Advertisement

6 ತಿಂಗಳು ಪೂರೈಸಿದ ಮೋದಿ ಸರಕಾರ

10:01 AM Dec 02, 2019 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಮೋದಿ ಸರಕಾರವು 2ನೇ ಅವಧಿಗೆ ಅಧಿಕಾರಕ್ಕೆ ಬಂದು ಶನಿವಾರಕ್ಕೆ ಆರು ತಿಂಗಳು ಸಂದಿವೆ. ಈ ಹಿನ್ನೆಲೆಯಲ್ಲಿ, #6monthsofIndiafirst ಎಂಬ ಹ್ಯಾಶ್‌ಟ್ಯಾಗ್‌ನಡಿ ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ಕಳೆದ ಅರ್ಧ ವರ್ಷದಲ್ಲಿ ನಮ್ಮ ಸರಕಾರ ಕೈಗೊಂಡಿರುವ ಹಲವು ಪ್ರಮುಖ ನಿರ್ಧಾರಗಳು, ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಸಾಮಾಜಿಕ ಸಬಲೀಕರಣ ಹಾಗೂ ಏಕತೆಗೆ ಪ್ರೇರಣೆ ನೀಡಿವೆ’ ಎಂದಿದ್ದಾರೆ.

Advertisement

“ಮುಂದಿನ ದಿನಗಳಲ್ಲಿ ದೇಶವನ್ನು ಮತ್ತಷ್ಟು ಸಂಪದ್ಭರಿತವ ನ್ನಾಗಿಸಲು, ಪ್ರಗತಿಪರವಾಗಿಸಲು ಇನ್ನಷ್ಟು ಸೇವೆ ಮಾಡಲು ನಮ್ಮ ಸರಕಾರ ಸಿದ್ಧವಿದೆ. “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಧ್ಯೇಯದಲ್ಲಿ, 130 ಕೋಟಿ ಪ್ರಜೆಗಳ ಆಶೀರ್ವಾದದೊಂದಿಗೆ ಎನ್‌ಡಿಎ ಸರಕಾರ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿದೆ. 130 ಕೋಟಿ ಪ್ರಜೆಗಳ ಜೀವನವನ್ನು ಸಬಲವಾಗಿಸಲು ಮತ್ತಷ್ಟು ಹುರುಪಿನಿಂದ ಮುಂದಡಿಯಿಡಲಿದೆ’ ಎಂದು ತಿಳಿಸಿದ್ದಾರೆ.

ಅಭಿವೃದ್ಧಿ, ಸುರಕ್ಷತೆಗೆ ಬದ್ಧ; ಜಾಬ್ಡೇಕರ್‌: ಆರು ತಿಂಗಳು ಪೂರ್ಣಗೊಳಿಸಿದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಮೋದಿಯವರ 2ನೇ ಅವಧಿಯ ಸರಕಾರದ ಮೊದಲ ಆರು ತಿಂಗಳು, ರಾಷ್ಟ್ರದ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಸುರಕ್ಷತೆಗೆ ತನ್ನನ್ನು ಮುಡಿಪಾಗಿಟ್ಟಿದೆ. ಮುಂದೆಯೂ ಅದೇ ರೀತಿ ತನ್ನ ಸೇವೆಯನ್ನು ಮುಂದುವರಿಸಲಿದೆ ಎಂದಿದ್ದಾರೆ. ಅಲ್ಲದೆ, ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೆ ತೀರಾ ನಗಣ್ಯವಾಗಿದೆ. ಆದರೂ, ಅದರ ದುಷ್ಪರಿಣಾಮಗಳನ್ನು ತಡೆ ಯಲು ಸರಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next