Advertisement
ಇನ್ನು ಎರಡನೇ ಅಲೆ ವೇಳೆಯಂತೂ ಮೊದಲ ಅಲೆಗಿಂತಲೂ ಹೆಚ್ಚು ಸಾವು ನೋವುಗಳನ್ನು ಇಡೀ ದೇಶ ನೋಡಿತು. ಇದಕ್ಕೆ ಕಾರಣ, ಕೊರೊನಾದ ರೂಪಾಂತರಿಯು ನೇರವಾಗಿ ಶ್ವಾಸಕೋಶಕ್ಕೇ ಸಮಸ್ಯೆ ಮಾಡಿದ್ದರಿಂದ ಉಸಿರಾಟದ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿತು. ಈ ಸಮಯದಲ್ಲಿಯೂ ಮೊದಲ ಅಲೆಗಿಂತಲೂ ಹೆಚ್ಚು ಸಾವು ನೋವುಗಳನ್ನು ಇಡೀ ದೇಶ ನೋಡಿತು.
Related Articles
Advertisement
ಒಂದು ವೇಳೆ ಈ ಮಗು ವೃತ್ತಿಪರ ಕೋರ್ಸ್ ಮತ್ತು ಉನ್ನತ ಶಿಕ್ಷಣಕ್ಕೆ ಶೈಕ್ಷಣಿಕ ಸಾಲ ಬೇಕಾದರೂ ಅದಕ್ಕೂ ಮೋದಿ ಕೇರ್ ಮೂಲಕವೇ ಸಹಾಯ ಸಿಗುತ್ತದೆ. ಅಲ್ಲದೆ, ಕೊರೊನಾ ಅವಧಿಯಲ್ಲಿ ಪೋಷಕರನ್ನು ಕಳೆದುಕೊಂಡ 18-23 ವರ್ಷದೊಳಗಿನ ಯುವಕರಿಗೂ ಸಹಾಯ ಸಿಗಲಿದ್ದು, ಇವರಿಗೆ ಮಾಸಿಕ ಸಹಾಯಧನ ಮತ್ತು 23 ವರ್ಷ ಪೂರೈಸುತ್ತಿದ್ದಂತೆ 10 ಲಕ್ಷ ರೂ. ಸಿಗಲಿದೆ.
ಕೊರೊನಾ ಅನಂತರದ ವಿದ್ಯಮಾನಗಳನ್ನು ಗಮನಿಸಿದರೆ, ಈ ಸೌಲಭ್ಯಗಳು ಅಗತ್ಯವಾಗಿ ಬೇಕಾದವುಗಳೇ ಆಗಿವೆ. ಏಕೆಂದರೆ ಇಂಥ ಸಂದರ್ಭದಲ್ಲಿ ಅನಾಥ ಮಕ್ಕಳ ಸಹಾಯಕ್ಕೆಂದು ಬರುವವರ ಸಂಖ್ಯೆ ತೀರಾ ಕಡಿಮೆ. ಈಗಂತೂ ಕೊರೊನಾ ನೋವಿಲ್ಲದ ಮನೆಯನ್ನು ಹುಡುಕುವುದೇ ಕಷ್ಟ ಎಂಬ ಸ್ಥಿತಿ ಇದೆ. ಸರಕಾರವೇ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅವರ ಸಹಾಯಕ್ಕೆ ಹೋಗುತ್ತಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಇದರ ಜತೆಯಲ್ಲೇ ಇಂಥ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಸೌಲಭ್ಯವನ್ನು ನೀಡಿದರೆ ಇನ್ನಷ್ಟು ಸಹಾಯವಾಗಬಹುದು. ತಂದೆ ಅಥವಾ ತಾಯಿ ಕಳೆದುಕೊಂಡ ಮಕ್ಕಳ ನೆರವಿಗೆ ಹೋದರೆ ಇನ್ನಷ್ಟು ಸಹಾಯ ಮಾಡಿದಂತೆ ಆಗುತ್ತದೆ.