Advertisement

ಮೋದಿ ಸರ್ಕಾರದ ದಶಕದ ಧ್ಯೇಯಗಳು

10:51 PM Jul 05, 2019 | Team Udayavani |

1. ಭೌತಿಕ ಹಾಗೂ ಸಾಮಾಜಿಕ ಮೂಲಸೌಕರ್ಯಗಳ ನಿರ್ಮಾಣ.

Advertisement

2. ಆರ್ಥಿಕತೆಯ ಪ್ರತಿಯೊಂದು ವಲಯಕ್ಕೂ ಡಿಜಿಟಲ್‌ ಇಂಡಿಯಾ ತಲುಪುವಂತೆ ಮಾಡುವುದು.

3. ಹಸಿರು ಭೂಮಿ ಮತ್ತು ನೀಲಾಕಾಶ ಹೊಂದಿರುವ ಮಾಲಿನ್ಯ ಮುಕ್ತ ಭಾರತ.

4. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಸ್ಟಾರ್ಟ್‌ಅಪ್‌ಗ್ಳು, ರಕ್ಷಣಾ ಉತ್ಪಾದನೆ, ಆಟೋಮೊಬೈಲ್ಸ್‌, ಎಲೆಕ್ಟ್ರಾನಿಕ್ಸ್‌, ಬ್ಯಾಟರಿಗಳು, ವೈದ್ಯಕೀಯ ಸಾಧನಗಳನ್ನು ಗಮನದಲ್ಲಿಟ್ಟುಕೊಂಡು ಮೇಕ್‌ ಇನ್‌ ಇಂಡಿಯಾ.

5. ನೀರು, ನೀರು ನಿರ್ವಹಣೆ, ಸ್ವತ್ಛ ನದಿಗಳು.

Advertisement

6. ನೀಲಿ ಆರ್ಥಿಕತೆ (ಸಮುದ್ರ ಆರ್ಥಿಕತೆ).

7. ಬಾಹ್ಯಾಕಾಶ ಯೋಜನೆಗಳು, ಗಗನಯಾನ, ಚಂದ್ರಯಾನ ಮತ್ತು ಉಪಗ್ರಹ ಯೋಜನೆಗಳು.

8. ಆಹಾರಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು, ಹಣ್ಣುಗಳು ಮತ್ತು ತರಕಾರಿಗಳ ರಫ್ತು ಮತ್ತು ಸ್ವಾವಲಂಬನೆ.

9. ಆರೋಗ್ಯವಂತ ಸಮಾಜ – ಆಯುಷ್ಮಾನ್‌ ಭಾರತ್‌, ಮಹಿಳಾ ಮತ್ತು ಮಕ್ಕಳ ಉತ್ತಮ ಪೋಷಣೆ, ನಾಗರಿಕರ ಸುರಕ್ಷತೆ.

10. ಜನ ಭಾಗೀದಾರಿ ಮೂಲಕ ಇಡೀ ಭಾರತವನ್ನೇ ಒಂದು ತಂಡವಾಗಿ ರೂಪಿಸುವುದು. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ

ಸೆನ್ಸೆಕ್ಸ್‌ಗೆ ಶಾಕ್‌: ಶುಕ್ರವಾರ ಬಜೆಟ್‌ ಭಾಷಣ ಆರಂಭವಾಗುವು ದಕ್ಕೂ ಮುನ್ನ ಏರಿಕೆಯ ಹಾದಿಯಲ್ಲಿದ್ದ ಮುಂಬೈ ಷೇರುಪೇಟೆ ನಂತರ ಕುಸಿತದ ಆಘಾತ ಎದುರಿಸಿತು. ಬೆಳಗ್ಗೆ ವಹಿವಾಟು ಆರಂಭವಾದ ಸ್ವಲ್ಪ ಹೊತ್ತಲ್ಲೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 40 ಸಾವಿರದ ಗಡಿ ದಾಟಿತ್ತು.

ಆದರೆ, ಸಾರ್ವಜನಿಕರ ಷೇರು ಹೂಡಿಕೆಯ ಕನಿಷ್ಠ ಮಿತಿಯನ್ನು ಈಗಿರುವ ಶೇ.25ರಿಂದ ಶೇ.35ಕ್ಕೇರಿಸುವ ಸಮಯ ಬಂದಿದೆ ಎಂದು ವಿತ್ತ ಸಚಿವೆ ಘೋಷಿಸಿದರೋ, ಹೂಡಿಕೆ ದಾರರು ಆತಂಕಗೊಂಡು ಷೇರು ಮಾರಾಟದಲ್ಲಿ ತೊಡಗಿದರು. ಪರಿಣಾಮ ಸೆನ್ಸೆಕ್ಸ್‌ 394 ಅಂಕ ಕುಸಿತ ಕಂಡು, ದಿನಾಂತ್ಯಕ್ಕೆ 39,513ರಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 135 ಅಂಕ ಕುಸಿದು, 11,811ರಲ್ಲಿ ಕೊನೆಗೊಂಡಿತು.

ಹೆತ್ತವರು ಭಾಗಿ: ಮೊದಲ ಪೂರ್ಣಪ್ರಮಾಣದ ಮಹಿಳಾ ವಿತ್ತ ಸಚಿವರೆಂಬ ಹೆಗ್ಗಳಿಕೆ ಪಡೆದಿರುವ ತಮ್ಮ ಪುತ್ರಿ ನಿರ್ಮಲಾ ಸೀತಾರಾಮನ್‌ ಚೊಚ್ಚಲ ಬಜೆಟ್‌ ಮಂಡಿಸುವುದನ್ನು ಕಣ್ತುಂಬಿ ಕೊಳ್ಳಲೆಂದೇ ಅವರ ಹೆತ್ತವರು ಸಂಸತ್‌ಗೆ ಆಗಮಿಸಿದ್ದರು. ನಿರ್ಮಲಾ ಅವರ ತಾಯಿ ಸಾವಿತ್ರಿ ಸೀತಾರಾಮನ್‌ ಮತ್ತು ತಂದೆ ನಾರಾಯಣನ್‌ ಸೀತಾರಾಮನ್‌ ಪ್ರತ್ಯೇಕ ಕಾರಿನಲ್ಲಿ ಸಂಸತ್‌ಗೆ ಬಂದಿಳಿದರು. ನಾರಾಯಣನ್‌ ಅವರು ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸಿದವರು, ತಾಯಿ ಸಾವಿತ್ರಿ ಗೃಹಿಣಿ. ಇವರು ತಮಿಳು ನಾಡಿನವರು. ಇನ್ನು ನಿರ್ಮಲಾ ಅವರ ಪುತ್ರಿ, ಪತ್ರಕರ್ತೆ ವಂಗಮಾಯಿ ಪರಕಾ ಲ ಅವರೂ ಬಜೆಟ್‌ ಮಂಡನೆ ವೀಕ್ಷಿಸಿದ್ದು ಕಂಡುಬಂತು.

ಹನಿ ನೀರೂ ಕೇಳಲಿಲ್ಲ: ಸಚಿನೆ ನಿರ್ಮಲಾ ಅವರ ಉರ್ದು, ಹಿಂದಿ, ತಮಿಳು ದ್ವಿಪದಿ ಮಿಶ್ರಿತ ಬಜೆಟ್‌ ಭಾಷಣವು ಅತ್ಯಂತ ದೀರ್ಘಾವಧಿಯ ಬಜೆಟ್‌ ಭಾಷಣ ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾ ಗಿದೆ. ಚೊಚ್ಚಲ ಬಜೆಟ್‌ ಆದರೂ, ಸತತ 2 ಗಂಟೆ 17 ನಿಮಿಷಗಳ ಕಾಲ ಬಜೆಟ್‌ ಮಂಡಿ ಸಿದ ನಿರ್ಮಲಾ ಮಧ್ಯೆ ಎಲ್ಲೂ ಭಾಷಣ ನಿಲ್ಲಿಸದೇ, ಕುಡಿಯಲು ಹನಿ ನೀರೂ ಕೇಳದೆ ತಮ್ಮ ಕರ್ತವ್ಯ ಪೂರ್ಣಗೊಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಜತೆಗೆ, ಅವರು ಬಜೆಟ್‌ ಪ್ರಸ್ತಾಪಗಳನ್ನು ಮುಂದಿಡುತ್ತಾ ಹೋದಂತೆ, ಪ್ರಧಾನಿ ಮೋದಿ ಸಹಿತ ಎಲ್ಲರೂ ಮೇಜು ಕುಟ್ಟಿ ತಮ್ಮ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು.

ಸಚಿವೆಗೆ ಮೆಚ್ಚುಗೆ: ಶುಕ್ರವಾರ ಬೆಳಗ್ಗೆ 10.55ಕ್ಕೂ ಮೊದಲೇ ವಿತ್ತ ಸಚಿವೆ ನಿರ್ಮಲಾ ಸದನ ಪ್ರವೇಶಿಸಿ, ತಮ್ಮ ಸೀಟಿನಲ್ಲಿ ಆಸೀನರಾದರು. ಅಷ್ಟರಲ್ಲಿ, ಮಹಿಳಾ ಸಂಸದರೆಲ್ಲ ಅವರ ಬಳಿ ಬಂದು, ಚೊಚ್ಚಲ ಬಜೆಟ್‌ ಮಂಡಿಸುತ್ತಿರುವುದಕ್ಕೆ ಶುಭಕೋರಿದರು. ಬಳಿಕ ಆತ್ಮವಿಶ್ವಾಸದಿಂದ ಎದ್ದು ನಿಂತು, ಮೈಕ್‌ ಸರಿಪಡಿಸಿಕೊಂಡ ನಿರ್ಮಲಾ ನಿರರ್ಗಳವಾಗಿ ಬಜೆಟ್‌ ಮಂಡಿಸಿ ದರು. ಸ್ಪೀಕರ್‌ ಓಂ ಬಿರ್ಲಾ ಅವರೂ ನಿರ್ಮಲಾಗೆ ಮೆಚ್ಚುಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next