Advertisement

ಮೋದಿ ಸರಕಾರ 2.0: ವರ್ಷದ ಸಂಭ್ರಮಕ್ಕೆ ಕಾಶ್ಮೀರವೇ ಮುಕುಟ

01:24 AM May 30, 2020 | Sriram |

ಹೊಸದಿಲ್ಲಿ: ಅಭೂತಪೂರ್ವ ಜಯಭೇರಿ, ಐತಿಹಾಸಿಕ ನಿರ್ಣಯಗಳು, ಈಡೇರಿದ ಶತಮಾನದ ಕನಸು, ಬೆಟ್ಟದಷ್ಟು ಸವಾಲುಗಳು- ಈ ನಾಲ್ಕು ಘಟ್ಟಗಳನ್ನು ದಾಟಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಯಶಸ್ವೀ ಒಂದು ವರ್ಷ ಪೂರೈಸಿದೆ. ಮೇ 30ರಂದು ಬಿಜೆಪಿ ಸರಕಾರವು ಕೇಂದ್ರದಲ್ಲಿ ಅಧಿಕಾರ ಹಿಡಿದು ಚೊಚ್ಚಲ ವರ್ಷ ಪೂರೈಸಿದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.

Advertisement

ಕಾಶ್ಮೀರಕ್ಕೆ ಹೊಸ ರೂಪ
ಪಾಕ್‌ ಉಗ್ರಗಾಮಿಗಳ ಕಪಿಮುಷ್ಟಿಯಿಂದ ಬಿಡಿಸಿ ಕಾಶ್ಮೀರವನ್ನು ಶಾಂತವಾಗಿಡಲು ಎನ್‌ಡಿಎ ಸರಕಾರ ಈ ಹಿಂದೆಯೂ ಶ್ರಮಿಸಿತ್ತು. ಆದರೆ ಸೂಕ್ತ ಅವಕಾಶ ಕೂಡಿ ಬಂದಿರಲಿಲ್ಲ. ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ಜಾರಿಯಲ್ಲಿದ್ದ ವಿಶೇಷ ಸ್ಥಾನಮಾನ ರದ್ದತಿ, ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ್ದು ಮೋದಿ 2.0 ಸರಕಾರದ ಆರಂಭಿಕ ಮೈಲುಗಲ್ಲು. ಉಗ್ರವಾದ ಬಗ್ಗುಬಡಿದು ಕಣಿವೆ ರಾಜ್ಯದಲ್ಲಿ ಶಾಂತಿಸ್ಥಾಪನೆಗೆ ಈ ನಿರ್ಣಯ ಸಾಕಷ್ಟು ನೆರವಾಗಿದೆ. ಜತೆಗೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡಲೂ ಇದ ರಿಂದ ಸಾಧ್ಯ ವಾಗುತ್ತಿದೆ.

ಬ್ಯಾಂಕ್‌ಗಳ ವಿಲೀನ
ಸಿಂಡಿಕೇಟ್‌, ಕಾರ್ಪೊರೇಶನ್‌ ಬ್ಯಾಂಕ್‌ ಸಹಿತ ಪ್ರಮುಖ 10 ಬ್ಯಾಂಕ್‌ಗಳ ವಿಲೀನ ಕೂಡ ಒಂದು ವಿತ್ತ ಕ್ರಾಂತಿಯೇ ಆಯಿತು. ಬ್ಯಾಂಕಿಂಗ್‌ ವೆಚ್ಚ ನಿಯಂತ್ರಣಕ್ಕೆ ಕಡಿವಾಣ ಹಾಕಿ, ಬ್ಯಾಂಕ್‌ಗಳನ್ನು ವಿಶ್ವದರ್ಜೆಯಲ್ಲಿ ಬಲಿಷ್ಠಗೊಳಿಸುವ ಕನಸನ್ನು ಸರಕಾರ ಕಂಡಿದೆ.

ಶತಮಾನದ ಕನಸು ನನಸು
ಹಿಂದೂಗಳ ಮತದಿಂದಲೇ ಮತ್ತೆ ಮತ್ತೆ ಅಧಿಕಾರ ಹಿಡಿದ ಬಿಜೆಪಿಗೆ ರಾಮಮಂದಿರ ನಿರ್ಮಾಣ ಬಹು ದೊಡ್ಡ ಸವಾಲಾಗಿತ್ತು. ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ಅಯೋಧ್ಯೆ ತೀರ್ಪು ಶತಮಾನದಷ್ಟು ಹಳೆಯ ದಾಗಿದ್ದ ಕಗ್ಗಂಟು ಬಿಡಿಸಿಕೊಳ್ಳಲು ನೆರ ವಾಯಿತು. ಪ್ರಸ್ತುತ ರಾಮ ಮಂದಿರಕ್ಕೆ ಚಾಲನೆ ನೀಡಿರು ವುದು ಮೋದಿ ಸರಕಾರದ ಮೇಲೆ ಇನ್ನಷ್ಟು ಭರವಸೆ ಹೆಚ್ಚಿಸಿದೆ.

ಐತಿಹಾಸಿಕ ಹೆಜ್ಜೆಗಳು
ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ಸಂರಕ್ಷಿಸು ವಲ್ಲಿಯೂ ಕೇಂದ್ರ ಸರಕಾರ ಯಶಸ್ವಿಯಾಯಿತು. ಸಾಕಷ್ಟು ಚರ್ಚೆಗಳ ನಡುವೆ ತ್ರಿವಳಿ ತಲಾಖ್‌ ಮಸೂದೆ ಅಂಗೀಕರಿಸಿ, ಐತಿಹಾಸಿಕ ಋಜು ಬರೆದಿದೆ.

Advertisement

ಕೈಗೆಟಕಿದ ಪೌರತ್ವದ ಭರವಸೆ
2014ರ ಚುನಾವಣೆಯಿಂದಲೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತ ಬಂದಿದ್ದ ಪೌರತ್ವ ತಿದ್ದುಪಡಿ ಮಸೂದೆಯೂ ಚರ್ಚೆ, ವಿವಾದಗಳ ನಡುವೆ ನಿಶ್ಚಿತ ದಡ ಸೇರಿದೆ. ಇದರಂತೆ ಅಫ್ಘಾನಿಸ್ಥಾನ, ಪಾಕಿಸ್ಥಾನ, ಬಾಂಗ್ಲಾದೇಶಗಳ ಅಲ್ಪಸಂಖ್ಯಾಕ ಹಿಂದೂಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿ, ಕ್ರೈಸ್ತರಿಗೆ ಭಾರತದಲ್ಲಿ ಪೌರತ್ವ ಕೈಗೆಟುಕುವಂತಾಗಿದೆ.

ಒಂದೆಡೆ ವೈರಾಣುವಿಗೆ ಉತ್ತರ ನೀಡುತ್ತಲೇ ದೇಶವನ್ನು ಮೇಲೆತ್ತುವ ದಿಟ್ಟತನವನ್ನೂ ಸರಕಾರ ಪ್ರದರ್ಶಿಸು ತ್ತಿದೆ. ಆರೋಗ್ಯ ಸುರಕ್ಷೆ, ನಿರುದ್ಯೋಗ ನಿವಾರಣೆ, ಆರ್ಥಿಕ ಪುನಃಶ್ಚೇತನಕ್ಕಾಗಿ ಸ್ವಾವಲಂಬಿ ಭಾರತ ನಿರ್ಮಿಸಲು 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ ಜಾರಿಗೊಳಿಸಿದ್ದು, ದೇಶ ಹೊಸ ಮನ್ವಂತರಕ್ಕೆ ಜಿಗಿಯುತ್ತಿದೆ.

ಸ್ವದೇಶಿ ತಣ್ತೀ ಮಹಾತ್ಮ ಗಾಂಧೀಜಿ ಅವರ ಕಾಲಕ್ಕೇ ನಿಂತುಹೋದ ವಿಚಾರವಾಗಿತ್ತು. ಅದನ್ನು ಮತ್ತೆ ಮುನ್ನೆಲೆಗೆ ತಂದು, ಸ್ವದೇಶಿ ವಸ್ತುಗಳಿಗೆ ಮಾರುಕಟ್ಟೆ ಸ್ಥಾಪಿಸುವಲ್ಲಿಯೂ ಕೇಂದ್ರ ಸರಕಾರ ಮಹತ್ವದ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆತ್ಮನಿರ್ಭರ ಭಾರತದ ಅಡಿಪಾಯ ಕೂಡ ಸ್ವದೇಶಿ ತಣ್ತೀವೇ ಆಗಿದೆ.

ಇನ್ನೊಂದೆಡೆ ಭಾರತ ಜಾಗತಿಕವಾಗಿಯೂ ಬಲಿಷ್ಠಗೊಳ್ಳುತ್ತಿದೆ. ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವಲ್ಲಿಯೂ ಸಾಫ‌ಲ್ಯ ಕಂಡಿದೆ. ಪಾಕ್‌ನ ಉಗ್ರ ಚಟುವಟಿಕೆಗಳಿಗೆ ತಕ್ಕ ಉತ್ತರ ನೀಡುತ್ತ, ಚೀನದ ಗಡಿ ಕ್ಯಾತೆಗೂ ದಿಟ್ಟತನದಿಂದ ಪ್ರತಿಕ್ರಿಯಿಸುತ್ತ ರಾಷ್ಟ್ರೀಯ ಭದ್ರತೆಗೆ ಸರಕಾರ ಹೆಚ್ಚು ಒತ್ತು ಕೊಟ್ಟಿದೆ.

ಕೋವಿಡ್ 19 ಬಿಕ್ಕಟ್ಟಿಗೆ ದಿಟ್ಟ ಉತ್ತರ
ಕೋವಿಡ್ 19 ವೈರಾಣು ಭಾರತಕ್ಕೆ ಕಾಲಿಟ್ಟ ಮೇಲೆ ಸರಕಾರ ನಾನಾ ಸವಾಲುಗಳನ್ನು ಎದುರಿಸಿದೆ. ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದ ಭಾರತ ಒಮ್ಮೆಲೆ ಕುಗ್ಗಿದಂತಾಗಿದ್ದು ನಿಜವೇ ಆದರೂ ನಾನಾ ಸವಾಲುಗಳಿಗೆ ಉತ್ತರಿಸಲು ಮೋದಿ ಸರಕಾರ ಹಗಲಿರುಳು ಶ್ರಮಿಸುತ್ತಿದೆ. ಸೋಂಕು ಪ್ರಸರಣ ತಡೆಗಾಗಿ ಲಾಕ್‌ಡೌನ್‌,ತ್ವರಿತ ಆರೋಗ್ಯ ಪರೀಕ್ಷೆ, ಶ್ರಮಿಕ್‌ ರೈಲಿನ ವ್ಯವಸ್ಥೆ, ವಂದೇ ಭಾರತ ಯೋಜನೆಯಡಿ ಚಾರಿತ್ರಿಕ ಏರ್‌ಲಿಫ್ಟ್ ನಿರ್ವಹಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next