Advertisement

ಸಮಸ್ಯೆ ಇತ್ಯರ್ಥಕ್ಕೆ ಮೋದಿ-ಜಿನ್‌ಪಿಂಗ್‌ ಸಮರ್ಥ : ರಷ್ಯಾ ಅಧ್ಯಕ್ಷ ಪುಟಿನ್‌ ಅಭಿಮತ

07:24 PM Jun 05, 2021 | Team Udayavani |

ಸೇಂಟ್‌ ಪೀಟರ್ಸ್‌ಬರ್ಗ್‌ (ರಷ್ಯಾ):“ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಇಬ್ಬರೂ ಜವಾಬ್ದಾರಿಯುತ ನಾಯಕರಾಗಿದ್ದು, ಭಾರತ-ಚೀನಾ ನಡುವಿನ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಅವರಿಬ್ಬರೂ ಶಕ್ತರಾಗಿದ್ದಾರೆ. ಹಾಗಿರುವಾಗ, ಉಭಯ ದೇಶಗಳ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಯಾವುದೇ ತೃತೀಯ ಶಕ್ತಿಯ ಅಗತ್ಯವಿಲ್ಲ” ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದಾರೆ.

Advertisement

ಇತ್ತೀಚೆಗೆ ರೂಪಿತವಾಗಿರುವ ಕ್ವಾಡ್‌ ಒಕ್ಕೂಟದ ಬಗ್ಗೆ ಕೇಳಲಾದ ಪ್ರಶ್ನೆಗೆ ಸುದೀರ್ಘ‌ ಉತ್ತರ ಕೊಡುವಾಗ ಪುಟಿನ್‌ ಮೇಲಿನಂತೆ ತಿಳಿಸಿದ್ದಾರೆ. ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಟ್ರೇಲಿಯಾ ಸೇರಿ ಕ್ವಾಡ್‌ ರಚನೆ ಮಾಡಿಕೊಂಡಿದ್ದು, ಈ ಒಕ್ಕೂಟದಿಂದ ರಷ್ಯಾವನ್ನು ಹೊರಗಿಟ್ಟಿರುವುದಕ್ಕೆ ರಷ್ಯಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ, ಈ ಅಸಮಾಧಾನವು ರಷ್ಯಾ-ಭಾರತ ನಡುವಿನ ಬಾಂಧವ್ಯಕ್ಕೆ ಯಾವುದೇ ಚ್ಯುತಿ ತರಲಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :ಲಾಕ್ ಡೌನ್ ಅವಧಿಯಲ್ಲಿ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಸಂತಾನಾಭಿವೃದ್ಧಿ

ಹಾಗೆಯೇ, ಚೀನಾ-ಭಾರತ ನಡುವಿನ ಗಡಿ ಸಮಸ್ಯೆಯ ಬಗ್ಗೆಯೂ ಮಾತನಾಡಿರುವ ಅವರು, “ನನಗೆ ಚೀನಾ ಅಧ್ಯಕ್ಷರ ಹಾಗೂ ಭಾರತದ ಪ್ರಧಾನಿಯ ಗುಣಸ್ವಭಾವಗಳು ಗೊತ್ತಿದೆ. ಅವರಿಬ್ಬರೂ ಸಮರ್ಥ ನಾಯಕರು. ಹಾಗಾಗಿ, ಎರಡೂ ದೇಶಗಳ ಸಮಸ್ಯೆಗಳನ್ನು ಅವರೇ ನಿಭಾಯಿಸಬಲ್ಲರು” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next