ಅಹಮದಾಬಾದ್: ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ʻಮೋದಿ ಹಟಾವೋ, ದೇಶ್ ಬಚಾವೋʼ ಪೋಸ್ಟರ್ ಅಂಟಿಸಿದ ಮಾದರಿಯಲ್ಲೇ ಗುಜರಾತ್‌ನ ಅಹಮದಾಬಾದ್‌ನ ಹಲವು ಪ್ರದೇಶಗಳಲ್ಲಿ ಇದೇ ರೀತಿಯ ಪೋಸ್ಟರ್ ಅಂಟಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಸರ್ಕಾರಿ ಆಸ್ತಿಯ ಮೇಲೆ ದೇಶದ ಪ್ರಧಾನಿಯವರ ಬಗ್ಗೆ ಆಕ್ಷೇಪಾರ್ಹ ಬರಹಗಳನ್ನು ಅಂಟಿಸಿರುವ ಕಾರಣಕ್ಕೆ ಬಂಧಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ದೆಹಲಿಯ ಗೋಡೆಗಳಲ್ಲಿ ಮತ್ತು ಕರೆಂಟ್ ಕಂಬಗಳ ಮೇಲೆ ʻಮೋದಿ ಹಟಾವೋ, ದೇಶ್ ಬಚಾವೋʼ ಎಂಬ ಪೋಸ್ಟರ್ ಅಂಟಿಸಿದ ಕಾರಣಕ್ಕೆ 6 ಮಂದಿಯನ್ನು ಪೋಲಿಸರು ಬಂಧಿಸಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪೋಸ್ಟರ್‌ಗಳು ಕಂಡುಬಂದಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಾದ್ಯಂತ ಸುಮಾರು 100 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ಪೋಲಿಸರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್
ಈ ಮಾದರಿಯ ಸುಮಾರು 1 ಲಕ್ಷಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಪ್ರಿಂಟ್ ಮಾಡಿಸಲು 2 ಪ್ರಿಂಟಿಂಗ್ ಪ್ರೆಸ್‌ಗಳಿಗೆ ಆರ್ಡರ್ ನೀಡಲಾಗಿತ್ತು. ಸದ್ಯ ಈ ಹಿನ್ನಲೆಯಲ್ಲಿ ಎರಡು ಪ್ರೆಸ್‌ಗಳ ಮಾಲಿಕರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.