Advertisement

ಮೋದಿ-ಅಖೀಲೇಶ್‌ ಮಾತಿನ ಸಮರ

01:47 AM May 02, 2019 | sudhir |

ಹೊಸದಿಲ್ಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದಿತ ಸ್ಥಳದಿಂದ ಕೇವಲ 25 ಕಿ.ಮೀ. ದೂರದ ಪ್ರದೇಶಗಳಲ್ಲಿ ಬುಧವಾರ ಬಿಜೆಪಿ ಹಾಗೂ ಮಹಾಮೈತ್ರಿ ಪಕ್ಷಗಳ ಮುಖಾಮುಖೀಯಾಗಿವೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ನಡೆಸಿದರೆ, ಇದಾದ ಎರಡೇ ಗಂಟೆಗಳಲ್ಲಿ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿ ಕೂಟದ ರ್ಯಾಲಿ ನಡೆದಿದೆ. ಮೋದಿ ಅವರು ಮೈತ್ರಿಕೂಟದ ಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದರೆ, ಮೈತ್ರಿಕೂಟವು ಮೋದಿಯವರಿಗೆ ತಿರುಗೇಟು ನೀಡಿದೆ.

Advertisement

ಗೋಸೈಗಂಜ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, “ಮಹಾ ಕಲಬೆರಕೆಯ ಪಕ್ಷಗಳು ಬಡವರಿಗಾಗಿ ಏನನ್ನೂ ಮಾಡಿಲ್ಲ. ಬಾಬಾಸಾಹೇಬ್‌ ಅಂಬೇಡ್ಕರ್‌ ಹಾಗೂ ರಾಮ್‌ ಮನೋಹರ್‌ ಲೋಹಿಯಾ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿವೆ. ಅಂಬೇಡ್ಕರ್‌ ಹೆಸರನ್ನು ಬಳಸುವ ಮಾಯಾವತಿಯವರು, ಅವರ ಸಿದ್ಧಾಂತಕ್ಕೆ ವಿರುದ್ಧವಾಗಿಯೇ ನಡೆದಿದ್ದಾರೆ. ಅದೇ ರೀತಿ ಸಮಾಜವಾದಿ ಪಕ್ಷವು ಪ್ರತಿ ಹಂತದಲ್ಲೂ ಲೋಹಿಯಾ ಹೆಸರು ಹೇಳಿಕೊಂಡು, ಲೋಹಿಯಾ ಗೌರವಕ್ಕೇ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

ಎನ್‌ಡಿಎ ಬಗ್ಗೆ ಏನನ್ನುತ್ತೀರಿ?: ಪ್ರಧಾನಿ ಹೇಳಿಕೆಗೆ ತಮ್ಮ ರ್ಯಾಲಿಯಲ್ಲಿ ತಿರುಗೇಟು ನೀಡಿರುವ ಎಸ್ಪಿ ನಾಯಕ ಅಖೀಲೇಶ್‌ ಯಾದವ್‌, “ಎಸ್‌ಪಿ-ಬಿಎಸ್ಪಿ ಮೈತ್ರಿಯನ್ನು ನೀವು ಮಹಾಕಲಬೆರಕೆ ಎನ್ನುವುದಾದರೆ, ಎನ್‌ಡಿಎ ಬಗ್ಗೆ ಏನನ್ನುತ್ತೀರಿ’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯು ಲೋಕಸಭೆ ಚುನಾವಣೆಗೆ 38 ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹಾಗಿದ್ದರೂ ಅವರು ಎಸ್‌ಪಿ-ಬಿಎಸ್ಪಿ ಮೈತ್ರಿಯನ್ನು ಮಹಾಕಲಬೆರಕೆ ಎನ್ನುತ್ತಿದ್ದಾರೆ.

ಮೋದಿಯವರೇ, ಎರಡು ಪಕ್ಷಗಳ ಮೈತ್ರಿಯಿಂದ ಸಮಸ್ಯೆ ಎನ್ನುವುದಾದರೆ, 38 ಪಕ್ಷಗಳಿರುವ ನಿಮ್ಮ ಮೈತ್ರಿ ಏನಾಗಬಹುದು ಎಂದು ಕಲ್ಪಿಸಿಕೊಳ್ಳಿ ಎಂದೂ ಅಖೀಲೇಶ್‌ ಹೇಳಿದ್ದಾರೆ. ಮೋದಿ ಅವರ ಚಾಯ್‌ವಾಲಾ ಆಗಿ ಬಂದು, ಜನರನ್ನು ಮೂರ್ಖರನ್ನಾಗಿಸಿದರು. ಆ ಟೀಯಲ್ಲಿ ಯಾವ ರೀತಿಯ ಮಾದಕ ವಸ್ತು ಇತ್ತು ಎನ್ನುವುದು ನನಗಂತೂ ಗೊತ್ತಿಲ್ಲ. ಮೊದಲ 4 ಹಂತಗಳಲ್ಲೂ ನಮ್ಮ ಪರವೇ ಅಲೆ ಇರುವುದನ್ನು ನಾವು ಗಮನಿಸಿದ್ದೇವೆ ಎಂದೂ ಅಖೀಲೇಶ್‌ ಹೇಳಿದ್ದಾರೆ.

ಕಾಂಗೆŠಸ್‌ ನನ್ನನ್ನು ಕೊಲ್ಲುವ ಕನಸು ಕಾಣುತ್ತಿದೆ
ಮಧ್ಯಪ್ರದೇಶದ ಇಟಾರ್ಸಿ ಮತ್ತು ಉತ್ತರಪ್ರದೇಶದ ಕೌಶಂಬಿಯಲ್ಲೂ ಪ್ರಧಾನಿ ಮೋದಿ ಬುಧವಾರ ರ್ಯಾಲಿ ನಡೆಸಿದ್ದಾರೆ. ಇಟಾರ್ಸಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಅಪ್ರಾಮಾಣಿಕ ಪಕ್ಷ ಎಂದು ಕರೆದಿದ್ದಾರೆ.

Advertisement

ಕಾಂಗ್ರೆಸ್‌ನವರಿಗೆ ಮೋದಿ ಬಗ್ಗೆ ಎಷ್ಟು ದ್ವೇಷವಿದೆ ಎಂದರೆ, ಅವರು ನನ್ನನ್ನು ಕೊಲ್ಲುವ ಕನಸನ್ನೂ ಕಾಣುತ್ತಿದ್ದಾರೆ. ಆದರೆ, ಮಧ್ಯಪ್ರದೇಶ ಮತ್ತು ಭಾರತದ ಜನರು ನನ್ನೊಂದಿಗಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ ಎಂದೂ ಮೋದಿ ಹೇಳಿದ್ದಾರೆ. ಇದೇ ವೇಳೆ ವಿವಾದಿತ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ ಹೆಸರು ಪ್ರಸ್ತಾವಿಸಿದ ಮೋದಿ, “ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ಇದೇ ಝಾಕಿರ್‌ ನಾಯ್ಕನನ್ನು ಭುಜದ ಮೇಲೆ ಹೊತ್ತು, ಕುಣಿದಿದ್ದರು’ ಎಂದು ಆರೋಪಿಸಿದ್ದಾರೆ. ಉತ್ತರಪ್ರದೇಶದ ಕೌಶಂಬಿ ಯಲ್ಲಿ ಪ್ರಚಾರ ಭಾಷಣ ಮಾಡಿದ ಮೋದಿ, “ನೆರೆರಾಷ್ಟ್ರಗಳಲ್ಲಿರುವ ಉಗ್ರರ ಫ್ಯಾಕ್ಟರಿಗಳು ಭಾರತದಲ್ಲಿ ದುರ್ಬಲ ಸರಕಾರ ಬರಲೆಂದು ಬಯಸುತ್ತಿವೆ’ ಎಂದಿದ್ದಾರೆ. ಇದೇ ವೇಳೆ, ಕುಂಭಮೇಳವನ್ನು ಅಚ್ಚುಕಟ್ಟಾಗಿ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್‌ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “1954ರಲ್ಲಿ ಜವಾಹರಲಾಲ್‌ ನೆಹರೂ ಪ್ರಧಾನಿಯಾಗಿದ್ದಾಗ ಕುಂಭಮೇಳದಲ್ಲಿ ಕಾಲು¤ಳಿತ ಸಂಭವಿಸಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಈ ಸುದ್ದಿ ಬಹಿರಂಗವಾಗದಂತೆ ಸುದ್ದಿಯನ್ನೇ ಮುಚ್ಚಿಡಲಾಗಿತ್ತು. ಮೃತರ ಕುಟುಂಬಕ್ಕೆ ಪರಿಹಾರವನ್ನೂ ನೀಡಿರಲಿಲ್ಲ’ ಎಂದೂ ಆರೋಪಿಸಿದ್ದಾರೆ.

ಮೋದಿಗೆ ಕ್ಲೀನ್‌ಚಿಟ್‌; ಕಾಂಗೆ‹ಸ್‌ಗೆ ಸಿಟ್ಟು
ಮಧ್ಯಪ್ರದೇಶದ ವಾರ್ಧಾದಲ್ಲಿ ಪ್ರಧಾನಿ ಮೋದಿ ಮಾಡಿದ್ದ ಭಾಷಣಕ್ಕೆ ಸಂಬಂಧಿಸಿ ಅವರಿಗೆ ಕ್ಲೀನ್‌ಚಿಟ್‌ ನೀಡಿದ ಚುನಾವಣಾ ಆಯೋಗದ ನಿರ್ಧಾರವನ್ನು ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಖಂಡಿಸಿವೆ. ಈ ಕುರಿತು ಬುಧವಾರ ಮಾತನಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ, “ಚುನಾವಣಾ ಆಯೋಗದ ಮಾಡೆಲ್‌ ಕೋಡ್‌ ಆಫ್ ಕಂಡಕ್ಟ್ ಎನ್ನುವುದು ಈಗ ಮೋದಿ ಕೋಡ್‌ ಆಫ್ ಕಂಡಕ್ಟ್ ಆಗಿರುವುದು ಇದರಿಂದ ಸ್ಪಷ್ಟವಾಗಿದೆ. ಪದೇ ಪದೆ ನೀತಿ ಸಂಹಿತೆ ಉಲ್ಲಂ ಸುತ್ತಿದ್ದರೂ ಪ್ರಧಾನಿ ಮೋದಿ ಅವರಿಗೆ ರಾಜಾರೋಷವಾಗಿ ಇದನ್ನು ಮುಂದುವರಿಸಲು ಅವಕಾಶ ಮಾಡಿಕೊಡಲಾಗುತ್ತಿರುವುದು ಅತ್ಯಂತ ಖಂಡನಾರ್ಹ ವಿಚಾರ’ ಎಂದು ಹೇಳಿದ್ದಾರೆ. ಇದೇ ವೇಳೆ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮಾತನಾಡಿ, ಚುನಾವಣಾ ಆಯೋಗದ ಇಂಥ ನಿರ್ಧಾರವು ಸಂಚುಕೋರರನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ ಎಂದಿದ್ದಾರೆ.

ಭಾರತದಲ್ಲೂ ಬುರ್ಖಾ ನಿಷೇಧಕ್ಕೆ ಆಗ‹ಹ
ಶ್ರೀಲಂಕಾದಲ್ಲಿ ಉಗ್ರ ದಾಳಿ ನಡೆದ ಬೆನ್ನಲ್ಲೇ ಬುರ್ಖಾ ನಿಷೇಧಿಸುತ್ತಿದ್ದಂತೆಯೇ ಈಗ ಭಾರತದಲ್ಲೂ ಬುರ್ಖಾ ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಸಂಬಂಧ ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರಸ್ತಾವಿಸಲಾಗಿದ್ದು, ಇದಕ್ಕೆ ವಿಶ್ವ ಹಿಂದೂ ಪರಿಷತ್‌ ಕೂಡ ಬೆಂಬಲಿಸಿದೆ. ಆದರೆ ಶಿವಸೇನೆ ಈ ಬೇಡಿಕೆಯಿಂದ ಅಂತರ ಕಾಯ್ದುಕೊಂಡಂತೆ ಕಂಡುಬರುತ್ತಿದೆ. ಇನ್ನೊಂದೆಡೆ ಅಖೀಲ ಭಾರತ ಮುಸ್ಲಿಂ ಲೀಗ್‌ (ಎಐಎಂಐಎಂ) ಮುಖಂಡ ಅಸಾದುದ್ದೀನ್‌ ಒವೈಸಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾವಣನ ಲಂಕೆಯಲ್ಲಿ ಬುರ್ಖಾ ನಿಷೇಧ ಮಾಡಲಾಗಿದೆ. ರಾಮನ ಅಯೋಧ್ಯೆಯಲ್ಲಿ ಇದನ್ನು ಯಾವಾಗ ನಿಷೇಧಿಸಲಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಗೆ ನಮ್ಮ ಪ್ರಶ್ನೆಯಾಗಿದೆ. ಮುಖ ಮುಚ್ಚಿಕೊಂಡು ಓಡಾಡುವವರು ದೇಶದ ಭದ್ರತೆಗೆ ಭೀತಿ ಉಂಟು ಮಾಡಬಹುದಾಗಿರುತ್ತದೆ.

ಮುಖ ಮುಚ್ಚಿಕೊಂಡು ಓಡಾಡಿದರೆ ವ್ಯಕ್ತಿಯನ್ನು ಗುರುತಿಸಲು ಭದ್ರತಾ ಸಿಬಂದಿಗೆ ಕಷ್ಟವಾಗುತ್ತದೆ ಎಂದು ಸಾಮ್ನಾದಲ್ಲಿ ಪ್ರಸ್ತಾವಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಸಂಜಯ್‌ ರಾವತ್‌, ತಕ್ಷಣಕ್ಕೆ ನಿಷೇಧಿಸಬೇಕು ಎಂದು ನಾವು ಆಗ್ರಹಿಸುತ್ತಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಶ್ರೀಲಂಕಾ ಈ ಕ್ರಮ ಕೈಗೊಂಡಿದೆ. ಕೆನಡಾ ಹಾಗೂ ಫ್ರಾನ್ಸ್‌ನಲ್ಲೂ ಇದೇ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದಕ್ಕೆ ವಿಎಚ್‌ಪಿ ಬೆಂಬಲ ವ್ಯಕ್ತಪಡಿಸಿದ್ದು, ಈ ಕುರಿತು ಮಾತನಾಡಿದ ವಿಎಚ್‌ಪಿ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌ ಬುರ್ಖಾ ಕಲ್ಪನೆ ಹಳೆಯ ದಾಗಿದೆ. ಇದು ಪುರುಷರು ಮತ್ತು ಮಹಿಳೆಯರ ಸಮಾನತೆಯನ್ನು ನಾಶ ಮಾಡುತ್ತದೆ. ಈ ಚಳವಳಿ ಮುಸ್ಲಿಮರಿಂದಲೇ ಆರಂಭವಾಗಬೇಕು ಎಂದಿದ್ದಾರೆ.

ಬಿಜೆಪಿ ವಿರೋಧ: ಈ ಆಗ್ರಹಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಭಾರತದಲ್ಲಿ ಬುರ್ಖಾ ನಿಷೇಧದ ಅಗತ್ಯವಿಲ್ಲ ಎಂದು ಬಿಜೆಪಿ ವಕ್ತಾರ ಜಿವಿಎಲ್‌ ನರಸಿಂಹ ರಾವ್‌ ಹೇಳಿದ್ದಾರೆ.

ಒವೈಸಿ ವಿರೋಧ: ಸಂವಿಧಾನದಲ್ಲಿ ವ್ಯಕ್ತಿಯ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕು ಇದೆ. ಶಿವಸೇನೆಯ ಈ ಬೇಡಿಕೆಯು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಇದನ್ನು ಗಮನಿಸಬೇಕು ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ. ಶಿವಸೇನೆಯ ನಾಯಕರಿಗೆ ಸಂವಿಧಾನದ ಬಗ್ಗೆ ತಿಳಿವಳಿಕೆ ಇಲ್ಲ. ನಮ್ಮ ವೈಯಕ್ತಿಕ ಆಯ್ಕೆ ನಮ್ಮ ಮೂಲಭೂತ ಹಕ್ಕು ಎಂದು ಅವರು ಹೇಳಿದ್ದಾರೆ.

ಮತ ಒಡೆಯುವುದಿಲ್ಲ: ಪ್ರಿಯಾಂಕಾ
ಎಸ್‌ಪಿ, ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ ಮಹಾಘಟಬಂಧನದ ಮತಗಳನ್ನು ಕಾಂಗ್ರೆಸ್‌ ಒಡೆಯುತ್ತದೆ ಎಂಬುದು ಸುಳ್ಳು. ಬದಲಿಗೆ ಬಿಜೆಪಿಗೆ ನಾವು ಆಘಾತ ನೀಡುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ಬಿಜೆಪಿಗೆ ಹಾನಿ ಮಾಡಬಲ್ಲಂತಹ ಅಭ್ಯರ್ಥಿಗಳನ್ನೇ ನಾವು ಕಣಕ್ಕಿಳಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ. ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಹೆದರಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೆದರುವಂತಿದ್ದರೆ ಮನೆಯಲ್ಲಿ ಕೂರುತ್ತಿದ್ದೆ. ಒಳ್ಳೆಯದನ್ನು ಮಾಡಬೇಕೆಂದು ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಕತ್ತೆ ಮೇಲೇರಿ ಸಂಕಷ್ಟ ತಂದುಕೊಂಡ!
ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಬಿಹಾರದ ಮಣಿ ಭೂಷಣ್‌ ಶರ್ಮಾ(44) ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಅವರು ಕತ್ತೆ ಮೇಲೆ ಕುಳಿತುಕೊಂಡು ಬಂದು ಉಮೇದುವಾರಿಕೆ ಸಲ್ಲಿಸಿದ್ದರು. ಮುಖ್ಯ ವಾಹಿನಿಯ ರಾಜಕಾರಣಿಗಳು ಜನರನ್ನು ಕತ್ತೆಗಳಂತೆ ಮೂರ್ಖರು ಎಂದು ಭಾವಿ ಸಿದ್ದಾರೆ ಎಂಬುದನ್ನು ತೋರಿಸಿಕೊಡಲು ಹೀಗೆ ಮಾಡಿದ್ದರು. ಆದರೆ, ಪ್ರಾಣಿ ಹಿಂಸೆ ತಡೆ ಕಾಯ್ದೆಯನ್ವಯ ಶರ್ಮಾ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಈಗ ಈ ಕತ್ತೆಯೇ ಶರ್ಮಾಗೆ ತಲೆನೋವು ತಂದಿದೆ.

ಪುಲ್ವಾಮಾ: ಮೋದಿಗೆ ಕ್ಲೀನ್‌ಚಿಟ್‌
ಮಹಾರಾಷ್ಟ್ರದ ಲಾತೂರ್‌ನಲ್ಲಿ ಪ್ರಚಾರ ರ್ಯಾಲಿ ವೇಳೆ ಪುಲ್ವಾಮಾ ಹಾಗೂ ಬಾಲಕೋಟ್‌ ದಾಳಿ ಬಗ್ಗೆ ಪ್ರಸ್ತಾವಿಸಿದ್ದ ಪ್ರಧಾನಿ ಮೋದಿಯವರಿಗೆ ಚುನಾವಣಾ ಆಯೋಗ ಬುಧವಾರ ಕ್ಲೀನ್‌ಚಿಟ್‌ ನೀಡಿದೆ. ಲಾತೂರ್‌ನಲ್ಲಿ ಮಾತನಾಡಿದ್ದ ಮೋದಿ, “ಮೊದಲ ಬಾರಿ ಮತ ಚಲಾಯಿಸುವವರೆಲ್ಲರೂ ನಿಮ್ಮ ಮತಗಳನ್ನು ಬಾಲಕೋಟ್‌ ವೈಮಾನಿಕ ದಾಳಿ ನಡೆಸಿದ ವೀರ ಯೋಧರಿಗೆ ಮತ್ತು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡಬೇಕು’ ಎಂದು ಹೇಳಿದ್ದರು. ಪ್ರಚಾರದ ವೇಳೆ ಸಶಸ್ತ್ರ ಪಡೆಗಳನ್ನು ಬಳಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ಈ ಕುರಿತು ಬುಧವಾರ ನಿರ್ಧಾರ ಪ್ರಕಟಿಸಿದ ಆಯೋಗ, ಮೋದಿ ಹೇಳಿಕೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ ಎಂದು ಹೇಳಿದೆ.

ಸಾಧ್ವಿ ಪ್ರಜ್ಞಾಗೆ 72 ಗಂಟೆ ನಿಷೇಧ
ಭೋಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ಗೆ 72 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್‌ ಕರ್ಕರೆ ಬಗ್ಗೆ ಹಾಗೂ ಬಾಬರಿ ಮಸೀದಿ ಧ್ವಂಸಗೊಳಿಸಿದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ. ನಿಮ್ಮ ಹೇಳಿಕೆಯನ್ನು ನಾವು ಕಟು ಪದಗಳಿಂದ ಖಂಡಿಸುತ್ತೇವೆ ಮತ್ತು ಭವಿಷ್ಯದಲ್ಲಿ ಇಂಥ ದುರ್ವ ರ್ತನೆ ತೋರದಂತೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದೂ ಆಯೋಗ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next