Advertisement

ಮೋದಿ,ನಳಿನ್‌ ಇಬ್ಬರೂ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲ: ಇಬ್ರಾಹಿಂ ಕೋಡಿಜಾಲ್‌

09:58 PM Apr 11, 2019 | Sriram |

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಅವರಿಬ್ಬರೂ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫ‌ಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಆರೋಪಿಸಿದ್ದಾರೆ.

Advertisement

ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೇಂದ್ರ ಸರಕಾರ ಕಳೆದ ಚುನಾವಣೆ ವೇಳೆ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ; ಇಬ್ಬರೂ ಜನರನ್ನು ವಂಚಿಸಿ ಈಗ ಮತ್ತೆ ಅಧಿಕಾರ ಕೇಳುವ ಪರಿಸ್ಥಿತಿಗೆ ಇಳಿದಿದ್ದಾರೆ.

ಪ್ರಧಾನಿ ಜನಪರ ಆಡಳಿತ ನೀಡಲು ಇರುವುದೇ ಹೊರತು ಕೇವಲ ಭಾಷಣ ಮಾಡಲು ಅಲ್ಲ. ಜನರು ಇಂತಹ ಮರುಳು ಮಾತಿಗೆ ಬಲಿಯಾಗ ಬಾರದು ಎಂದು ತಿಳಿಸಿದರು.

ಪಂಪ್‌ವೆಲ್‌ ನೋಡಿ ಸಾಕು
ನಳಿನ್‌ ಕುಮಾರ್‌ ಸಂಸದರಾಗಿ ಕೆಲಸ ಮಾಡಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಅವರ ಕಾರ್ಯವೈಖರಿ ನೋಡಲು ಎಲ್ಲೂ ಹೋಗ ಬೇಕಿಲ್ಲ, ಪಂಪ್‌ವೆಲ್‌ಗೆ ಭೇಟಿ ನೀಡಿದರೆ ಸಾಕು. ಶಿರಾಡಿ ರಸ್ತೆಯನ್ನು ಆಸ್ಕರ್‌ ಫ‌ರ್ನಾಂಡಿಸ್‌ ಮಾಡಿಸಿದರು. ಆದರೆ ಅದರ ನಂತರದ ಕೆಲಸಗಳನ್ನು ಮಾಡಲು ನಳಿನ್‌ಗೆ ಸಾಧ್ಯವಾಗಿಲ್ಲ.

ವಿಜಯ ಬ್ಯಾಂಕ್‌ ಉಳಿಸಲಾಗಿಲ್ಲ
ಬಂಟ ಸಮುದಾಯದವರೇ ಆಗಿದ್ದುಕೊಂಡು ಜಿಲ್ಲೆಯ ವಿಜಯಾ ಬ್ಯಾಂಕ್‌ನ ಹೆಸರನ್ನೂ ಉಳಿಸಲು ಸಾಧ್ಯವಾಗಿಲ್ಲ. ಇಂತಹ ಎಂಪಿ ಯಾಕೆ ಎಂದು ಪ್ರಶ್ನಿಸಿದರು.

Advertisement

ಕಾಂಗ್ರೆಸ್‌ ಮುಖಂಡರಾದ ಬಿ.ಎಚ್‌. ಖಾದರ್‌, ನೀರಜ್‌ಪಾಲ್‌, ಪದ್ಮನಾಭ ನರಿಂಗಾನ, ಸದಾಶಿವ ಉಳ್ಳಾಲ್‌, ನಝೀರ್‌ ಬಜಾಲ್‌ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಡಳಿತಕ್ಕೆ ಸರ್ವಾಧಿಕಾರದ ಅಡಿಪಾಯ
ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ವಾಜಪೇಯಿ, ನರೇಂದ್ರ ಮೋದಿವರೆಗೆ ಎಲ್ಲ ಪ್ರಧಾನ ಮಂತ್ರಿಗಳ ಕಾರ್ಯವೈಖರಿಯನ್ನು ನಾನು ನೋಡಿ ಬೆಳೆದಿದ್ದೇನೆ. ಮೋದಿ ಅವರನ್ನು ಹೊರತುಪಡಿಸಿ ಉಳಿದೆಲ್ಲ ಪ್ರಧಾನಿಗಳು ದೇಶದ ಸಂವಿಧಾನದ ಆಶಯವಾದ ವಿವಿಧತೆಯಲ್ಲಿ ಏಕತೆ ಸಂದೇಶಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ನರೇಂದ್ರ ಮೋದಿ ಆಡಳಿತಕ್ಕೆ ಸರ್ವಾಧಿಕಾರದ ಅಡಿಪಾಯ ಹಾಕಿದ್ದಾರೆ. ದಿಢೀರನೆ ಏಕಪಕ್ಷೀಯವಾಗಿ ಆದೇಶಗಳನ್ನು ಜಾರಿಗೊಳಿಸುವ ಮೂಲಕ ಜನರು ಸಾಕಷ್ಟು ಬವಣೆ ಪಡುವಂತೆ ಮಾಡಿದ್ದಾರೆ ಎಂದು ಕೋಡಿಜಾಲ್‌ ಇಬ್ರಾಹಿಂ ಅವರು ಆಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next