ಸಿಂದಗಿ: ಮಾರಣಾಂತಿಕ ಕೋವಿಡ್-19 ಸೋಂಕಿನ ವಿರುದ್ಧ ಮೇಡ್ ಇನ್ ಇಂಡಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಹಾಗೂ ಸೋಂಕು ಹರಡಿದ ಒಂದು ವರ್ಷದೊಳಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇತರ ಕ್ರಮಗಳನ್ನು ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು.
ಸೊಮವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಉತ್ತಮ ಕಾರ್ಯ ಮಾಡಿದೆ. ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ದಿಟ್ಟ ಕ್ರಮ ಕೈಗೊಂಡು ಯಶಸ್ವಿಯಾಗಿದೆ. ಕೊರೊನಾ ವೇಳೆ ಪ್ರಧಾನಿ ಮೋದಿ ಗಟ್ಟಿ ತೀರ್ಮಾನ ಮತ್ತು ಸರಿಯಾದ ಸಮಯದಲ್ಲಿ ಲಾಕ್‌ಡೌನ್ ಮಾಡಿದರು. ಭಾರತದಲ್ಲಿ ಪ್ರತಿ ದಿನ ಆರು ಲಕ್ಷ ಪಿಪಿಇ ಕಿಟ್ ತಯಾರಾಗುತ್ತಿದೆ. ಕೋವಿಡ್-19 ಪ್ರವೇಶದಿಂದಾಗಿ ಭಾರತದಲ್ಲಿ ಒಂದೇ ಒಂದು ಕಿಟ್ ತಯಾರಾಗುತ್ತಿರಲಿಲ್ಲ.
ಈಗ ಜಗತ್ತಿನ ಮುಂದೆ ಭಾರತದ ಶಕ್ತಿ ಅನಾವರಣಗೊಂಡಿದೆ. ಏಳು ವರ್ಷದ ಆಡಳಿತ ಭಾರತವನ್ನು ಸಶಕ್ತಗೊಳಿಸಿದೆ. ಕೊರೊನಾದಿಂದ ದೇಶವನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕಾರಣ ನಡೆಸಿದೆ. ರಾಜಕೀಯ ದೃಷ್ಟಿಯಿಂದ ಇಲ್ಲದ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಈ ರೀತಿ ನಡೆದುಕೊಂಡಿದ್ದು ದುಃಖದ ವಿಷಯ. ದೇಶದಲ್ಲಿ ಸಂಕಷ್ಟ ಇದ್ದಾಗ ಸರ್ಕಾರದ ಜೊತೆ ಪ್ರತಿ ಪಕ್ಷಗಳು ಕೈಜೋಡಿಸಬೇಕು. ಇವತ್ತಿನ ಸಂಕಷ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಸಾಥ್ ಕೊಡಲಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ಗೆ ದೇಶದ ಚಿಂತೆ ಇಲ್ಲ.
ಇವರಿಗೆ ದೇಶದ ಹಿತಕ್ಕಿಂತ ರಾಜಕೀಯ ನಡೆಸುವುದೇ ದೊಡ್ಡದಾಗಿದೆ. ಕಾಂಗ್ರೆಸ್‌ಗೆ ಪ್ರತಿ ಪಕ್ಷದ ಕರ್ತವ್ಯಗಳು ಗೊತ್ತಿಲ್ಲದಿದ್ದರೆ ನಮ್ಮಿಂದ ಕಲಿಯಲಿ. ದೇಶ ಸಂಕಷ್ಟದಲ್ಲಿ ಇದ್ದಾಗ ನಾವು ಯಾವತ್ತು ಕೊಳಕು ರಾಜಕೀಯ ಮಾಡಿಲ್ಲ ಎಂದು ಹೇಳಿದರು. ಕೊರೊನಾ ಸಂಕಷ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಜನತೆ ಏಕತೆಯಿಂದ ಸ್ಪಂದಿ ಸಿ ಜನತಾ ಕರ್ಫ್ಯೂಗೆ ಬೆಂಬಲ ನೀಡಿದರು. ಲಾಕ್‌ಡೌನ್ ವಿಚಾರದಲ್ಲೂ ಸಹಕಾರ ನೀಡಿದರು. ಒಂದು ಮತ್ತು ಎರಡನೇ ಅಲೆಯಲ್ಲಿ ಜನ ಸಹಕಾರ ನೀಡಿದ್ದಾರೆ. ವಿಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ.
ಕೋವಿಡ್-19 ವಿರುದ್ಧ ಕೇಂದ್ರ ಸರ್ಕಾರ ಹೋರಾಡುವ ಸಂದರ್ಭದಲ್ಲಿ ಎಂದು ಲಸಿಕೆ ಸಂಶೋಧನೆ ಆಯಿತೋ ಅಂದೇ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಹಾಕಿಕೊಳ್ಳಿ ಎಂದು ಸಂದೇಶ ನೀಡಿದರು. ಆಗ ಕಾಂಗ್ರೆಸ್ ಇದು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಅಪಪ್ರಚಾರ ಮಾಡಿತು. ಈಗ ಅವರೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ಪೂರೈಸುವಲ್ಲಿ ಹಿಂದೆ ಬಿದ್ದಿದೆ ಎಂದು ಆರೋಪಿಸುತ್ತಿದೆ. ಅವರ ಆರೋಪಕ್ಕೆ ತಳ ಬುಡ ಇಲ್ಲದಂತಿವೆ ಎಂದರು.
ಸಿಂದಗಿ ಮತಕ್ಷೇತ್ರದಲ್ಲಿ ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತೋರಿಕೆಗಾಗಿ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ಕಾರ್ಯರ್ತರು ಬೂತ್‌ಮಟ್ಟದಿಂದ ಕಾರ್ಯ ಮಾಡುವ ಮೂಲಕ ಕೊರೊನಾ ರೋಗಿಗಳ ಸೇವೆ ಮಾಡಿದ್ದಾರೆ ಎಂದ ಅವರು, ಪೌಷ್ಟಿಕ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ ಎಂದರು. ಬಿಜೆಪಿ ಸಿಂದಗಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ, ಕರ್ನಾಟಕ ನಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪುರ, ಬಿ.ಎಚ್. ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಸಿದ್ದು ಬಿರಾದಾರ ಅಡಕಿ, ಕೆಡಿಪಿ ಸದಸ್ಯ ಶಿವುಕುಮಾರ ಬಿರಾದಾರ, ಪ್ರಕಾಶ ಪಟ್ಟಣಶೆಟ್ಟಿ, ಸಿದ್ದು ಬುಳ್ಳಾ, ಪ್ರದೀಪ ದೇಶಪಾಂಡೆ, ಪ್ರಕಾಶ ನಂದಿಕೋಲ, ಗುರು ತಳವಾರ, ಶಿಲ್ಪಾ ಕುದರಗೊಂಡ, ಸುನಂದಾ ಯಂಪುರೆ, ಶೈಲಾ ಸ್ಥಾವರಮಠ, ಜ್ಯೋತಿ, ಚನ್ನಪ್ಪಗೌಡ ಬಿರಾದಾರ, ರವಿ ನಾಯೊRàಡಿ, ಸುದರ್ಶನ ಜಿಂಗಾಣಿ ಇದ್ದರು.