ಬೋರಬಂಡಾ ಗ್ರಾಮದ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಪಂಕ್ಷನ್‌ ಹಾಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಗುರುಮಠಕಲ್‌ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಭಾರತದ ಶಿಲ್ಪಿಯಾಗಿದ್ದಾರೆ. ಅವರಿಂದ ದೇಶ ಅಭಿವೃದ್ಧಿಯಾಗಲಿದೆ. ಮೋದಿ ಅವರಿಂದಲೇ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ಕಾಂಗ್ರೆಸ್‌ ಪಕ್ಷ ತಾಯಿ, ಮಗನ ಪಕ್ಷವಾಗಿದೆ. ಜೆಡಿಸ್‌ ಪಕ್ಷ ತಂದೆ, ಮಗನ ಪಕ್ಷವಾಗಿದ್ದು ಎರಡು ಪಕ್ಷಗಳು ಇಂದು ಖಾಲಿಯಾಗಿವೆ. ಎಲ್ಲರೂ ಬಿಜೆಪಿ ಕದ ತಟ್ಟುತ್ತಿದ್ದು, ಮುಂಬರುವ ದಿನಗಳಲ್ಲಿ ಪಕ್ಷ ಮತ್ತೂಮ್ಮೆ ಅಧಿ ಕಾರಕ್ಕೆ ಬರುವುದು ಶತ ಸಿದ್ಧ ಎಂದು ಹೇಳಿದರು.

ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರೆಡ್ಡಿ, ವಿಭಾಗದ ಸಹ ಈಶ್ವರಸಿಂಗ್‌ ಟಾಗೋರ್‌, ಯಾದಗಿರಿ ಬಿಜೆಪಿ ಜಿಲ್ಲಾ ಪಭಾರಿ ಅಮರನಾಥ ಪಾಟೀಲ್‌, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡಿ, ರಾಜ್ಯ ಉಪಾಧ್ಯಕ್ಷರಾದ ಲಲಿತಾ ಅನ್ನಪುರ, ಮಾಜಿ ರಾಜ್ಯ ಉಪಾಧ್ಯಕ್ಷರಾದ ನಾಗರಾತ್ನ ಕುಪ್ಪಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ಮೋದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ದೇವಿಂದ್ರನಾಥ ನಾದ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಮೊನೇಶ್‌ ಬೆಳಗೇರಾ, ಯುವಮೋರ್ಚಾ ತಾಲೂಕು ಅಧ್ಯಕ್ಷ ವಿನಾಯಕರಾವ್‌ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next