Advertisement

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

07:01 PM Apr 30, 2024 | Kavyashree |

ತೀರ್ಥಹಳ್ಳಿ: ಮೋದಿ ಒಬ್ಬ ಸುಳ್ಳುಗಾರ, ಅಧಿಕಾರಕ್ಕೆ ಬಂದು 10 ವರ್ಷದಲ್ಲಿ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಅಂಬಾನಿ, ಅದಾನಿಗೆ ಹಣ ಮಾಡಿಕೊಡಲು ಜನರಿಗೆ ಬರೆ ಹಾಕಿದ್ದಾರೆ. ಪ್ರತಿ ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ಪ್ರಧಾನಿ ಸುಳ್ಳು ಭಾಷಣ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

Advertisement

ಏ. 29ರ ಸೋಮವಾರ ರಾತ್ರಿ ತೀರ್ಥಹಳ್ಳಿ ಪಟ್ಟಣದಲ್ಲಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದರು.

ಐಪಿಎಲ್ ಬೆಟ್ಟಿಂಗ್, ಡ್ರಗ್ಸ್ ಮಾಫಿಯಾದಿಂದ ಹಣ ಮಾಡುತ್ತಿದ್ದಾರೆ. ಅವರಿಗೆ ಇದ್ಯಾವುದು ಗೊತ್ತೇ ಇಲ್ವಾ? ಸಿದ್ದರಾಮಯ್ಯ ರಾಜ್ಯದಲ್ಲಿ ಬಡವರಿಗೆ ಹಲವು ಯೋಜನೆ ಕೊಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 60 ವರ್ಷ ಆಳಿ ಊಟಕ್ಕಿಲ್ಲದ ಹಂತದಿಂದ ದೇಶವನ್ನು ಯುದ್ಧ, ಅಭಿವೃದ್ಧಿ ಎಲ್ಲವನ್ನು ಮಾಡಿದೆ. ಆದರೆ ಬಿಜೆಪಿ ಹಾಗೂ ಮೋದಿ ಅವರು, ಪಾಕಿಸ್ತಾನ, ಮುಸ್ಲಿಂ, ತಾಲಿಬಾನ್ ಅಂತ ಇಲ್ಲಿ ಕೋಮು ದ್ವೇಷ ಬಿತ್ತಿ ತನ್ನ ರಾಜಕೀಯ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ನನಗೆ ಒಂದು ಅವಕಾಶ ಕೊಡಿ. ನಿಮ್ಮೆಲ್ಲರ ಸೇವೆಗೆ ನಾನು ಬದ್ಧ. ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಶಿವರಾಜ್ ಕುಮಾರ್ ಮಾತನಾಡಿ, ಬಡವರು, ಶ್ರೀಮಂತ ಅಂತ ಬೇಧ-ಭಾವ ಬೇಡ, ಎಲ್ಲರೂ ಹೃದಯದ ಮೂಲಕ ಪ್ರೀತಿಸಬೇಕು. ರಾಘವೇಂದ್ರ ಅವರಿಗೆ ಅವಕಾಶ ಕೊಟ್ಟಿದ್ದೀರಿ. ಗೀತಾಳಿಗೆ ಒಮ್ಮೆ ಅವಕಾಶ ಕೊಡಿ. ಅವಳಿಗೆ ನಾನು ಗ್ಯಾರಂಟಿ. ಮೇ 7ಕ್ಕೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿ ತಮ್ಮ ಡೈಲಾಗ್ ಮತ್ತು ಹಾಡಿನ ಮೂಲಕ ಗಮನ ಸೆಳೆದರು.

Advertisement

ಬಾರದ ಚಲನಚಿತ್ರ ನಟ ನಟಿಯರು !

ಖ್ಯಾತ ಚಲನಚಿತ್ರ ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ, ಚಿಕ್ಕಣ್ಣ, ನಿಶ್ವಿಕಾ ನಾಯ್ಡು, ಚಂದನ್‌ ಶೆಟ್ಟಿ, ಅನುಶ್ರೀ, ಅಕುಲ್ ಬಾಲಾಜಿ ಹಾಗೂ ಅನೇಕ ಚಿತ್ರನಟರು ಈ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಬೇಕಿತ್ತು. ಆದರೆ ರಿಪ್ಪನ್‌ ಪೇಟೆ ಹಾಗೂ ಹೊಸನಗರದಲ್ಲಿ ನಡೆದ ಕಾರ್ಯಕ್ರಮಗಳು ತಡವಾದ ಕಾರಣ ತೀರ್ಥಹಳ್ಳಿಗೆ ಗೈರಾದರು.

ಈ ಸಂದರ್ಭದಲ್ಲಿ  ಕಿಮ್ಮನೆ ರತ್ನಾಕರ್, ಡಾ.ಎಂ ಮಂಜುನಾಥ್ ಗೌಡ, ಶೃಂಗೇರಿ ಶಾಸಕ ರಾಜೇಗೌಡ, ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next