ಚಿಕ್ಕಮಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುತ್ತಾರೆ ಎಂದು ರಾಜಗುರು, ಆಧ್ಯಾತ್ಮಿಕ ಗುರು ದ್ವಾರಕನಾಥ್ ಭವಿಷ್ಯ ನುಡಿದರು.
ಮಂಗಳವಾರ ದತ್ತಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಯಾರು ತಪ್ಪು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅವರಿಗೆ ವಿರೋಧ ಪಕ್ಷವೇ ಇಲ್ಲ. ಇದು ಮನುಷ್ಯ ಪ್ರಯತ್ನವಲ್ಲ, ದೈವಶಕ್ತಿ ಅವರಿಗೆ ಪುಣ್ಯ ಇದೆಯೋ ಗೊತ್ತಿಲ್ಲ. ವಿರೋಧ ಅಲೆಯೇ ಇಲ್ಲ ಎಂದರು.
ಮುಂದಿನ 75ವರ್ಷಗಳಲ್ಲಿ ರಾಷ್ಟ್ರವನ್ನು ಆಳುವ ಎರಡು ಶಕ್ತಿ ಇದೆ. ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಲ್ಲಂಘನೆ ಮಾಡುವುದಿಲ್ಲ. ದೇವರ ಇಚ್ಛೆ ಇದ್ದರೇ, ಅವರೇ ರಾಷ್ಟ್ರಪತಿ ಆಗಬಹುದು. ದೇಶಕ್ಕೆ ಒಳ್ಳೆಯದು ಆಗಬೇಕು ಎಂದ ಅವರು, ಸನಾತನ ಧರ್ಮ ಉಳಿಯಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವುದರಲ್ಲಿ ಸಂದೇಹವೇ ಇಲ್ಲ. ವಿರೋಧ ಪಕ್ಷ 2028ರಲ್ಲಿ ಗಟ್ಟಿಯಾಗಲಿದೆ. ವಿರೋಧ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸದ್ಯಕ್ಕೆ ಸರ್ಕಾರ ಬಿಳುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದೂವರೆಯುತ್ತಾರೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಉತ್ತಮ ಭವಿಷ್ಯವಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯನವರು ಕೂತಿದ್ದಾರೆ. ಕೂತವರಿಗೆ ತೊಂದರೆ ಕೊಡಬಾರದು. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಗೌರವವಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರ ಎಂಬ ಸಂಶಯ ಎಲ್ಲರಲ್ಲೂ ಇದೆ. ಮುಖ್ಯಮಂತ್ರಿ ಆಗಬೇಕಾದರೇ ಸುತ್ತಮುತ್ತ ಶುದ್ಧ ಮನಸ್ಸುಗಳನ್ನು ಇಟ್ಟುಕೊಂಡು ಶಾಸಕರ ವಿಶ್ವಾಸಗಳಿಸಬೇಕು. ಡಿ.ಕೆ.ಶಿವಕುಮಾರ್ ಹೆಸರು ಎಲ್ಲಡೆ ಗೊತ್ತಾಗಬೇಕಾದರೇ ಎಲ್ಲೆಡೆ ಸುತ್ತಾಡಬೇಕು. ಕಾರ್ಯಕರ್ತರ ವಿಶ್ವಾಸಗಳಿಸಬೇಕು ಎಂದು ಹೇಳಿದರು.
ಪ್ರಸ್ತುತ ಸಿದ್ದರಾಮಯ್ಯ ಅವರು ಬದಲಾವಣೆಯಾಗುತ್ತಾರೆಂಬುದು ಅಸಾಧ್ಯದ ಮಾತು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿ ಆರು ತಿಂಗಳು ಕಳೆದಿದೆ. ಅವರನ್ನು ಸುಮ್ಮನೆ ಬಿಡಬೇಕು. ಡಿ.ಕೆ.ಶಿವಕುಮಾರ್ ಬಗ್ಗೆ ಅತ್ಯಂತ ಪ್ರೀತಿ ಇದೆ. ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾರೆ. ರಾಜ್ಯ ಆಳುವುದಕ್ಕೆ ಅವಕಾಶವಿದೆ. ಸ್ವಲ್ಪ ಸಮಯಬೇಕು ಎಂದರು.